ಶಿಕ್ಷಣ ಇಲಾಖೆಗೆ ಸಂಬಂಧಿಸಿ ಇತ್ತೀಚೆಗೆ ಶಾಲೆಗಳು ಯಾವಾಗ ಆರಂಭ ಆಗಬಹುದು ಎಂಬುದರ ಬಗ್ಗೆ ಎಲ್ಲರಲ್ಲೂ ಒಂದು ಪ್ರಶ್ನೆ ಉದ್ಭವ ಆಗಿದೆ. ಈಗಿನ ಸಧ್ಯದ ಪರಿಸ್ಥಿತಿಯಲ್ಲಿ ತರಗತಿಗಳನ್ನು ಹೇಗೆ ಆರಂಭಿಸುವುದು ಅನ್ನುವುದರ ಕುರಿತಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತ ಇದೆ. ಆದರೆ ಶಿಕ್ಷಣ ಇಲಾಖೆ ಈಗಲೇ ಯಾವ ಶಾಲೆಯನ್ನೂ ಯಾವ ತರಗತಿಗಳನ್ನೂ ಕೂಡ ತರಾತುರಿಯಾಗಿ ಆರಂಭ ಮಾಡ್ಬೇಕು ಎನ್ನುವ ಯೋಚನೆ ಮಾಡಿಲ್ಲ ಹಾಗೆ ಮಾಡುವುದೂ ಇಲ್ಲ. ಈಗಾಗಲೇ ತಿಳಿದಿರುವಂತೆ ಜೂನ್ 25ರಿಂದ SSLC ಪರೀಕ್ಷೆಗಳು ಆರಂಭವಾಗಿ ಜುಲೈ 4 ರಂದು ಮುಗಿಯುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಸುಮಾರು10 ದಿನಗಳ ಹಿಂದೆ ಅಷ್ಟೇ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ LKG , UKG ಹಾಗೂ ಪ್ರಾಥಮಿಕ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು ಅನ್ನುವ ಒಂದು ಪ್ರಶ್ನೆ ಇಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಅನೇಕ ಪೋಷಕರು ಇಷ್ಟು ಬೇಗ ಶಾಲೆಗಳ ಆರಂಭ ಬೇಡ ತಮಗೆ ಆತಂಕ ಇದೆ ಎಂದರೆ ಇನ್ನೂ ಕೆಲವರು ಶಾಲೆಗಳ ಆರಂಭ ಆಗಲಿ ಹಲವು ಚಟುವಟಿಕೆಗಳ ಜೊತೆ ಇದೂ ಒಂದು ಆಗಲಿ ಎಂದು ಹೀಗೆ ಹಲವಾರು ರೀತಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಚಿವರ ಈ ಪ್ರಶ್ನೆಗೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಹುತೇಕ ಪಾಲಕರಿಂದ ಚಿಕ್ಕ ಮಕ್ಕಳಿಗೆ ಇಷ್ಟು ಬೇಗ ಶಾಲೆಗಳನ್ನು ಆರಂಭಿಸುವುದೇ ಬೇಡ ಎನ್ನುವ ಅಭಿಪ್ರಾಯ.
ಹೀಗಿದ್ದಾಗಲೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನೀವು ಶಾಲೆಗಳನ್ನು ಆರಂಭಿಸುವ ಮೊದಲು ಪೋಷಕರ ಅಭಿಪ್ರಾಯವನ್ನು ಕೇಳಬೇಕು ಎಂದು ಒಂದು ನಿರ್ದೇಶನ ಬಂದಿದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ಕೆ ಧ್ರಕ್ಕೆ ಮತ್ತೆ ವರದಿಯನ್ನು ನೀಡಬೇಕಾಗಿರುವುದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಅನುದಾನ ರಹಿತ ಖಾಸಗಿ ಶಾಲೆಗಳು ಹೀಗೆ ಎಲ್ಲಾ ಶಾಲೆಗಳಿಗೂ ಕೂಡ ಒಂದು ಸುತ್ತೋಲೆಯನ್ನು ಕಳುಹಿಸಲಾಗಿದೆ. ಈ ಸುತ್ತೋಲೆಯ ಮುಖ್ಯ ಉದ್ದೇಶ ಏನು ಅಂದರೆ ಎಲ್ಲಾ ಶಾಲೆಗಳಲ್ಲಿಯೂ ಪೋಷಕರ ಮೀಟಿಂಗ್ ನಡೆಯಬೇಕು. ಪೋಷಕರ ಸಭೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಪೋಷಕರ ಜೊತೆಗೆ ಶಾಲಾ ಅಭಿವೃದ್ಧಿ ಸಮಿತಿ (SDMC) ಯ ಸದಸ್ಯರನ್ನೂ ಕೂಡ ಈ ಸಭೆಗೆ ಪಾಲ್ಗೊಳ್ಳಲ್ಲು ಸೂಚನೆ ನೀಡಲಾಗಿದೆ. ಇದರ ಸಲುವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಜೂನ್ 10, 11, 12 ಈ ಮೂರು ದಿನಗಳಲ್ಲಿ ಸಭೆ ನಡೆಸಬೇಕು ಎಂದು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಸಭೆಯಲ್ಲಿ ಚರ್ಚೆ ಆಗುವ ವಿಷಯಕ್ಕೆ ಬಂದರೆ ಮೊದಲಿಗೆ ಯಾವಾಗಿನಿಂದ ಶಾಲೆಯನ್ನು ಆರಂಭ ಮಾಡಬೇಕು? ಎಂದು. ಸುತ್ತೋಲೆಯಲ್ಲಿ ಹೀಗೆ ಒಂದು ಪ್ರಸ್ತಾವನೆಯನ್ನು ಮಾಡಲಾಗಿದ್ದು, ಇದು ಮುಂದೆ ಎಲ್ಲಾ ಶಾಲೆಗಳಲ್ಲಿ ನಡೆಯುವ ಚರ್ಚೆಗಳಿಗೆ ಪೂರಕವಾಗಿರಲಿ ಎಂದಾಗಿತ್ತು. ಇದರಲ್ಲಿ ಜುಲೈ ತಿಂಗಳಿನಲ್ಲಿ ಕೆಲವು 1 , 3 ,5 , ಹೀಗೆ ಜುಲೈ 15ನೇ ತಾರೀಕಿನವರೆಗೂ ಕೆಲವು ದಿನಾಂಕಗಳನ್ನು ಗುರುತುಪಡಿಸಿ ಈ ದಿನಗಳಂದು ಶಾಲೆ ಆರಂಭಿಸಲು ಪಾಲಕರ ಒಪ್ಪಿಗೆ ಪಡೆಯಲು ಕಳುಹಿಸಲಾಗಿತ್ತು.ಪಾಲಕರ ಅಭಿಯೋರಾಯ ಸಂಗ್ರಹ ಮಾಡಿ ಅವುಗಳನ್ನು ಕ್ರೂಢೀಕರಿಸಿ ಮತ್ತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಆದರೆ ಬಹು ಜನರ ಅಭಿಪ್ರಾಯ ಏನು ಅಂದರೆ ಸಧ್ಯಕ್ಕೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಬೇಡ ಎಂದೇ ಆಗಿತ್ತು. ಇನ್ನೂ ಎರಡನೆಯ ವಿಷಯವಾಗಿ. ತರಗತಿಗಳನ್ನು ಹೇಗೆ ಸಾಮಾಜಿಕ ಅಂತರ ಇಟ್ಟುಕೊಂಡು ನಡೆಸುವುದು ಎಂದಾಗಿತ್ತು. ಸಾಮಾಜಿಕ ಅಂತರ ಇಲ್ಲದೆ ಏನನ್ನೂ ನಡೆಸಲು ಸಾಧ್ಯವಿಲ ಹಾಗಾಗಿ ತರಗತಿಯ ಒಳಗೆ ಮತ್ತು ಹೊರಗೆ ಹೇಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಎನ್ನುವುದಾಗಿತ್ತು. ಮೂರನೆಯದಾಗಿ ಮಕ್ಕಳ ಹಿತಕ್ಕಾಗಿ ಶಾಲೆಯಲ್ಲಿ ಯಾವ ಯಾವ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬಹುದು? ಇವೆಲ್ಲಕ್ಕೂ ಜೂನ್ 15 ರ ನಂತರ ಮಾಹಿತಿ ದೊರೆಯಲಿದ್ದು ಆ ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇಲ್ಲಿ ಎರಡು ಮುಖ್ಯವಾದ ಅಂಶಗಳನ್ನು ಗಮನಿಸುವುದಾದರೆ, ಕರೋನ ಸಂಪೂರ್ಣವಾಗಿ ಹೋಗುವವರೆಗೂ ಶಾಲೆಯನ್ನು ಆರಂಭಿಸಲೇ ಬಾರದು ಎಂದು, ಇನ್ನೊಂದು, ಈ ಕರೊನ ಇನ್ನೂ ಬಹಳಷ್ಟು ದಿನ ಇರತ್ತೆ ಹಾಗಾಗಿ ನಾವೂ ಕೂಡಾ ಅದರ ಜೊತೆ ಜೊತೆಗೆ ಬದುಕೊವುದನ್ನೂ ಕೂಡ ಅಭ್ಯಾಸ ಮಾಡಿಕೊಳ್ಳಬೇಕು. ಈಗ ಹಲವಾರು ರೋಗಗಳ ಜೊತೆ ಬದುಕುತ್ತಾ ಇರುವ ಹಾಗೆಯೇ ಇದರ ಜೊತೆಗೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಆಗಾಗ ಕೈ ಸ್ವಚ್ಛ ಮಾಡಿಕೊಳ್ಳುವುದು ಹೀಗೇ ಇಂತಹ ನಿಯಮಗಳನ್ನು ಪಾಪಲನೆ ಮಾಡಿಕಿಂದು ಮುಂದುವರೆಯಬಹುದು ಎಂದು ಇನ್ನೂ ಕೆಲವರ ಅಭಿಪ್ರಾಯ. ಹೀಗೆ ಎಲ್ಲರ ಅಭಿಪ್ರಾಯವನ್ನೂ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಶಾಲೆಗಳು ಆರಂಭ ಆದನಂತರ ಮಕ್ಕಳ ಕಲಿಕೆ ನಿರಂತರವಾಗಿ ಇರೊದಕ್ಕೆ ಏನು ಪರಿಹಾರ ಎನ್ನುವುದರ ಬಗ್ಗೆ ಕೂಡಾ ಚಿಂತನೆ ನಡೆಯುತ್ತಿದೆ.
ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆಯೇ ಚಂದನ ವಾಹಿನಿಯ ಮೂಲಕ SSLC ಮಕ್ಕಳಿಗೆ ರಿವಿಜನ್ ಕ್ಲಾಸ್ ಗಳನ್ನು ನಡೆಸಲಾಗಿತ್ತು. ಇದು ಬಹಳಷ್ಟು ಯಶಸ್ವಿ ಆಗಿದ್ದು ಜೂನ್ 10 ರಿಂದ ಮತ್ತೊಮ್ಮೆ 10 ದಿನಗಳ ಕಾಲ ಮಕ್ಕಳಿಗೆ ಪರೀಕ್ಷೆಗೆ ಯಾವ ರೀತಿ ಸಿದ್ಧ ಆಗಬೇಕು ಎನ್ನುವುದರ ಬಗ್ಗೆ ಕೂಡ ತಿಳಿಸಿಕೊಡಲಾಗುತ್ತೆ. ಹಾಗಾಗಿ ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಗೆ ಎಂದೇ ಶಿಕ್ಷಣ ನೀಡುವ ಸಲುವಾಗಿಯೇ ಇಂದು ಚಾನೆಲ್ ಅನ್ನು ಪಡೆಯುವ ನಿರ್ಧಾರವನ್ನೂ ಸಹ ಮಾಡಲಾಗುತ್ತಿದೆ. ಈ ಚಾನೆಲ್ ನ ಮೂಲಕ ಯಾವೆಲ್ಕ ಮಕ್ಕಳಿಗೆ ಕರೋನ ಇಂದಾಗಿ ಶಾಲೆಗೆ ಬರಲು ಸಾಧ್ಯ ಇಲ್ಲ ಅಂತವರಿಗೆ ಯಾವ ರೀತಿ ಪಾಠ ಮಾಡಬಹುದು ಯಾವೆಲ್ಲ ಚಟುವಟಿಕೆಗಳನ್ನು ನೀಡಬಹುದು ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ.
ಹಾಗಾಗಿ ಈ ಹಿನ್ನೆಯಲ್ಲಿ ಮಾನ್ಯ ಶಿಕ್ಷಣ ಸಚಿವರು ಎಲ್ಲರಿಗೂ ಸ್ಪಷ್ಟ ಪಡಿಸುವ ಒಂದು ವಿಷಯವೆಂದರೆ, ಶಿಕ್ಷಣ ಇಲಾಖೆ ತರಾತುರಿಯಲ್ಲಿ ಯಾವುದೇ ಶಾಲೆಗಳನ್ನೂ ಆರಂಭ ಮಾಡುವುದಿಲ್ಲ. ಮುಂದೆ ಮಕ್ಕಳ ಸುರಕ್ಷತೆ, ಮಕ್ಕಳ ಶಿಕ್ಷಣ ಇದ್ಯಾವುದಕ್ಕೂ ತೊಂದರೆ ಆಗದೆ ಇರುವ ಹಾಗೆ ಮುಂದೆ ಹೆಜ್ಜೆ ಇಡುವುದಾಗಿ ಸಚಿವರು ತಿಳಿಸಿದ್ದಾರೆ.