ಮೇಘನಾ ರಾಜ್ ಅವರನ್ನು ಕರ್ನಾಟಕದ ಮನೆಮಗಳು ಎಂದು ಹೇಳಿದರೆ ತಪ್ಪಾಗಲಾರದು. ಮೇಘನಾ ಅವರು ಚಿರು ಅವರನ್ನು ಕಳೆದುಕೊಂಡ ನಂತರ ಅವರ ಮಡಿಲಿಗೆ ಜ್ಯೂನಿಯರ್ ಚಿರು ಅವರು ಬಂದಿರುವುದು ಸಂತಸ ತಂದಿದೆ. ಮೇಘನಾ ಅವರು ಜ್ಯೂನಿಯರ್ ಚಿರು ಅವರ ಹೊಸ ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ. ಇದೀಗ ಶೇರ್ ಮಾಡಿರುವ ಫೋಟೋ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕನ್ನಡದ ಸ್ಟಾರ್ ನಟ-ನಟಿಯರ ಜೋಡಿಗಳಲ್ಲಿ ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದಾಗಿತ್ತು. ಇವರಿಬ್ಬರೂ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಆಟಗಾರ ಸಿನಿಮಾದಲ್ಲಿ ಇಬ್ಬರು ನಾಯಕ-ನಾಯಕಿಯಾಗಿ ನಟಿಸಿದರು. ನಂತರ ಇವರಿಬ್ಬರೂ ಇಷ್ಟಪಟ್ಟು ಪ್ರೀತಿಸಿ ಮದುವೆಯಾದರು.

ನಂತರ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದಾಗ ಚಿರಂಜೀವಿ ಸರ್ಜಾ ಅವರು ವಿಧಿವಶರಾದರು ಇದರಿಂದ ಮೇಘನಾ ರಾಜ್ ಹಾಗೂ ಚಿರು ಅವರ ಕುಟುಂಬ ನೋವಿನಲ್ಲಿ ಮುಳುಗಿತ್ತು ಆದರೆ ಮೇಘನಾ ಅವರಿಗೆ ಗಂಡು ಮಗು ಜನಿಸಿತು. ಚಿರಂಜೀವಿ ಸರ್ಜಾ ಅವರು ಮತ್ತೆ ಹುಟ್ಟಿ ಬಂದರು ಎಂದು ಎರಡು ಮನೆಯವರು ಸಂತೋಷಪಟ್ಟರು.

ಒಂದು ತಿಂಗಳ ನಂತರ ಮೇಘನಾ ರಾಜ್, ಅವರ ಮಗ, ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ಅವರ ತಂದೆ ಸುಂದರರಾಜ್ ಅವರಿಗೆ ಕೊರೋನ ಮಹಾಮಾರಿ ವಕ್ಕರಿಸಿತು ಚಿಕಿತ್ಸೆ ಪಡೆದು ಗುಣಮುಖರಾದರು. ಮೇಘನಾ ಅವರು ತಮ್ಮ ಮಗನ ಹೊಸ ಹೊಸ ವಿಡಿಯೋ, ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ.

ಮೇಘನಾ ರಾಜ್ ಅವರ ಮಗನ ವಿಡಿಯೋ, ಫೋಟೋಗಳನ್ನು ನೋಡಿದ ಅಭಿಮಾನಿಗಳು ಮಗು ಚಿರು ಅವರ ತರವೆ ಇದ್ದಾನೆ ಎಂದು ಹೇಳುತ್ತಾರೆ. ಪ್ರಮೀಳಾ ಜೋಷಾಯಿ ಅವರ ತಮ್ಮನ ಮಗನ ಹೆಸರು ತೇಜ್ ಅವರು ಮೇಘನಾ ರಾಜ್ ಅವರಿಗೆ ಅಣ್ಣನಾಗಬೇಕು.

ಮೇಘನಾ ರಾಜ್ ಅವರ ಸಹೋದರ ತೇಜ್ ಅವರು ಮೇಘನಾ ರಾಜ್ ಅವರ ಜೀವನದಲ್ಲಿ ಆಗಿರುವ ಈ ಘಟನೆ ಯಾರೂ ಕೂಡ ನಿರೀಕ್ಷೆ ಮಾಡಿರುವುದಿಲ್ಲ. ನಾವು ಕಿತ್ತೂರು ರಾಣಿ ಚೆನ್ನಮ್ಮ ಇಂತಹ ಧೈರ್ಯವಂತ ಮಹಿಳೆಯರ ಬಗ್ಗೆ ಕೇಳಿದ್ದೇವೆ ಅವರಂತೆಯೆ ಈ ಜನರೇಷನ್ ನಲ್ಲಿ ಮೇಘನಾ ಅವರು ಧೈರ್ಯವಂತರಾಗಿದ್ದಾರೆ. ಈ ಘಟನೆಯನ್ನು ಮೇಘನಾ ಅವರು ಧೈರ್ಯದಿಂದ ಎದುರಿಸಿದ್ದಾರೆ ಮತ್ತು ದಾಟಿ ಬಂದಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲರೂ ಮೇಘನಾ ಅವರಿಗೆ ಪ್ರೀತಿ, ವಿಶ್ವಾಸವನ್ನು ತೋರಿಸಿದ್ದಾರೆ. ಈ ಸಮಯದಲ್ಲಿ ಜ್ಯೂನಿಯರ್ ಚಿರು ಅವರು ಹುಟ್ಟಿದ್ದು ಮರುಭೂಮಿಯಲ್ಲಿ ನೀರು ಸಿಕ್ಕಂತೆ ಎಲ್ಲರಿಗೂ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಮೇಘನಾ ರಾಜ್ ಅವರ ಅಣ್ಣ ತೇಜ್ ಅವರು ಜ್ಯೂನಿಯರ್ ಚಿರು ಅವರನ್ನು ಎತ್ತುಕೊಂಡಿರುವ ಫೋಟೊ ಹಾಗೂ ಜ್ಯೂನಿಯರ್ ಚಿರು ಚಿರಂಜೀವಿ ಸರ್ಜಾ ಅವರ ಸಿನಿಮಾ ಹಾಡಿನ ವಿಡಿಯೋ ನೋಡುತ್ತಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಜ್ಯೂನಿಯರ್ ಚಿರು ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *