ಇವತ್ತಿನ ಮುಂದುವರೆದ ಜಗತ್ತಿನಲ್ಲಿ ನಮಗೆ ಗೊತ್ತಿರದ ಅದೆಷ್ಟೋ ವಿಷಯಗಳಿವೆ ಅವುಗಳಲ್ಲಿ ಕೆಲವೊಂದು ವಿಷಯಗಳನ್ನು ನಾವಿಂದು ತಿಳಿದುಕೊಳ್ಳೋಣ.ಈಜಿಪ್ಟ್ ಅಂದಕೂಡಲೇ ನಮ್ಮ ಮನಸ್ಸಿನಲ್ಲಿ ಬರುವುದು ಪಿರಾಮಿಡ್ಸ್ ಪಿರಾಮಿಡ್ಸ್ ಎಂದ ಕೂಡಲೇ ನೆನಪಿಗೆ ಬರುವುದು ಮಮ್ಮಿಸ್ ಈ ಮಮ್ಮಿಸ್ ಗಳನ್ನು ಎಷ್ಟು ಬಧ್ರವಾಗಿರಿಸುತ್ತಾರೆ ಎಂಬುದು ನಿಮಗೆಲ್ಲ ಗೊತ್ತು ಆದರೆ ಹದಿನೆಂಟ್ನೂರರಲ್ಲಿ ಈಜಿಪ್ಟ್ನ ಕೈರೋಣದಲ್ಲಿ ಮಮ್ಮಿಗಳನ್ನು ಅಗೆದು ತೆಗೆದು ಮಾರುಕಟ್ಟೆಯಲ್ಲಿ ಮಾರುತ್ತಿದ್ದರಂತೆ ಇದನ್ನು ಖರೀದಿಸುವ ಶ್ರೀಮಂತ ವ್ಯಕ್ತಿಗಳು ಇದನ್ನು ಪಾರ್ಟಿಗಳಲ್ಲಿ ಪ್ರದರ್ಶನಕ್ಕಾಗಿ ಅಥವಾ ಅತಿಯಾಗಿ ಜನ ಸೇರುವ ಪ್ರದೇಶದಲ್ಲಿ ಇವುಗಳನ್ನಿರಿಸಿ ತೋರಿಸುತ್ತಿದ್ದರು
ಆದರೆ ಅವರಿಗೆ ಗೊತ್ತಿಲ್ಲದ ಇನ್ನೊಂದು ವಿಷಯವೆಂದರೆ ಈ ಮಮ್ಮಿಗಳನ್ನು ಮಾರುಕಟ್ಟೆಯಲ್ಲಿ ಮಾರುವವರು ಇತ್ತೀಚೆಗೆ ಸತ್ತ ಸಾಮಾನ್ಯ ಜನರ ಮೃತ ದೇಹವನ್ನು ಅಗೆದು ತೆಗೆದು ಅವುಗಳಿಗೆ ಹಳೆ ಬಟ್ಟೆಗಳನ್ನು ಸುತ್ತಿ ಅವುಗಳನ್ನು ಮಮ್ಮಿಗಳಂತೆ ಕಾಣುವಹಾಗೆ ಮಾಡುತ್ತಿದ್ದರು ಆ ರೀತಿ ಮಾಡಿ ಅವುಗಳನ್ನು ಮಾರುತ್ತಿದ್ದರಂತೆ.
ನಮ್ಮಲ್ಲಿ ತುಂಬಾ ಜನರಿಗೆ ಯಶಸ್ವಿಯಾಗಬೇಕೆನ್ನುವ ಆಸೆ ಇರುತ್ತದೆ ತುಂಬಾ ಯಶಸ್ವಿ ವ್ಯಕ್ತಿಗಳು ಎಂದು ಹೆಸರು ಮಾಡಿರುವ ವಾರನ್ ಬಫೆಕ್ ಜುನ್ ಜುನ್ ವಾಲಾ ಕೂಡ ಯಶಸ್ವಿ ಯಾಗಬೇಕು ಎಂಬ ಬಯಕೆಯಿಂದ ಸ್ಟಾಕ್ ಮಾರುಕಟ್ಟೆ ಯಲ್ಲಿ ಪ್ರವೇಶ ಮಾಡಿ ಸಾವಿರಾರು ಕೋಟಿ ಗಳಿಸುತ್ತಿದ್ದಾರೆ ಇಂಡಿಯನ್ ಸ್ಟಾಕ್ ಮಾರ್ಕೆಟಿಂಗ್ ಕಿಂಗ್ ಅಂತ ಹೆಸರು ಇರುವ ರಾಕೇಶ್ ಜುನ್ ಜುನ್ ವಾಲಾ ಮೊದಲು ಐದು ಸಾವಿರದಿಂದ ಹೂಡಿಕೆ ಮಾಡಲು ಪ್ರಾರಂಭಿಸಿದರು
ಆ ರೀತಿ ಐದು ಸಾವಿರದಿಂದ ಪ್ರಾರಂಭ ಮಾಡಿ ಇಪ್ಪತ್ತೊಂದು ಸಾವಿರ ಕೋಟಿ ಗಳಿಸಿದ್ದಾರೆ ಇದಕ್ಕೆ ಇವರು ಮಾಡಿದ್ದು ಇಷ್ಟೇ ಒಳ್ಳೆಯ ಗುಣಮಟ್ಟದ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು ಉದಾಹರಣೆಗೆ ಟೈಟನ್ ಎಂಬ ಕಂಪನಿಯಲ್ಲಿ ರಾಕೇಶ್ ಜುನ್ ಜುನ್ ವಾಲಾ ಮೂರು ರೂಪಾಯಿಗೆ ಆರು ಕೋಟಿ ಷೇರುಗಳನ್ನು ಖರೀದಿಸಿದ್ದರು ಈಗ ಟೈಟನ್ ನ ಶೇರ್ ಬೆಲೆ ಹದಿನಾರುನೂರಾ ಐವತ್ತು ರೂಪಾಯಿಗಳಿಗಿಂತ ಜಾಸ್ತಿ ಈ ರೀತಿ ನೀವು ಕಷ್ಟ ಪಟ್ಟು ಗಳಿಸಿದ ಹಣವನ್ನುಸ್ಮಾರ್ಟ್ ಆಗಿ ಹೂಡಿಕೆ ಮಾಡುವುದರಿಂದ ಇನ್ನಷ್ಟು ಲಾಭ ಮಾಡಿಕೊಳ್ಳಬಹುದು
ಆದ್ದರಿಂದ ನೀವು ಸ್ಟಾಕ್ ಮಾರುಕಟ್ಟೆ ಯಲ್ಲಿ ಹೂಡಿಕೆ ಮಾಡಬೇಕೆಂದರೆ ನಿಮಗೆ ಖಂಡಿತವಾಗಿಯೂ ಒಂದು ಡಿಮ್ಯಾಟ್ ಅಕೌಂಟ್ ಇರಲೇಬೇಕು. ಹೂಡಿಕೆ ಮಾಡಲು ಆಸಕ್ತರು ಮೊದಲು ಸ್ಟಾಕ್ ಮಾರುಕಟ್ಟೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಿ. ಅಮೆರಿಕಾ ಅಂದಕೂಡಲೇ ಎಲ್ಲರಿಗೂ ನೆನಪಾಗುವುದು ಅಲ್ಲಿನ ಶ್ರೀಮಂತಿಕೆ ಅಲ್ಲಿನ ಜನರ ಆದಾಯ ನಮಗಿಂತ ಜಾಸ್ತಿನೇ ಇರತ್ತೆ ಆದರೂ ಅಷ್ಟು ಗಳಿಸುವವರು ಕಟ್ಟಿಗೆ ಮನೆಯಲ್ಲಿ ಯಾಕೆ ಇರುತ್ತಾರೆ? ಸಿಟಿ ಏರಿಯಾ ಬಿಟ್ಟರೆ ಹಳ್ಳಿವಲಯಗಳಲ್ಲಿ ಕಟ್ಟಿಗೆಯಿಂದ ಕಟ್ಟಿದ ಮನೆಗಳೆ ಇರುತ್ತವೆ
ಇದನ್ನು ಎಲ್ಲ ಅಮೆರಿಕನ್ ಟಿವಿ ಕಾರ್ಯಕ್ರಮದಲ್ಲಿ ಮತ್ತು ಸಿನಿಮಾಗಳಲ್ಲಿ ನೋಡಿರಬಹುದು ಯಾಕೆ ಅವರು ಕಟ್ಟಿಗೆಯ ಮನೆಗಳಲ್ಲಿ ವಾಸಿಸುತ್ತಾರೆ ಸಿಮೆಂಟ್ ಮತ್ತು ಇಟ್ಟಿಗೆ ಖರೀದಿಸುವ ಹಣ ಇರುವುದಿಲ್ಲವೇ ಎಂದು ಪ್ರಶ್ನಿಸಿದರೆ ಇದಕ್ಕೆ ಅವರ ಕಾರಣ ಇತಿಹಾಸ ಹದಿನಾರರಿಂದ ಹದಿನೇಳನೇ ಶತಮಾನದಲ್ಲಿ ತುಂಬಾ ಜನ ಯುರೋಪ್ ನಿಂದ ಉತ್ತರ ಅಮೆರಿಕಕ್ಕೆ ವಲಸೆ ಬಂದರು ಆ ರೀತಿ ವಲಸೆ ಬಂದಾಗ ಅವರಿಗೆ ಬೇಗ ಮನೆಗಳು ಸಿದ್ಧವಾಗಬೇಕಾಗಿತ್ತು ಆದ್ದರಿಂದ ಇಟ್ಟಿಗೆಗಳಿಂದ ಕಲ್ಲುಗಳಿಂದ ಮನೆಕಟ್ಟಲು ತುಂಬಾ ಸಮಯ ಹಿಡಿಯುತ್ತದೆ ಮತ್ತು ಆಗಲೇ ಬಂದ ಅವರಿಗೆ ಇಟ್ಟಿಗೆ ಕಲ್ಲುಗಳು ದೊರೆಯುವುದು ಕಷ್ಟ
ಆದ್ದರಿಂದ ಅಲ್ಲಿ ಕಾಡುಗಳು ಜಾಸ್ತಿ ಇರುವುದರಿಂದ ಕಟ್ಟಿಗೆಗಳಿಂದಲೆ ಮನೆಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು ಮತ್ತು ಇವು ಅವರಿಗೆ ಬೇಕಾದ ಹಾಗೆ ಬೇಗ ಸಿದ್ಧವಾಗುತ್ತಿತ್ತು.ಆದ್ದರಿಂದ ಅಲ್ಲಿ ಕಟ್ಟಿಗೆಯಿಂದ ಮನೆ ಕಟ್ಟುವುದು ನೂರಾರು ವರ್ಷ ಗಳಿಂದ ಜಾರಿಯಲ್ಲಿ ಬಂದಿದೆ.ಆದರೆ ಈಗಲೂ ಅವರು ಕಟ್ಟಿಗೆಯಿಂದ ಮನೆ ಕಟ್ಟಿಕೊಳ್ಳಲು ಕಾರಣ ಅಮೆರಿಕಾದಲ್ಲಿರುವ ಜನ ಜಾಸ್ತಿ ಒಂದುಕಡೆ ವಾಸಿಸುವುದಿಲ್ಲ ಬೇರೆಬೇರೆ ಸ್ಥಳಗಳಿಗೆ ಹೋಗಿ ವಾಸಮಾಡುತ್ತರೆ ಹಾಗಾಗಿ ಬೇಗ ಮನೆಗಳನ್ನು ಕಿತ್ತು ಬೇರೆಕಡೆ ಕಟ್ಟಿಕೊಳ್ಳಬಹುದು
ಹೀಗೆ ಕಟ್ಟಿಗೆಯಿಂದ ಕಟ್ಟುವ ಮನೆಗಳಿಗೆ ವೆಚ್ಚ ಸಿಮೆಂಟ್ ಮನೆಗಳಿಗಿಂತ ಕಡಿಮೆಯಾಗುತ್ತದೆ ಒಂದು ವೇಳೆ ಭಾರತದಲ್ಲಿ ಕಟ್ಟಿಗೆಯಿಂದ ಮನೆ ಕಟ್ಟಿಕೊಂಡರೆ ತುಂಬಾ ಬಡವ ಎಂದು ಜನ ತಿಳಿದುಕೊಳ್ಳುತ್ತಾರೆ ಅಂದುಕೊಳ್ಳದಿದ್ದರೆ ಕಟ್ಟಿಕೊಳ್ಳುವವರಿಗೆ ಹಾಗೆ ಅನಿಸುತ್ತದೆ ಪ್ರತಿಷ್ಠೆಯ ವಿಷಯ ವಾಗಿರುತ್ತದೆ ಆದರೆ ಅಲ್ಲಿ ಕಟ್ಟಿಗೆಗಳಿಂದ ಮನೆ ಕಟ್ಟುವುದು ಸಾಮಾನ್ಯವಾದ್ದರಿಂದ ಕಡಿಮೆ ಹಣ ದಿಂದ ಕಡಿಮೆ ಸಮಯದಲ್ಲಿ ನಿರ್ಮಾಣ ವಾಗುವುದರಿಂದ ಕಟ್ಟಿಗೆಯ ಮನೆಗಳನ್ನು ಕಟ್ಟಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ.
ಈ ಪ್ರಪಂಚದಲ್ಲಿ ಅತ್ಯಂತ ದುಬಾರಿ ಹಾಲನ್ನು ಕೊಡುವ ಪ್ರಾಣಿ ಯಾವುದು ಎಂದರೆ ಅದು ಕತ್ತೆ. ಯಾಕೆ ಕತ್ತೆಯ ಹಾಲು ಅಷ್ಟು ದುಬಾರಿ ಎಂದರೆ ಮಾರುಕಟ್ಟೆಯಲ್ಲಿ ಕತ್ತೆ ಹಾಲಿನ ವ್ಯಾಪಾರ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ಆದ್ರೆ ಅದು ಇತ್ತೀಚೆಗೆ ಪ್ರಸಿದ್ಧಿಯಾಗುತ್ತಿದೆ. ಕತ್ತೆ ಹಾಲು ಮಾನವರ ಹಾಲಿಗೆ ತುಂಬಾ ಹತ್ತಿರವಾಗಿರುತ್ತದಂತೆ ತಾಯಿ ಹಾಲು ಮಗುವಿಗೆ ಎಷ್ಟು ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು ಕೆಲವೊಂದು ದೇಶಗಳಲ್ಲಿ ಹಾಲು ಆಗದಿರುವವರು ಮಕ್ಕಳಿಗೆ ಕತ್ತೆ ಹಾಲನ್ನು ಉಣಿಸುವ ಪದ್ದತಿ ಇದೆ
ಕತ್ತೆ ಹಾಲಲ್ಲಿ ಕಡಿಮೆ ಕೊಬ್ಬಿನ ಅಂಶವಿದ್ದು ಹಲವು ಪ್ರೊಟೀನ್ ಅಂಶ ಗಳಿರುತ್ತವೆ ಮತ್ತು ಬೇರೆ ಪ್ರಾಣಿಗಳ ಹಾಲಿಗಿಂತ ಹೆಚ್ಚು ವಿಟಮಿನ್ ಡಿ ಕತ್ತೆಯ ಹಾಲಿನಲ್ಲಿರುತ್ತದೆಯಂತೆ. ಇದರ ಹಾಲನ್ನು ಕೆಲವು ಔಷಧಗಳಲ್ಲಿ ಬಳಸಲಾಗುತ್ತದೆ ಇದು ಕೆಲವು ರೋಗಗಳಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಆದ್ದರಿಂದ ಇದಕ್ಕೆ ಜಾಸ್ತಿ ಬೇಡಿಕೆ ಇರುತ್ತದೆ.
ಆದರೆ ಯಾವುದೇ ಊರಿಗೆ ಹೋದರೂ ನಮಗೆ ಹಸುಗಳೆ ಹೆಚ್ಚಾಗಿ ಕಾಣಿಸುತ್ತವೆ ಕತ್ತೆಗಳು ಹೆಚ್ಚಾಗಿ ಕಾಣಿಸುವುದಿಲ್ಲ ಯಾವುದಕ್ಕೆ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇರುತ್ತದೆಯೋ ಅದಕ್ಕೆ ಬೆಲೆ ಹೆಚ್ಚಿರುತ್ತದೆ. ಹಾಗಾಗಿ ಕತ್ತೆಗಳ ಸಂಖ್ಯೆ ಕಡಿಮೆ ಇದೆ ಆದರೆ ಇತ್ತೀಚೆಗೆ ಕತ್ತೆ ಹಾಲಿಗೆ ಬೇಡಿಕೆ ಇರುವುದರಿಂದ ಅದಕ್ಕೆ ಬೆಲೆ ಹೆಚ್ಚಿರುತ್ತದೆ. ಇತ್ತೀಚೆಗೆ ಕತ್ತೆಗಳ ಸಾಕಾಣಿಕೆ ಹೆಚ್ಚಾಗುತ್ತಿದೆ.
ಈ ಪ್ರಪಂಚದಲ್ಲಿ ದುಡ್ಡು ಖರ್ಚು ಮಾಡಿದರೆ ಏನನ್ನಾದರೂ ಖರೀದಿಸಬಹುದು ಆದರೆ ತಾಯಿಯ ಪ್ರೀತಿಯನ್ನು ಖರೀದಿಸಲು ಆಗುವುದಿಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಆದ್ರೆ ನ್ಯೂಯಾರ್ಕ್ ನ ಬ್ಲುತಿನ್ ನಲ್ಲಿ ಬಾಡಿಗೆಗೆ ತಾಯಂದಿರು ಸಿಗುತ್ತಾರೆ ಈ ತಾಯಂದಿರು ತಾಯಿ ಪ್ರೀತಿ ಬೇಕಾದವರ ಕಡೆ ಸ್ವಲ್ಪ ಸಮಯವಿದ್ದು ಅವರ ಕಷ್ಟ ಗಳನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಕೇಳಿ ಅವರಿಗೆ ಸಮಾಧಾನ ಮಾಡಿ ಕೆಲವು ಸಲಹೆಗಳನ್ನು ನೀಡುತ್ತಾರೆ
ಒಬ್ಬ ತಾಯಿ ಯಾವ ರೀತಿ ತನ್ನ ಮಕ್ಕಳನ್ನು ಪ್ರೀತಿಸುತ್ತಾಳೆ ಅದೇ ರೀತಿ ವರ್ತಿಸುತ್ತಾರೆ ಈ ವಿಚಾರ ಬಂದಿದ್ದು ಲೀನಾ ಕೆಂಡ್ಲಿ ಎನ್ನುವ ಮಹಿಳೆಗೆ ಇವರಿಗೆ ಈ ವಿಚಾರ ಬರುವುದಕ್ಕಿಂತ ಮೊದಲು ಇವರು ತಮ್ಮ ನೆರೆ ಹೊರೆಯ ಸಣ್ಣವರೊಂದಿಗೆ ಬೆರೆಯುತ್ತಿದ್ದರಂತೆ ಅವರಿಗೆ ಬೇಕಾದ ಸಲಹೆ ಸೂಚನೆಗಳನ್ನು ನೀಡುತ್ತಿದ್ದರಂತೆ ಅವರೆಲ್ಲ ಇವರನ್ನು ಮೊಮ್ ಎಂದು ಕರೆಯುತ್ತಿದ್ದರಂತೆ ನಂತರ ಇವರು ಒಂದು ವೆಬ್ ಸೈಟ್ ಅನ್ನು ರಚಿಸಿ ಅಲ್ಲಿ ಬಾಡಿಗೆಗೆ ತಾಯಂದಿರು ಸಿಗುವ ಅವಕಾಶಕ್ಕೆ ಅನುವು ಮಾಡಿಕೊಟ್ಟರು.
ನಾವು ನಮ್ಮ ಶಾಲಾ ದಿನಗಳಲ್ಲಿ ನಮ್ಮ ಕೈಬರಹ ದುಂಡಾಗಿರಬೇಕು ಎಂದು ಏಷ್ಟೋ ಪ್ರಯತ್ನಿಸುತ್ತೇವೆ ಶಾಲೆಯಲ್ಲಿ ಶಿಕ್ಷಕರಿಗೆ ಯಾಕೋ ದುಂಡಗಾಗಿ ಅಕ್ಷರ ಬರೆಯುವ ಮಕ್ಕಳ ಮೇಲೆ ಪ್ರೀತಿ ಜಾಸ್ತಿ ಆದರೆ ನಿಮ್ಮ ತರಗತಿಯಲ್ಲಿ ಕಂಪ್ಯೂಟರ ನಲ್ಲಿ ಬರುವ ಪೊಂಟ್ ಸೈಜ್ ನಲ್ಲಿ ಅಕ್ಷರ ಬರೆಯುವವರನ್ನು ನೋಡಿದ್ದೀರಾ ಆದರೆ ನೇಪಾಳದ ಸೈನಿಕ ಆವಾಸಿಯ ವಿದ್ಯಾಲಯದಲ್ಲಿ ಎಂಟನೇ ತರಗತಿ ಓದುತ್ತಿರುವ ಪ್ರಕೃತಿ ಮಲ್ಲ ಎಂಬ ವಿದ್ಯಾರ್ಥಿನಿ ಬರೆದ ಅಕ್ಷರಗಳನ್ನು ವರ್ಡ್ಸ್ ಬ್ಯೂಟಿಫುಲ್ ಹಾಂಡ್ ರೈಟಿಂಗ್ ಎಂದು ಗುರುತಿಸಲಾಗಿದೆ.
ನೀವು ಮಾತ್ರೆಗಳನ್ನೂ ನುಂಗುವಾಗ ಒಮ್ಮೆಯಾದರೂ ಅದರ ಮೇಲೆ ಇರುವ ಗೆರೆಗಳನ್ನು ಗಮನಿಸಿರುತ್ತೀರಿ ಈ ಗೆರೆ ಇರುವ ಮಾತ್ರೆಗಳನ್ನು ವೈದ್ಯರು ಒಮ್ಮೊಮ್ಮೆ ಅರ್ಧ ಮಾಡಿ ನುಂಗಿ ಎಂದು ಹೇಳುತ್ತಾರೆ ಯಾಕೆ ಅಂದರೆ ಈ ಗೆರೆಯನ್ನು ಡಿಬೋಸ್ ಡ್ ಗೆರೆ ಅಂತ ಕರೆಯುತ್ತಾರೆ ಅಂದರೆ ಈ ಗೆರೆ ಇದ್ದರೆ ಮಾತ್ರೆಗಳನ್ನು ಅರ್ಧ ಮಾಡಿ ನುಂಗ ಬಹುದು ಎಂದು ಅರ್ಥ. ಉದಾಹರಣೆಗೆ ಮಾತ್ರೆಗಳಲ್ಲಿ ನೂರು ಎಂ ಜಿ ಇದ್ದರೆ ರೋಗಿಗೆ ಐವತ್ತು ಎಂ ಜಿ ತಡೆದುಕೊಳ್ಳುವ ಶಕ್ತಿ ಮಾತ್ರ ಇದ್ದರೆ ವೈದ್ಯರು ಈ ಮಾತ್ರೆಯನ್ನು ಅರ್ಧ ಮಾಡಿ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದ್ರೆ ಕೆಲವು ಮಾತ್ರೆಗಳ ಮೇಲೆ ಈ ಡಿಬೋಸ್ ಡ್ ಗೆರೆಗಳು ಇರುವುದಿಲ್ಲ ಅಂದರೆ ಆ ಮಾತ್ರೆಗಳನ್ನು ಅರ್ಧಕ್ಕೆ ಮುರಿದು ನುಂಗುವಂತಿಲ್ಲ ಎಂದು ಅರ್ಥ.
ಮೊಟೊರೊಲಾ ಈ ಕಂಪನಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಒಂದು ಸಮಯದಲ್ಲಿ ಈ ಕಂಪನಿ ಮೊಬೈಲ್ ಕಂಪನಿಗಳಲ್ಲಿ ವರ್ಡ್ಸ್ ಲಿಡಿಂಗ್ ಕಂಪನಿ ಆಗಿತ್ತು. ಮೊಟ್ಟಮೊದಲ ಮೊಬೈಲ್ ಫೋನ್ ಮೊಟೊರೊಲಾ ಕಂಪನಿಯದಾಗಿತ್ತು. ಈ ಕಂಪನಿಗೆ ಈ ಹೆಸರು ಹೇಗೆ ಬಂತು ಎಂಬುದನ್ನು ನೋಡುವುದಾದರೆ ಈ ಕಂಪನಿ ಆರಂಭವಾದಾಗ ಇದರ ಹೆಸರು ಗೆಲ್ವಿನ್ ಮ್ಯಾನುಪ್ಯಾಕ್ಚರಿಂಗ ಕೊರ್ಪರೇಶನ್ ಅಂತ ಇತ್ತು ಇದು ಆವಾಗ ಬೆಟ್ರಿ ಎಲ್ಮಿನೆಟರ್ ಗಳನ್ನೂ ತಯಾರಿಸುತ್ತಿತ್ತು ಇದನ್ನು ರೇಡಿಯೋ ಗಳಿಗೆ ಬಳಸುತ್ತಿದ್ದರು.
ಆಗ ಫಾಲ್ ಗಲ್ವಿನ್ ಗೆ ಒಂದು ವಿಷಯ ಗೊತ್ತಾಯಿತು ಇತ್ತೀಚೆಗೆ ಕಾರುಗಳಲ್ಲಿ ರೆಡಿಯೋಗಳನ್ನು ಜೋಡಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂದು ಆಗ ಆತ ತಾನೇ ಕಾರುಗಳಿಗೆ ಸರಿಯಾಗಿ ಹೊಂದಾಣಿಕೆ ಆಗುವ ರೇಡಿಯೊಗಳನ್ನು ತಯಾರಿಸಿದ ಆಗ ಅದು ಯಶಸ್ವಿಯಾಯಿತು. ಆಗ ಅದಕ್ಕೆ ಹೊಸ ಹೆಸರು ಇಡಬೇಕಾಯಿತು ಆಗ್ ಗಲ್ವಿನ್ ಈ ರೀತಿ ಯೋಚನೆ ಮಾಡಿದ ಈ ರೇಡಿಯೋಗಳನ್ನು ಮೋಟಾರ್ ಕಾರುಗಳಲ್ಲಿ ಬಳಸುತ್ತಿದ್ದರು
ಆದ್ದರಿಂದ ಅದರಿಂದ ಮೋಟಾರ್ ಎಂಬ ಹೆಸರನ್ನು ತೆಗೆದುಕೊಂಡ ಆ ಕಾಲದಲ್ಲಿ ಪ್ರತಿಷ್ಠಿತ ಕಂಪನಿಯ ಹೆಸರುಗಳ ಕೊನೆಯಲ್ಲಿ ಓಲ ಎಂಬುದು ಬಳಕೆಯಲ್ಲಿತ್ತು ಆದ್ದರಿಂದ ಈ ಕಂಪನಿಯನ್ನು ಮೊಟೊರೊಲಾ ಎಂದು ಹೆಸರಿಸಿದ. ಈ ರೀತಿಯಾಗಿ ಇಲ್ಲಿ ತಿಳಿಸಿರುವ ಒಂದೊಂದು ಕತೆಯೂ ನಮಗೆ ಗೊತ್ತಿರದ ಒಂದೊಂದು ರೀತಿಯ ವಿಷಯಗಳನ್ನು ತಿಳಿಸಿಕೊಡುತ್ತದೆ.