Kodi Mutt Swamiji Bhavishya: ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆಯ ಕಾವು ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿದೆ. ಹೀಗಾಗಿ ಈ ಬಾರಿ ರಾಜ್ಯದ (Karnataka State) ಅಧಿಕಾರದ ಚುಕ್ಕಾಣಿಯನ್ನು ಯಾರೆಲ್ಲಾ ಹಿಡಿಯಲಿದ್ದಾರೆ ಎಂಬ ಕುರಿತಂತೆ ಸಾಕಷ್ಟು ಚರ್ಚೆಗಳು ಹಾಗೂ ಗೊಂದಲಗಳು ಕೂಡ ನಡೆಯುತ್ತಿವೆ.
ರಾಷ್ಟ್ರ ರಾಜಕೀಯದಲ್ಲಿ ಇರುವಂತಹ ದೊಡ್ಡ ಮಟ್ಟದ ನಾಯಕರು ಕೂಡ ಕರ್ನಾಟಕ (Karnataka) ರಾಜ್ಯಕ್ಕೆ ಬಂದು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ (Rode Show) ಅಥವಾ ಪ್ರಚಾರ ಕಾರ್ಯದಲ್ಲಿ ಭರದಿಂದ ಪಾಲ್ಗೊಳ್ಳುತ್ತಿರುವುದು ಕರ್ನಾಟಕ ಚುನಾವಣೆ ಯಾವ ಮಟ್ಟದಲ್ಲಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ ಎಂಬುದನ್ನು ಹೇಳಬಹುದಾಗಿದೆ. ನರೇಂದ್ರ ಮೋದಿ (Narendra Modi) ಹಾಗೂ ರಾಹುಲ್ (Rahul Gandhi) ಗಾಂಧಿ ಅವರಂತಹ ನಾಯಕರು ಕೂಡ ದಿನೇ ದಿನೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಇದರ ನಡುವೆ ಕೋಡಿಮಠದ ಸ್ವಾಮೀಜಿಗಳು ಕೂಡ ಈ ಬಾರಿಯ ಚುನಾವಣೆ ಬಗ್ಗೆ ತಮ್ಮದೇ ಆದಂತಹ ಭವಿಷ್ಯವನ್ನು ನುಡಿಯುವ ಮೂಲಕ ಮತ್ತಷ್ಟು ಸುದ್ದಿಗೆ ಬಂದಿದ್ದಾರೆ. ಈಗಾಗಲೇ ನೀವೆಲ್ಲರೂ ಗಮನಿಸಬಹುದು ಕೋಡಿಮಠದ ಸ್ವಾಮೀಜಿಗಳು ಸಾಕಷ್ಟು ಬಾರಿ ಭವಿಷ್ಯವನ್ನು ಹೇಳಿದ್ದು ಅದು ನಿಜ ಕೂಡ ಆಗಿರುವುದು ಅವರ ಮಾತಿನ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಹುಟ್ಟುವಂತೆ ಕಾರಣವಾಗಿದೆ. ಹಾಗಿದ್ದರೆ ಈ ಬಾರಿಯ ಚುನಾವಣೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.
ಹೌದು ಮಿತ್ರರೇ ಕೋಡಿಮಠದ (Kodi Mutt Swamiji) ಸ್ವಾಮೀಜಿಗಳ ಪ್ರಕಾರ ಈ ಬಾರಿ ಯಾವುದೇ ಸಮ್ಮಿಶ್ರ ಸರ್ಕಾರ ಬರುವುದಿಲ್ಲ ಬದಲಾಗಿ ಒಂದೇ ಒಂದು ಪಕ್ಷ ಸ್ಪಷ್ಟ ಬಹುಮತವನ್ನು ಪಡೆದು ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂಬುದಾಗಿ ಭವಿಷ್ಯವನ್ನು ನಡೆದಿದ್ದಾರೆ. ಸ್ವಾಮೀಜಿಗಳ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಇದನ್ನೂ ಓದಿ..ಸತತ 5 ಬಾರಿ MLA ಆದ್ರೂ ಸೈಕಲ್ನಲ್ಲೆ ಓಡಾಟ, ಹಳೆಯ ಚಿಕ್ಕ ಮನೆಯಲ್ಲೇ ವಾಸ