Ultimate magazine theme for WordPress.

ಬಿ.ಎಸ್ ಯಡಿಯೂರಪ್ಪ ತನ್ನ ಅಭಿಮಾನಿಗೆ ಕೊಟ್ಟಿದ್ದು 5 ಲಕ್ಷ ಅಲ್ಲ ನಿಜವಾಗಿಯೂ ಕೊಟ್ಟಿದ್ದು ಎಷ್ಟು ಗೊತ್ತೆ

0 3

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಈ ವಿಷಯವನ್ನು ತಿಳಿದ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದ ಯಡಿಯೂರಪ್ಪನವರು ಅಭಿಮಾನಿಯ ಮನೆಗೆ ತೆರಳಿ ಪರಿಹಾರವನ್ನು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಎಂಬಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಅಭಿಮಾನಿ ರವಿ ಎಂಬುವವರು ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾದರು. ಈ ವಿಷಯ ತಿಳಿದ ಬಿ. ಎಸ್ ಯಡಿಯೂರಪ್ಪನವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು ಮತ್ತು ತಾನೆ ಖುದ್ದಾಗಿ ಗ್ರಾಮಕ್ಕೆ ತೆರಳಿ ಸಂತಾಪ ಸೂಚಿಸುವುದಾಗಿ ಹೇಳಿದ್ದರು ಅದರಂತೆ ಇದೀಗ ನಿನ್ನೆ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಚಾಮರಾಜನಗರದ ಗುಂಡ್ಲುಪೇಟೆಗೆ ಬಂದು ರವಿ ಅವರ ಮನೆಗೆ ಭೇಟಿ ನೀಡಿದರು.

ಚಾಮರಾಜನಗರಕ್ಕೆ ಬಂದ ಯಡಿಯೂರಪ್ಪ ಅವರಿಗಾಗಿ ಅಭಿಮಾನಿಗಳು ಬೈಕ್ ರ್ಯಾಲಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು ಆದರೆ ಯಡಿಯೂರಪ್ಪ ಅವರು ಬೈಕ್ ರ್ಯಾಲಿ ಮಾಡುವುದು ಬೇಡ ಎಂದು ಹೇಳಿದರು ಹಾಗೆಯೇ ಅವರು ಹಾರ-ತುರಾಯಿಗಳ ಸ್ವಾಗತ ನನಗೆ ಬೇಡ ಎಂದು ತಮ್ಮ ಕಾರ್ಯದರ್ಶಿಗಳು ಹಾಗೂ ಅಭಿಮಾನಿಗಳಲ್ಲಿ ಹೇಳಿದ್ದಾರೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಯಡಿಯೂರಪ್ಪ ಅವರನ್ನು ನೋಡಲು ನೆರೆದಿದ್ದರು.

ಚಾಮರಾಜನಗರದ ಗುಂಡ್ಲುಪೇಟೆಯ ಬೊಮ್ಮಲಾಪುರದ ರವಿ ಎನ್ನುವವರು ಬಿಜೆಪಿ ಕಾರ್ಯಕರ್ತನಾಗಿ ಅವನ ಕಾರ್ಯವೈಖರಿಯಿಂದ ಊರಿನಲ್ಲಿ ಅವನನ್ನು ರಾಜಾಹುಲಿ ಎಂದೇ ಕರೆಯುತ್ತಿದ್ದರು. ರವಿ ಅವರು ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯಾಗಿದ್ದು ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ರಾಜೀನಾಮೆ ಕೊಡುವುದಾಗಿ ಘೋಷಣೆ ಮಾಡಿದ ತಕ್ಷಣ ರವಿ ಅವರು ದುಃಖಕ್ಕೆ ಒಳಗಾಗಿದ್ದರು, ತಮ್ಮ ಸ್ನೇಹಿತರೊಂದಿಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ರಾಜಭವನದಿಂದ ಹೊರಗೆ ಬರುತ್ತಿದ್ದಂತೆ ರವಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಇದರಿಂದ ಇಡೀ ಊರು ದುಃಖತಪ್ತವಾಗಿದೆ.

ರವಿ ಅವರ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರು ಯಡಿಯೂರಪ್ಪನವರ ಬಳಿ ತಮ್ಮ ದುಃಖವನ್ನು ಹೇಳಿಕೊಂಡರು. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ರವಿ ಅವರು ಇಲ್ಲದಿರುವುದು ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಯಡಿಯೂರಪ್ಪನವರು ರವಿ ಅವರ ಕುಟುಂಬದವರಿಗೆ ಐದು ಲಕ್ಷ ರೂಪಾಯಿ ನಗದು ಪರಿಹಾರ ನೀಡಿದ್ದಾರೆ ಅಲ್ಲದೆ ಅವರು ಇನ್ನೂ 5 ಲಕ್ಷ ರೂಪಾಯಿ ಕಳುಹಿಸುತ್ತೇನೆ ಹಾಗೂ ಮನೆ ಕಟ್ಟಿಸಿ ಕೊಡುತ್ತೇನೆ ಎಂಬ ಆಶ್ವಾಸನೆ ನೀಡಿದ್ದಾರೆ.

ನಂತರ ಅವರು ಇನ್ನು ಮುಂದೆ ಯಾರು ಈ ರೀತಿಯ ಕಾರ್ಯಕ್ಕೆ ಕೈ ಹಾಕಬಾರದು, ಅಭಿಮಾನ ಇರುವುದು ಒಳ್ಳೆಯದು ಆದರೆ ಅಭಿಮಾನ ಅತಿರೇಕಕ್ಕೆ ಹೋಗಬಾರದು ಎಂಬ ಬುದ್ಧಿ ಮಾತನ್ನು ಹೇಳಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖದ ವಿಷಯವಾಗಿದ್ದು, ಅಭಿಮಾನ ಇರಲಿ ಆದರೆ ಅಭಿಮಾನದಿಂದ ಆತ್ಮಹತ್ಯೆಗೆ ಶರಣಾಗಬಾರದು ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ.

Leave A Reply

Your email address will not be published.