ಕೆಜಿಎಫ್ ಬಾಬು, ಗುಜರಿ ಬಾಬು ಎಂಬೆಲ್ಲಾ ಹೆಸರುಗಳಿಂದ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಸರಾಗಿದ್ದು, ಸಾವಿರಾರು ಕೋಟಿ ಒಡೆಯರಾದ ಯೂಸಫ್ ಅವರು ಬಡ ಕುಟುಂಬದಲ್ಲಿ ಹುಟ್ಟಿ ಇಂದು 4,000 ಕೋಟಿ ಆಸ್ತಿಯ ಒಡೆಯರಾಗಿದ್ದು ಒಂದು ಅದ್ಭುತ ಸಂಗತಿಯಾಗಿದೆ. ಹಾಗಾದರೆ ಅವರ ಜೀವನದ ಹಾದಿಯನ್ನು ಈ ಲೇಖನದಲ್ಲಿ ನೋಡೋಣ.
ಸ್ಕ್ರಾಪ್ ಬಾಬು, ಗುಜರಿ ಬಾಬು, ಕೆಜಿಎಫ್ ಬಾಬು ಎಂದು ಕರೆಸಿಕೊಳ್ಳುವ ಅವರು ಅನಕ್ಷರಸ್ಥರು, ಒಂದಕ್ಷರದ ಜ್ಞಾನವು ಅವರಿಗಿಲ್ಲ ಕೋಲಾರದ ಗಲ್ಲಿಗಳಲ್ಲಿ ಗುಜರಿ ಕೆಲಸ ಮಾಡುತ್ತಿದ್ದರು. ಕೋಲಾರ ಮೂಲದ ಇವರ ಹೆಸರು ಯೂಸಫ್ ಷರೀಫ್. ಅವರದು ಅತ್ಯಂತ ಬಡ ಕುಟುಂಬ ಅವರ ತಂದೆ ತಾಯಿಗೆ ಒಟ್ಟು ಹದಿನಾಲ್ಕು ಜನ ಮಕ್ಕಳು ಯೂಸಫ್ ಷರೀಫ್ ಅವರು ಹಿರಿಯವರು.
ಸಂಸಾರ ಸಾಗಿಸಲು ಬಹಳ ಕಷ್ಟಪಡುತ್ತಿದ್ದರು ಅವರದೊಂದು ಸಣ್ಣ ಬೇಕರಿ ಇತ್ತು, ಅದರಿಂದ ಹೆಚ್ಚು ಲಾಭವನ್ನು ಕಾಣದೆ ನಷ್ಟವನ್ನು ಕಾಣುತ್ತಿದ್ದರು. ಯೂಸಫ್ ಅವರ ತಂದೆ ಬೇಕರಿ ಜೊತೆ ಆಟೋರಿಕ್ಷಾವನ್ನು ಚಲಾಯಿಸಿ ಜೀವನ ಸಾಗಿಸುತ್ತಿದ್ದರು. ನಾಲ್ಕನೆ ತರಗತಿಯವರೆಗೆ ಓದಿದರು ನಂತರ ಅವರಿಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಕೋಲಾರದ ಕೆಜಿಎಫ್ ಬಳಿ ಸಿಕ್ಕಸಿಕ್ಕ ಕೂಲಿ ಕೆಲಸ ಮಾಡುತ್ತಿದ್ದರು. ಅವರು ಜೀವನ ನಡೆಸಲು ಮಾಡದೆ ಇರುವ ಕೆಲಸವೆ ಇಲ್ಲ. ಕೋಲಾರದ ಚಿನ್ನದ ಗಣಿಯ ಧೂಳಿನ ನೆರಳಿನಲ್ಲಿ ಜೀವನ ಸಾಗಿಸುತ್ತಿರುವ ಸಾಮಾನ್ಯರಲ್ಲಿ ಯೂಸಫ್ ಅವರ ಕುಟುಂಬ ಕೂಡ ಒಂದು.
ಕೋಲಾರದ ಗಡಿಯೊಳಗಿನ ಸ್ಕ್ರಾಪ್ ಪೋಸ್ಟ್ ಗಳನ್ನು ಹೈಕೋರ್ಟ್ ತನ್ನ ವಶಕ್ಕೆ ಪಡೆದುಕೊಂಡು ಸಾರ್ವಜನಿಕ ಹರಾಜು ಇಟ್ಟಿತು ಅವುಗಳನ್ನು ಯೂಸಫ್ ಖರೀದಿ ಮಾಡುತ್ತಾರೆ. 2001ರಲ್ಲಿ ಸುಮಾರು 7 ಲಕ್ಷ ಸರ್ಕಾರಿ ಬೆಲೆಗೆ ಸುಮಾರು 21 ಟ್ಯಾಂಕ್ ಗಳನ್ನು ಖರೀದಿ ಮಾಡಿದರು ಅದಕ್ಕಾಗಿ ತಮ್ಮ ತಾಯಿಯ ಬಳಿ ಇರುವ ಎಲ್ಲಾ ಆಭರಣಗಳನ್ನು ಮಾರಬೇಕಾಗಿ ಬಂತು. ಅದರಿಂದ 1.30 ಲಕ್ಷ ರೂಪಾಯಿ ಹಣ ಸಿಕ್ಕಿತು ಉಳಿದ ಹಣಕ್ಕಾಗಿ ಸಾಲ ಮಾಡಿದರು. ಅವರು ಎರಡು ದಶಕಗಳಲ್ಲಿ ಸಾವಿರಾರು ಕೋಟಿ ಒಡೆಯರಾಗಿದ್ದಾರೆ.
ಈಗ ಒಂದು ವರ್ಷಕ್ಕೆ ನೂರಾರು ಕೋಟಿ ತೆರಿಗೆಯನ್ನು ಕಟ್ಟುತ್ತಿದ್ದಾರೆ. 10,000ರೂಪಾಯಿ ದುಡಿಯಲು ಬಹಳ ಕಷ್ಟ ಪಡಬೇಕು ಆದರೆ ಕೋಟಿ ಹಣವನ್ನು ಒಂದು ನಿಮಿಷದಲ್ಲಿ ದುಡಿಯಬಹುದು ಇದು ನನ್ನ ಅನುಭವದ ಮಾತು ಎಂದು ಬಾಬು ಅವರು ಹೇಳಿಕೊಂಡಿದ್ದಾರೆ. ಕೆಜಿಎಫ್ ಬಾಬು ಅವರ ಒಟ್ಟು ಆಸ್ತಿಯ ಮೊತ್ತ ನಾಲ್ಕು ಸಾವಿರ ಕೋಟಿ.
ತ್ಯಾಜ್ಯಗಳನ್ನು ಸ್ವಚ್ಛ ಮಾಡುವಾಗ ಟ್ಯಾಂಕ್ ಒಂದರಲ್ಲಿ ಅಂಗೈಯಗಲದ ಕಲ್ಲೊಂದು ಸಿಗುತ್ತದೆ ಅದನ್ನು ಪಾಲಿಶ್ ಮಾಡಿದಾಗ ಕಪ್ಪು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿತ್ತು. ಆಗ ಯೂಸಫ್ ಅವರಿಗೆ ಅಚ್ಚರಿಯಾಯಿತು ಅದು ಶುದ್ಧ ಚಿನ್ನವಾಗಿತ್ತು. ಅದೇ ರೀತಿ 20 ಟ್ಯಾಂಕ್ ಗಳನ್ನು ಸ್ವಚ್ಛ ಮಾಡಿದಾಗ 13 ಕೆಜಿಯಷ್ಟು ಚಿನ್ನ ದೊರೆಯಿತು. ನಂತರ ಅವರು 2002ರಲ್ಲಿ ಹೈಕೋರ್ಟ್ ನ ಪ್ರತಿ ಹರಾಜಿನಲ್ಲೂ ಲಾಭದಾಯಕ ವಸ್ತು ಅಥವಾ ಜಾಗಗಳನ್ನು ಖರೀದಿ ಮಾಡಿ ಅವುಗಳ ಮೇಲೆ ಬಂಡವಾಳ ಹಾಕುತ್ತಿದ್ದರು. ನಂತರ ಅದಕ್ಕಿಂತ ಮೂರು ನಾಲ್ಕು ಪಟ್ಟು ಹೆಚ್ಚು ಆದಾಯ ಗಳಿಸುತ್ತಿದ್ದರು.
ಆ ಟ್ಯಾಂಕ್ ಗಳನ್ನು ಹಳೆಯ ಕಾಲದಲ್ಲಿ ಅಂದರೆ ಬ್ರಿಟಿಷರ ಕಾಲದಲ್ಲಿ ಚಿನ್ನವನ್ನು ಫ್ಯೂರಿಫೈ ಮಾಡಲು ಬಳಸುತ್ತಿದ್ದರು. ಚಿನ್ನವನ್ನು ಕಾಯಿಸಿ ಸೋಸಿ ಅದರ ಮೂಲಕ ಶುದ್ಧ ಚಿನ್ನವನ್ನು ಪಡೆಯಲಾಗುತ್ತಿತ್ತು. ಗಣಿ ಕಾರ್ಯ ಸ್ಥಗಿತಗೊಂಡ ನಂತರ ಈ ಕೆಲಸವೆಲ್ಲ ಸರ್ಕಾರದ ಪಾಲಾಯಿತು. ಇವುಗಳನ್ನು ಹೈಕೋರ್ಟ್ ಹರಾಜಿಗೆ ಇಟ್ಟಿತು ಚಿನ್ನದ ಕಲ್ಲುಗಳು ಟ್ಯಾಂಕ್ ಗಳಿಗೆ ಅಂಟಿಕೊಂಡಿತ್ತು ಮತ್ತು ಕಪ್ಪು ಬಣ್ಣಕ್ಕೆ ತಿರುಗಿತ್ತು, ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಬಾಬುರವರು ಟ್ಯಾಂಕ್ ಕ್ಲೀನ್ ಮಾಡುವಾಗಲೆ ಸತ್ಯ ಗೊತ್ತಾಯಿತು.
ಬಂಗಾರ ಸಿಕ್ಕ ಸಮಯದಲ್ಲಿ ಮೈಸೂರಿನಲ್ಲಿ ಅವರ ಹೆಂಡತಿಗೆ ಹೆಣ್ಣು ಮಗು ಜನಿಸಿತ್ತು. ನಂತರ ಬಾಬು ಅವರು ಫ್ಯಾಕ್ಟರಿಯನ್ನು ಖರೀದಿ ಮಾಡಿದರು ಇದರಿಂದ ಅವರಿಗೆ ಮೂರು ಕೋಟಿ ರೂಪಾಯಿ ಆದಾಯ ಲಭಿಸಿತು. ಇಂದು ಯೂಸಫ್ ಅವರು ಹತ್ತು ಹಲವು ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಓನರ್ ಆಗಿದ್ದಾರೆ. ಕೋಲಾರದಾದ್ಯಂತ ತನ್ನ ಸಮಾಜಸೇವೆಗಳಿಂದ ಮನೆಮಾತಾಗಿದ್ದಾರೆ. ಇಂದು ಅವರು ರಾಜ್ಯದ ಕೋಟ್ಯಾಧೀಶ್ವರರ ಸಾಲಿನಲ್ಲಿ ಒಬ್ಬರಾಗಿದ್ದಾರೆ.
ಆಗಸ್ಟ್ 27 ಭಾನುವಾರದಂದು ಬೆಂಗಳೂರಿನ ರಸ್ತೆಯ ಮಧ್ಯದಲ್ಲಿ ಒಂದು ಕಾರನ್ನು ಪೊಲೀಸರು ತಡೆಯುತ್ತಾರೆ. ಯೂಸಫ್ ಷರೀಫ್ ಅವರು ಅಮಿತಾಬಚ್ಚನ್ ಅವರ ಅಭಿಮಾನಿ, 2019ರಲ್ಲಿ ಅಮಿತಾಬಚ್ಚನ್ ಅವರಿಂದ ಈ ಕಾರನ್ನು ಖರೀದಿಸಿದ್ದಾರೆ. 6 ಕೋಟಿ ಬೆಲೆಬಾಳುವ ಈ ಕಾರು ಈಗಲೂ ಅಮಿತಾಬಚ್ಚನ್ ಅವರ ಹೆಸರಿನಲ್ಲಿದೆ ಇದನ್ನು ಬದಲಾಯಿಸಲು ಒಪ್ಪದ ಯೂಸಫ್ ಷರೀಫ್ ಅಮಿತಾಬಚ್ಚನ್ ಅವರ ಹೆಸರನ್ನೆ ಕಾರಿನ ಮಾಲೀಕರಾಗಿ ಉಳಿಸಿಕೊಂಡಿದ್ದಾರೆ, ಇದು ಅವರಿಗೆ ಹೆಮ್ಮೆಯ ವಿಷಯ.
ಅವರ ಬಳಿ ಫಾರ್ಚುನರ್ ಆಡಿ, ಬೆಂಜ್ ಕಾರುಗಳಿವೆ, ಬೆಂಗಳೂರಿನಲ್ಲಿ ಎರಡು ಭವ್ಯ ಬಂಗಲೆಗಳಿವೆ. ಒಂದೊಂದು ಬಂಗಲೆಯು 30- 40 ಕೋಟಿ ಬೆಲೆಬಾಳುತ್ತದೆ. ಅವರೊಬ್ಬ ರೌಡಿ, ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾರೆ ಎಂಬೆಲ್ಲಾ ಅನೇಕ ಆರೋಪಗಳಿವೆ ಆದರೆ ಕೆಲವರ ಪಾಲಿಗೆ ಅವರು ರಿಯಲ್ ಹೀರೊ, ಬಂಗಾರದ ಮನುಷ್ಯ. ಬಹಳಷ್ಟು ವಿದ್ಯಾರ್ಥಿಗಳಿಗೆ ಯೂಸಫ್ ಸ್ಕಾಲರ್ ಶಿಪ್ ವ್ಯವಸ್ಥೆ ಕಲ್ಪಿಸಿದ್ದಾರೆ. ನಾನು ಪಟ್ಟ ಕಷ್ಟ ಯಾರೂ ಪಡಬಾರದು ಎಂಬುದು ಅವರ ಆಶಯವಾಗಿದೆ. ಏನು ಓದದೆ ಇಂದು ಸಾವಿರಾರು ಕೋಟಿ ಒಡೆಯರಾದ ಅವರು ಬದುಕಿಗೆ ವಿದ್ಯೆ ಅವಶ್ಯಕ ಎಂಬುದನ್ನು ಒಪ್ಪುತ್ತಾರೆ.
ಯೂಸಫ್ ಅವರು ತಮ್ಮ ಗಳಿಕೆಯ 25%ರಷ್ಟು ಹಲವು ಸಮಾಜ ಸೇವಾ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ. ಕಡಿಮೆ ವರ್ಷದಲ್ಲಿ ಸಾವಿರಾರು ಕೋಟಿ ಸಂಪಾದಿಸಿದವರಲ್ಲಿ ಅವರು ಮೊದಲನೆಯವರಾಗಿದ್ದಾರೆ. ಇತ್ತೀಚೆಗೆ ಅವರ ಆಸ್ತಿಯ ಮೇಲೆ ಐಟಿ ಧಾಳಿಯಾಗಿತ್ತು ಅವರು ತಮ್ಮ ಆಸ್ತಿಗೆ ಕಾನೂನಿನ ದಾಖಲಾತಿಗಳನ್ನು ತೋರಿಸಿದ್ದಾರೆ. ಅವರ ವಾಚ್ 1 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಏನು ಇಲ್ಲದೆ ಇಂದು ಎಲ್ಲವೂ ತಮ್ಮ ಬಳಿ ಇರುವಂತೆ ಮಾಡಿಕೊಂಡಿರುವ ಕೆಜಿಎಫ್ ಬಾಬು ಅವರು ಮನಸೊಂದಿದ್ದರೆ ಮಾರ್ಗವಿದೆ ಎಂದು ಸಾಧಿಸಿ ತೋರಿಸಿದ್ದಾರೆ.