Karnataka 2nd PUC Supplementary Exam Time Table: ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!.

0 8

ದಿನಾಂಕ 22-05-2023ರಿಂದ 02-06-2023ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು (2nd PUC Supplementary Exam) ನಡೆಸಲು ಮಂಡಳಿಯು ನಿರ್ಧರಿಸಿದೆ. ಹಾಗಾಗಿ ಮೇ.22 ರಿಂದ ಪರೀಕ್ಷೆ ಆರಂಭಗೊಂಡು, ಜೂನ್ 2 ರಂದು ಕೊನೆಗೊಳ್ಳಲಿದೆ. ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ;
ದಿನಾಂಕ 22-05-2023, ಸೋಮವಾರ – ಕನ್ನಡ, ಅರೇಬಿಕ್
ದಿನಾಂಕ 23-05-2023, ಮಂಗಳವಾರ – ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ
ದಿನಾಂಕ 24-05-2023, ಬುಧವಾರ – ಇಂಗ್ಲೀಷ್
ದಿನಾಂಕ 25-05-2023, ಗುರುವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ.
ದಿನಾಂಕ 26-05-2023, ಶುಕ್ರವಾರ – ಇತಿಹಾಸ, ಸಂಖ್ಯಾಶಾಸ್ತ್ರ

ದಿನಾಂಕ 27-05-2023, ಶನಿವಾರ – ಹಿಂದಿ
ದಿನಾಂಕ 29-05-2023, ಸೋಮವಾರ – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ದಿನಾಂಕ 30-05-2023, ಮಂಗಳವಾರ – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ.

ದಿನಾಂಕ 31-05-2023, ಬುಧವಾರ – ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ.
ದಿನಾಂಕ 01-06-2023, ಗುರುವಾರ – ತರ್ಕಶಾಸ್ತ್ರ ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ. ದಿನಾಂಕ 02-06-2023, ಶುಕ್ರವಾರ – ಅರ್ಥಶಾಸ್ತ್ರ, ಜೀವಶಾಸ್ತ್ರ.

ಇದನ್ನೂ ಓದಿ..Kodi Mutt Swamiji: ಈ ಬಾರಿ ರಾಜ್ಯದಲ್ಲಿ ಈ ಪಕ್ಷ ಬಹುಮತ ಬರಲಿದೆಯಂತೆ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು

Leave A Reply

Your email address will not be published.