ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಸೂಕ್ತ ಆಹಾರಗಳಿವು

0 0

ಸಾಮಾನ್ಯವಾಗಿ ಕೆಲವರಲ್ಲಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಅನ್ನೋದು ಇರುತ್ತದೆ ಇದಕ್ಕೆ ಪರಿಹಾರ ನೀಡುವಂತ ಒಂದಿಷ್ಟು ಆಹಾರಗಳನ್ನು ಈ ಮೂಲಕ ತಿಳಿದುಕೊಳ್ಳೋಣ. ಕಿಡ್ನಿಯಲ್ಲಿ ಉಪ್ಪಿನಂಶದಿಂದ ಉಂಡೆ ರೀತಿಯಲ್ಲಿ ಗಟ್ಟಿಯಾಗಿರುತ್ತದೆ ಇದಕ್ಕೆ ಕಿಡ್ನಿ ಸ್ಟೋನ್ ಮೂತ್ರ ಕಲ್ಲು ಎಂಬುದಾಗಿ ಕರೆಯಲಾಗುತ್ತದೆ.

ನಾವುಗಳು ಪ್ರತಿದಿನ ಸೇವಿಸುವಂತ ಆಹಾರಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ. ಹಾಗಾಗಿ ನೈಸರ್ಗಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಿರುವಂತ ಈ ಆಹಾರಕ್ರಮವನ್ನು ಅನುಸರಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಇರೋದಿಲ್ಲ.

ಆಹಾರಕ್ರಮಗಳು: ಬೇಯಿಸಿದ ಈರುಳ್ಳಿಯನ್ನು ಬೆಳ್ಳಗೆ ಹಾಗೂ ರಾತ್ರಿ ವೇಳೆ ನಿಯಮಿತವಾಗಿ ತಿನ್ನೋದ್ರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ಹೊಡೆದು ಮೂತ್ರದ ಮಾರ್ಗವಾಗಿ ಹೊರಬರುತ್ತದೆ.

ಇನ್ನು ಬಾಳೆದಿಂಡು ಕೂಡ ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಕಾರಿಯಾಗಿದೆ. ಬಾಳೆ ದಿಂಡನ ಪಲ್ಯ ಅಥವಾ ಬಾಳೆ ದಿಂಡಿನ ಜ್ಯುಸ್ ಸೇವನೆಯಿಂದ ಅಷ್ಟೇ ಅಲ್ಲದೆ ಪ್ರತಿದಿನ ೫ ರಿಂದ ೬ ಲೀಟರ್ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿವಾರಯಾಗುತ್ತದೆ.

ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯೋದ್ರಿಂದ ಸಾವಿರಾರು ರೋಗಗಳಿಂದ ದೂರ ಉಳಿಯಬಹುದು ಅನ್ನೋದನ್ನ ಹೇಳಲಾಗುತ್ತದೆ ಹಾಗಾಗಿ ಎಳನೀರು ಕುಡಿಯಬೇಕು ಇದು ಎಲ್ಲ ಬೇನೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ದಾಳಿಂಬೆ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಣ್ಣಾಗಿದೆ ಇನ್ನು ಈ ದಾಳಿಂಬೆ ಹಣ್ಣಿನ ಜ್ಯುಸ್ ಹಾಗೂ ತುಳಸಿ ರಸವನ್ನು ಸೇವಿಸುವುದರಿಂದ ಇದರಲ್ಲಿವೆ ಆಮ್ಲ ಅಂಶ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲದು.

Leave A Reply

Your email address will not be published.