inspiring story in Kannada: ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಬೆರೆಯುವದೆಂದರೆ ಸಾಮಾನ್ಯದ ಮಾತಲ್ಲ ಮತ್ತು MLA ಆಗಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕೆಲವರು ಇನ್ನೂ ಒಂದು ಬಾರಿ (MLA) ಅದರಂತೂ ತಮ್ಮ ಮಕ್ಕಳ ಮೊಮ್ಮಕ್ಕಳ ಜೀವನಕ್ಕೆ ಸಾಕಾಗುವಷ್ಟು ಹಣವನ್ನ (Money) ಗಳಿಕೆ ಮಾಡುತ್ತಾರೆ, ಆದರೆ ಇನ್ನೂ ಕೆಲವರು ಸ್ವಲ್ಪ ವಿಭಿನ್ನವಾಗಿರುತ್ತಾರೆ ಮತ್ತು ಅವರು ಬೇರೆ ವ್ಯಕ್ತಿಗಳಿಗೆ ಮಾದರಿಯಾಗಿರುತ್ತಾರೆ ಎಂದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ. ಈಗ ನಾವು ಹೇಳ ಹೊರಟಿರುವ ವ್ಯಕ್ತಿ ಬರೋಬ್ಬರಿ 5 ಬಾರಿ MLA ಅಂದ್ರೆ 25 ವರ್ಷ ಅಧಿಕಾರದಲ್ಲಿ ಇದ್ದವರು.ಹಾಗಿದ್ದು ಅವರು ಈಗ ಹೇಗೆ ಜೀವನ ನೆಡೆಸುತ್ತಿದ್ದಾರೆ ಎಂದು ತಿಳಿದರೆ ನೀವು ನಿಜಕ್ಕೂ ಅಚ್ಚರಿ ಆಗುವುದಂತೂ ಪಕ್ಕಾ.

ಎಂತವರಿಗೆ ವೋಟು (Vote) ಹಾಕಬೇಕೆಂದು ಅರಿತುಕೊಳ್ಳಿ. ಪ್ರಸ್ತುತ ರಾಜಕಾರಣದಲ್ಲಿ (politics) ಹಣವನ್ನ ಹಾಕಿ, ಹಣವನ್ನ ತೆಗೆಯುವುದೇ ಒಂದು ವ್ಯವಹಾರವೆ ಆಗಿ ಹೋಗಿದೆ. ಚುನಾವಣೆ (Election) ಸಂಧರ್ಭದಲ್ಲಿ ಕೂಡ ಪ್ರತಿ ಅಭ್ಯರ್ಥಿ ಹಣ ವ್ಯಯಿಸಿ, ಗೆದ್ದ ನಂತರ ಪುನಃ ಹಣ ಗುಡ್ಡೆ ಹಾಕುವಲ್ಲಿ ನಿರತರಾಗಿರುತ್ತಾರೆ ಹೊರತು, ಜನರಿಗೆ ಬೇಕಾದ ಒಳ್ಳೆ ಕೆಲಸಗಳನ್ನಂತು ಮಾಡೋದಿಲ್ಲ ತೀರಾ ಸಾಮಾನ್ಯರಲ್ಲಿ ಸಾಮಾನ್ಯರ ರೀತಿ ಬದುಕುವ ಶಾಸಕರು ಕಾಣ ಸಿಗುವುದು ಅತಿ ವಿರಳ.ಆದರೆ ಇವರು 5 ಬಾರಿ MLA ಆದರೂ ಒಂಚೂರು ಅಹಂ, ದರ್ಪ, ಇಲ್ಲದೆ ಇರುವವರು ನಾವು ಹೇಳ ಹೊರಟಿರುವವರು.

ಗುಮ್ಮಡಿ ನರಸಯ್ಯ (Gummadi Narasaiah) ಒಂದು ಸಾಮಾನ್ಯ ಬುಡಕಟ್ಟು ಜನಾಂಗದ ವ್ಯಕ್ತಿ. ಅವರು ಓದಿದ್ದು 5 ನೆ ತರಗತಿ ಮಾತ್ರ, ಆದರೆ ಅವರಲ್ಲಿ ಜನರಿಗೆ ಒಳ್ಳೆಯದು ಮಾಡಬೇಕೆಂಬ ತುಡಿತ ಕಡಿಮೆ ಆಗಿರಲಿಲ್ಲ 5 ಬಾರಿ ಶಾಸಕರಾಗಿದ್ದರೂ ಕೂಡ,  ಹಳೆಯದಾದ ಚಿಕ್ಕ ಮನೆಯಲ್ಲೇ ವಾಸವಾಗಿದ್ದಾರೆ ಸೈಕಲ್ ಅಲ್ಲಿ ಓಡಾಟ ಮಾಡ್ತಾರೆ, ದೂರದ ಪ್ರಯಾಣ ಮಾಡ್ಬೇಕಾದ್ರೆ ಬಸ್ ಅಲ್ಲೇ ಪ್ರಯಾಣ ಮಾಡ್ತಾರೆ, ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ.ಇವ್ರು ತೆಲಂಗಾಣದ ಖಮ್ಮಮ್ ಜಿಲ್ಲೆಯ (Khammam District, Telangana) ಯಲಂದು ವಿಧಾನಸಭಾ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ 25 ವರ್ಷ ಸೇವೆ ಸಲ್ಲಿಸಿದ್ದಂತ ಶಾಸಕರು.

ಗುಮ್ಮಡಿ ನರಸಯ್ಯ (Gummadi Narasaiah) ಅವರು ಕಡಿಮೆ ಓದಿದ್ದರೂ ಕೂಡ ಜನರಿಗೆ ನೇರವಾಗುವಂತಹ ಕೆಲಸ ಮಾಡಬೇಕೆಂದು ಚುನಾವಣೆಗೆ ಸ್ಪರ್ಧೆ ಮಾಡಿ 1983 ರಲ್ಲಿ ಮೊದಲನೆಯದಾಗಿ ಶಾಸಕರಾಗಿ ಆಯ್ಕೆ ಆಗುತ್ತಾರೆ. ಇವರು ಶಾಸಕರಾಗಿದ್ದಂತಹ ಸಂದರ್ಭದಲ್ಲಿ ಮನೆ ಕಟ್ಟಿಸಿಕೊಳ್ಳದೆ, ಕಾರು ಆಸ್ತಿ ಎಂದು ತಮಗಾಗಿ ಮಾಡಿ ಕೊಳ್ಳದೆ. ಜನರ ಸೇವೆಯಲ್ಲಿ ನಿರಂತರವಾಗಿ ಸಕ್ರಿಯೆರಾಗಿದ್ದರು

ಇದನ್ನೂ ಓದಿ..ತಿಂಗಳಿಗೆ 1 ಲಕ್ಷದವರೆಗೆ ಆದಾಯ ಕೊಡುವ ಈ ಪೇಪರ್ ಪ್ಲೇಟ್ ಬ್ಯುಸಿನೆಸ್ ಕುರಿತು ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!