ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ರೈತರು ಸಲ್ಲಿಸಿದ ಅರ್ಜಿ ಯಾವ ಸ್ತಿತಿಯಲ್ಲಿದೆ, ಸಲ್ಲಿಸಿದ ಅರ್ಜಿ ಸ್ವೀಕೃತಿ ಆಗಿದೆಯೊ ಇಲ್ಲವೆ ಎಂಬುದನ್ನು ಹಾಗೂ ಗ್ರಾಮದಿಂದ ಎಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಮೊಬೈಲ್ ನಲ್ಲಿ ಆನಲೈನ್ ನಲ್ಲಿ ನೋಡುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬಹಳಷ್ಟು ರೈತರು ಕಿಸಾನ್ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ರೈತರು ಈ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಮೊಬೈಲ್ ನಲ್ಲಿ ನೋಡಬಹುದು. ಹೇಗೆಂದರೆ ಕರ್ನಾಟಕ ಸರ್ಕಾರದ ಫಾರ್ಮರ್ ರಿಜಿಸ್ಟ್ರೇಷನ್ ಎಂಡ ಯುನಿಪೈಡ್ ಬೆನಿಫಿಶರಿ ಇನ್ ಪೊರಮೇಷನ್ ಸಿಸ್ಟಮ್ ಪಿ.ಎಮ್ ಕಿಸಾನ್ ಈ ವೆಬ್ ಸೈಟ್ ನಲ್ಲಿ ಚೆಕ್ ಸ್ಟೇಟಸ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವಾಗ ಐ.ಡಿ ನಂಬರ್ ಕೊಟ್ಟಿದ್ದರೆ ಆ ನಂಬರ್ ಹಾಕಬೇಕು ಇಲ್ಲವಾದರೆ ಆಧಾರ ನಂಬರ್ ಹಾಕಿ ಸರ್ಚ್ ಕ್ಲಿಕ್ ಮಾಡಿದರೆ ಸಲ್ಲಿಸಿದ ಅರ್ಜಿಯ ಡೀಟೇಲ್ಸ್ ಮತ್ತು ಸ್ಟೇಟಸ್ ಕಾಣಿಸುತ್ತದೆ. ಅಪ್ರೂವಡ್ ಆಗಿದೆ ಅಂತಿರುತ್ತದೆ.
ಊರಿನವರು ಅರ್ಜಿ ಹಾಕಿದ್ದು ಅವರ ಸ್ಟೇಟಸ್ ನೋಡಬೇಕಾದರೆ ಎಬೌಟ್ ಪಿ. ಎಮ್. ಕಿಸಾನ್ ಪಕ್ಕದಲ್ಲಿ ರಿಪೋರ್ಟ್ ಅಂತ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಲ್ಯಾಂಡ್ ನೊಟ್ ಡಿಕ್ಲೇರ್ಡ್ ರಿಪೋರ್ಟ್ ಅದನ್ನು ಕ್ಲಿಕ್ ಮಾಡಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಸೆಲೆಕ್ಟ್ ಮಾಡಿ ವ್ಯೂವ್ಸ ಅಂತಿರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಆ ಗ್ರಾಮದಲ್ಲಿ ಎಷ್ಟು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಅವರ ಸಂಪೂರ್ಣ ಡೀಟೇಲ್ಸ್ ಹೆಸರು, ಸರ್ವೆ ನಂಬರ್ ಮಾಹಿತಿಯನ್ನು ನೋಡಬಹುದಾಗಿದೆ. ಈ ಮಾಹಿತಿಯನ್ನು ಎಲ್ಲ ರೈತರಿಗೂ ತಿಳಿಸಿ ಮೊಬೈಲ್ ನಲ್ಲಿ ಆನ್ ಲೈನ್ ಮೂಲಕ ಕಿಸಾನ್ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಟೇಟಸ್ ನೋಡಬಹುದು.