ಪ್ರತಿಯೊಂದು ಸಂಸ್ಥೆಗಳಿಗೂ ಕೆಲಸಗಾರರ ಅವಶ್ಯಕತೆ ಇರುತ್ತದೆ. ಹಾಗೆಯೇ ಯಾವುದೇ ಸಂಸ್ಥೆಗಳು ತನಗೆ ಅಭ್ಯರ್ಥಿಗಳ ಅವಶ್ಯಕತೆ ಇದೆ ಎಂದಾದಾಗ ಅರ್ಹ ಅಭ್ಯರ್ಥಿಗಳಿಗಾಗಿ ಅಧಿ ಸೂಚನೆಯನ್ನು ಹೊರಡಿಸುತ್ತದೆ. ಹಾಗೆಯೇ ಕರ್ನಾಟಕ ವಿದ್ಯುತ್ ನಿಗಮ ಈಗ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹುದ್ದೆಗಳು:- ಇಲ್ಲಿ ಎರಡು ರೀತಿಯ ಹುದ್ದೆಗಳು ಇವೆ. ಮೊದಲನೆಯದು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು. ಇದರಲ್ಲಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಗಳು, ಹಾಗೆಯೇ ಸಿವಿಲ್ ಇಂಜಿನಿಯರ್ ಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಎರಡನೆಯದು ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳು. ಇದರಲ್ಲೂ ಸಹ ಮೇಲಿನ ಪದವಿಯವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ:- ಒಟ್ಟಾರೆಯಾಗಿ 200 ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಸೇರಿ ಎಲ್ಲಾ ಕಡೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ವಿದ್ಯಾರ್ಹತೆ:-ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮತ್ತೆ ಯಾವುದೇ ಪದವಿ ಪದವಿಯವರು ಅರ್ಜಿ ಸಲ್ಲಿಸುವಂತಿಲ್ಲ.
ವಯೋಮಿತಿ:-ಅಪ್ರೆಂಟಿಸ್ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿಮಾಡಲಾಗುತ್ತದೆ. ಆದ್ದರಿಂದ ಇದಕ್ಕೆ ಯಾವುದೇ ಗರಿಷ್ಠ ಮತ್ತು ಕನಿಷ್ಠ ಪರಿಮಿತಿಯನ್ನು ನೋಡಲಾಗುವುದಿಲ್ಲ.
ಅರ್ಜಿ ಶುಲ್ಕ:-ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಆದರೂ ಯಾವುದೇ ರೀತಿ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ:-ಇಲಾಖೆಯು ಕರೆದಿರುವ ಎಲ್ಲಾ ಹುದ್ದೆಗಳಿಗೆ ಅತಿ ಹೆಚ್ಚಿನ ಅಂಕ ಗಳಿಸಿದವರಿಗೆ ಮೊದಲ ಆದ್ಯತೆ ಇರುತ್ತದೆ. ಆದ್ದರಿಂದ ಫಲಿತಾಂಶದ ಮೇಲೆ ಹುದ್ದೆಗಳು ಅವಲಂಬಿತವಾಗಿರುತ್ತವೆ.
ಸಂಬಳ:-ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ 7000 ಸಂಬಳವನ್ನು ನೀಡಲಾಗುತ್ತದೆ. ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗೆ 5000 ಸಂಬಳವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-ಅರ್ಜಿಸಲ್ಲಿಸಲು 4 ಜನವರಿ 2021 ಮೊದಲನೆಯ ದಿನವಾಗಿದೆ. ಈ ದಿನಾಂಕದಿಂದ ಅರ್ಜಿಯನ್ನು ತುಂಬಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-19 ಜನವರಿ 2021 ಇದು ಕೊನೆಯ ದಿನಾಂಕವಾಗಿದೆ. ಈಗಿನ ದಿನಾಂಕದವರೆಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ 27 ಜನವರಿ 2021ರಂದು ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.