ಕೆಲವೊಂದು ಗ್ರಾಮ ಊರುಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅವುಗಳ ಆಧಾರದ ಮೇಲೆ ಊರಿನ ಹೆಸರನ್ನು ಕೂಡ ಇಟ್ಟಿರುತ್ತಾರೆ. ಆದ್ರೆ ನಾವು ಈ ಮೂಲಕ ತಿಳಿಯಲು ಹೊರಟಿರುವಂತ ಸ್ಟೋರಿ ಏನಪ್ಪಾ ಅಂದ್ರೆ ಈ ಊರಿನಲ್ಲಿ 400 ಕ್ಕೂ ಹೆಚ್ಚು ಮಕ್ಕಳು ಅವಳಿ ಮಕ್ಕಳಿದ್ದಾರೆ, ಈ ಗ್ರಾಮ ಎಲ್ಲಿದೆ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ.

ಕೇರಳ ರಾಜ್ಯದ ಕೊಡಿನ್ಹಿ ಅನ್ನೋ ಗ್ರಾಮದಲ್ಲಿ 4000 ಕ್ಕೂ ಹೆಚ್ಚು ಮಕ್ಕಳು ಅವಳಿ ಮಕ್ಕಳುಗಳಿವೆ ಅನ್ನೋದು ಗೊತ್ತಾಗಿದೆ. ಹೌದು ಕೇರಳದ ಹಳ್ಳಿ ಕೊಡಿನ್ಹಿಯಲ್ಲಿ ಅವಳಿ ಮಕ್ಕಳ ಸರಾಸರಿ 45ರಷ್ಟಿದೆ, ಇಲ್ಲಿ ಏನು ವಿಶೇಷತೆ ಅಂದ್ರೆ ರಾಷ್ಟ್ರೀಯ ಸರಾಸರಿ ಪ್ರಕಾರ ಪ್ರತಿ 1000 ಹೆರಿಗೆಯಲ್ಲಿ 9 ಅವಳಿ ಮಕ್ಕಳು ಜನಿಸಬೇಕು. ಆದ್ರೆ ಈ ಹಳ್ಳಿಯಲ್ಲಿ ಸರಾಸರಿ 45ರಷ್ಟಿದೆ. ಹಾಗಾಗಿ ಇದಕ್ಕೆ ಏನು ಅನ್ನೋದು ಕೂಡ ಸರಿಯಾಗಿ ಗೊತ್ತಿಲ್ಲ.

ಇದರ ಕುರಿತು ಕೆಲವರು ಹೇಳುವ ರೀತಿ ನೋಡಿದ್ರೆ ಇದು ವಂಶವಾಹಿ ಸಮಸ್ಯೆ ಎಂದು ಕೆಲವರು, ಊರಿನ ನೀರು ಅಥವಾ ಗಾಳಿಯಲ್ಲಿರುವ ಯಾವುದೋ ಅಂಶದಿಂದ ಈ ಸಮಸ್ಯೆ ಕಾಡುತ್ತಿದೆ ಎಂದು ಮತ್ತೆ ಕೆಲವರು ಹೇಳುತ್ತಾರೆ. ‘ಅವಳಿ ಮಕ್ಕಳು ಹಾಗೂ ಬಂಧುಗಳ ಬಳಗ’ ಎಂಬ ಸಂಘವೂ ಈ ಊರಿನಲ್ಲಿ ಇದೆ. 2008ರಲ್ಲಿ ಈ ಊರಿನಲ್ಲಿ ಅವಳಿಗಳ ಸಂಖ್ಯೆ 280 ಜೊತೆ ಇತ್ತು. ಈಗ ಏರಿಕೆಯಾಗಿ, 400 ರಷ್ಟು ತಲುಪಿದೆ.

ಇನ್ನು ದೇಶದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳು ಹೊಂದಿರುವ ಹಳ್ಳಿ ಎಂದು ಈ ಕೊಡಿನ್ಹಿ ಗ್ರಾಮ ಗುರುತಿಸಿಕೊಂಡಿದೆ. ಈ ಅವಳಿ ಮಕ್ಕಳ ಕುರಿತಾಗಿ ಕೆಲವೊಂದು ಸಂಶೋಧನೆ ಅಧ್ಯಯನ ನಡೆಸುತ್ತಿವೆ.
ಇಲ್ಲಿ ಹೆಚ್ಚು ಅವಳಿ ಮಕ್ಕಳು ಇವೆ ಎಂಬುದಾಗಿ ಗೊತ್ತಾಗಿದ್ದು ಹೇಗೆ? ಅನ್ನೋದನ್ನ ನೋಡುವುದಾದರೆ ಸಮೀರಾ ಹಾಗೂ ಫಮೀನಾ ಎಂಬ ಬಾಲಕಿಯರು 8ನೇ ತರಗತಿಗೆ ಸೇರಿದಾಗ, ತಮ್ಮ ತರಗತಿಯಲ್ಲೇ 8 ಅವಳಿಗಳಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ಬಳಿಕ ಇತರ ತರಗತಿ ಯಲ್ಲೂ ಅವಳಿಗಳು ಕಂಡುಬಂದರು. ಸಣ್ಣದೊಂದು ಸಮೀಕ್ಷೆಯನ್ನು ಈ ಸೋದರಿಯರು ನಡೆಸಿದಾಗ ಶಾಲೆಯಲ್ಲಿ 24 ಅವಳಿಗಳು ಪತ್ತೆಯಾಗಿದ್ದವು. ಬಳಿಕ ಈ ಸುದ್ದಿ ಊರಿಗೆ ಹರಡಿತು ಇದರಿಂದ ಈ ಹಳ್ಳಿಯಲ್ಲಿ ಹೆಚ್ಚು ಅವಳಿಗಳಿಗೆ ಅನ್ನೋದು ತಿಳಿಯಲಾಗಿದೆ.

By

Leave a Reply

Your email address will not be published. Required fields are marked *