ಮಂಡಿ ನೋವು ಇಂದಿನ ಕಾಲದಲ್ಲಿ ಎಲ್ಲರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆ. ಇದಕ್ಕೆ ಆಯುರ್ವೇದದಲ್ಲಿ ಇರುವಂತಹ ಸುಲಭವಾದ ಮನೆಮದ್ದು ಗ್ರೀನ್ ಜ್ಯುಸ್ ಥೆರಪಿ ಹೇಗೆ ಮಾಡೋದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಗ್ರೀನ್ ಜ್ಯುಸ್ ಥೆರಪಿ ಇದು ಬಹಳ ಹೆಸರುವಾಸಿ ಆದ ಚಿಕಿತ್ಸೆ ಆಗಿದೆ. ಈ ಗ್ರೀನ್ ಜ್ಯುಸ್ ಥೆರಪಿ ಇಂದ ಅನೇಕರು ತಮ್ಮ ಮಂಡಿ ನೋವನ್ನು ಕಡಿಮೆ ಮಾಡಿಕೊಂಡಿದ್ದಾರೆ. ನಾವಿಂದು 40 / 45 ವರ್ಷಗಳ ಮಹಿಳೆಯರಲ್ಲಿ ಹೆಚ್ಚಾಗಿ ಈ ಮಂಡಿ ನೋವು ಕಾಣುತ್ತಿದ್ದೇವೆ. ಮಂಡಿ ನೋವು ಕಡಿಮೆ ಆಗಬೇಕು ಅಂದರೆ ಹೆಚ್ಚು ಹೆಚ್ಚು ವಿಟಮಿನ್ ಡಿ ಬೇಕಾಗುತ್ತದೆ. ಇದು ನಮಗೆ ಸೂರ್ಯನ ಬೆಳಕಿನಲ್ಲಿ ಸಿಗುತ್ತದೆ. ಹಾಗಾಗಿ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು. ಬಹಳ ಪ್ರಮುಖವಾದ ಪೋಷಕಾಂಶ ಕ್ಯಾಲ್ಶಿಯಂ ಪ್ರೊಟೀನ್ ಇವೂ ಕೂಡ ನಮಗೆ ಮಂಡಿ ನೋವನ್ನು ಕಡಿಮೆ ಮಾಡಲು ಬೇಕಾಗುತ್ತದೆ. ಇದರ ಜೊತೆಗೆ ಗ್ರೀನ್ ಜ್ಯುಸ್ ಥೆರಪಿ ಹೇಗೆ ಮಾಡಿಕೊಳ್ಳೋದು ಅನ್ನೋದನ್ನ ನೋಡೋಣ.
ಒಂದು ಮುಷ್ಟಿ ಕರಿಬೇವು ಅಥವಾ ನಾವು ತಿನ್ನುವಂತಹ ಯಾವುದೇ ಒಂದು ಸೊಪ್ಪು (ಮೆಂತೆ ಸೊಪ್ಪು, ಪಾಲಕ್ ಸೊಪ್ಪು ಇತ್ಯಾದಿ) ಒಂದು ಮುಷ್ಟಿ ತೆಗೆದುಕೊಂಡು, ಒಂದು ಚಮಚ ಕಪ್ಪು ಎಳ್ಳು, ಒಂದು ಚಮಚ ಅಗಸೆ ಬೀಜ ಹಾಗೂ ಎರಡು ಚಮಚ ಬೆಲ್ಲ ( ಡಯಾಬಿಟಿಸ್ ಇರುವವರಿಗೆ ಬೆಲ್ಲ ಬೇಡ) ಇವಿಷ್ಟನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿಯಾಗಿ ಮೂರು ತಿಂಗಳು ಮಾಡಬೇಕು. ಇದನ್ನು ಸತತವಾಗಿ ಮೂರು ತಿಂಗಳು ಮಾಡಿದಲ್ಲಿ ಮಂಡಿ ನೋವು ಶೇಕಡಾ 70 ರಷ್ಟು ಕಡಿಮೆ ಆಗುತ್ತದೆ. ಯಾವುದೇ ಖರ್ಚು ಹಾಗೂ ಅಡ್ಡ ಪರಿಣಾಮಗಳು ಇಲ್ಲದೆ ನಮ್ಮ ಮಂಡಿ ನೋವು ಕಡಿಮೆ ಮಾಡುವುದು ಅಲ್ಲದೇ ಚರ್ಮಕ್ಕೂ ಒಳ್ಳೆಯದು ಹಾಗೂ ನಮ್ಮ ಇಡೀ ದೇಹಕ್ಕೂ ಒಳ್ಳೆಯದು. ಹೆಚ್ಚಿನ ಆಯುರ್ವೇದ ಔಷಧಿಗಳ ಮಾಹಿತಿಗಾಗಲಿ ಸಂಪರ್ಕಿಸಿ. ಡಾಕ್ಟರ್ ವೆಂಕಟರಮಣ ಹೆಗಡೆ ನಿಸರ್ಗ ಮನೆ, ವೇದ ವೆಲ್ ನೆಸ್ ಸೆಂಟರ್ ಸಿರ್ಸಿ. 9448729434 / 9731460353