ಆನ್ಲೈನ್ ಮೂಲಕ ಹೊಸ ಪಾನ್ ಕಾರ್ಡ್ ಪಡೆಯುವುದು ಇನ್ನು ಸುಲಭ

0 0

ಇವತ್ತಿನ ಈ ಲೇಖನದಲ್ಲಿ ಕೇವಲ 10 ನಿಮಿಷಗಳಲ್ಲಿ ಪಾನ್ ಕಾರ್ಡ್ ಹೇಗೆ ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಸಿಕೊಡುತ್ತಾ ಇದ್ದೇವೆ. ನಮ್ಮ ನಮ್ಮ ಮೊಬೈಲ್ ಫೋನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ಕೇವಲ ಹತ್ತು ನಿಮಿಷದಲ್ಲಿ ಸರ್ಕಾರದಿಂದ ಹೊಸ ಪಾನ್ ಕಾರ್ಡ್ ಅನ್ನು ಪಡೆಯಬಹುದು. ಮೊಬೈಲ್ ನಲ್ಲಿ ಡೌಲ್ನೋಡ್ ಕೂಡ ಮಾಡಿಕೊಳ್ಳಬಹುದು. ಹೇಗೆ ಅನ್ನೋದನ್ನ ನೋಡೋಣ.

ಹೊಸ ಪಾನ್ ಕಾರ್ಡ್ ಅನ್ನು ನಾವೇ ಮೊಬೈಲ್ ಫೋನ್ ಮೂಲಕ ಪಡೆದುಕೊಳ್ಳಲು ಮೊದಲು ನಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಜೊತೆ ಕಡ್ಡಾಯವಾಗಿ ಲಿಂಕ್ ಆಗಿರಲೇ ಬೇಕು. ಹಾಗಿದ್ದಲ್ಲಿ ಮಾತ್ರ ಪಾನ್ ಕಾರ್ಡ್ ಪಡೆಯಲು ಸಾಧ್ಯ.

ವೆಬ್ಸೈಟ್ ಲಿಂಕ್ :- https://www.incometaxindiaefiling.gov.in/home
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪ್ರೇಸೀಜರ್ ಆರಂಭಿಸಬಹುದು. ಈ ಲಿಂಕ್ ಬಳಸಿ ಪೇಜ್ ಒಪನ್ ಆದಾಫಾ ಹಲವಾರು ಆಪಶನ್ಸ್ ಕಾಣತ್ತೆ ಹಾಗಾಗಿ ಗೊಂದಲ ಮಾಡಿಕೊಳ್ಳದೆ ಎಡಭಾಗದಲ್ಲಿ ಕಾಣುವ ಎರಡನೇ ಅಪ್ಶನ್ “instant pan card thruogh adhaar” ಇದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೂಡ ಇನ್ನೊಂದು ಹೊಸ ಪೆಗ್ ಒಪನ್ ಆಗತ್ತೆ ಹಾಗೆ ಅಲ್ಲಿಯೂ ಮತ್ತೆ 2 ಆಪ್ಶನ್ಸ್ ಕಾಣತ್ತೆ ಅಲ್ಲಿ “get new pan card” ಮೇಲೆ ಕ್ಲಿಕ್ ಮಾಡಿ, ಪಕ್ಕದಲ್ಲಿ check status ಅಥವಾ download pan card ಅಂತ ಇರತ್ತೆ ಅಲ್ಲಿ ಕೂಡ ಕನ್ಫ್ಯೂಸ್ ಮಾಡಿಕೊಳ್ಳದೆ “””get new pan card”” ಮೇಲೆ ಕ್ಲಿಕ್ ಮಾಡಿಕೊಳಬೇಕು.

ಇಲ್ಲಿ ನಾವು ಮುಖ್ಯವಾಗಿ 5 ಸ್ಟೆಪ್ ಗಳನ್ನು ಅನುಸರಿಸಬೇಕು. ಹಾಗಾಗಿ ಮೊದಲು ನಮ್ಮ ಆಧಾರ್ ಕಾರ್ಡ್ ನಂಬರ್ ಅನ್ನುಕೊಟ್ಟಿರುವ ಬಾಕ್ಸ್ ನಲ್ಲಿ ಸರಿಯಾಗಿ ಟೈಪ್ ಮಾಡಬೇಕು.
ನಂತರ ಕೆಳಗಡೆ ಒಂದು ಕ್ಯಾಪ್ಚರ್ ಕೋಡ್ ಬರತ್ತೆ ಅದನ್ನ ಸರಿಯಾಗಿ ಎಂಟರ್ ಮಾಡಿ ಹಾಗೆ ಅದರ ಕೆಳಗೆ ಕಾಣುವ ಬಾಕ್ಸ್ ನಲ್ಲಿ ಮತ್ತೊಮ್ಮೆ ಅದೇ ಕೋಡ್ ಎಂಟರ್ ಮಾಡಬೇಕು.
ನಂತರ ಕೆಳಗಡೆ ಚಿಕ್ಕ ಬಾಕ್ಸ್ ನಲ್ಲಿ “I conformed that” ಅನ್ನೋ ಅಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ genaret adhara OTP ಅನ್ನೋ ಅಪ್ಶನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಂದ ಮುಂದಿನ ಪೇಜ್ ಓಪನ್ ಆಗತ್ತೆ. ಆ ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರತ್ತೇ ಆ OTP ನಂಬರ್ ನ ಕೆಳಗೆ ಕೊಟ್ಟೋರುವ ಬಾಕ್ಸ್ ನಲ್ಲಿ ತುಂಬಿ ಕೆಳಗೆ I agreed to valied. ಅನ್ನೋ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ velidet adhar OTP ಮೇಲೆ ಕ್ಲಿಕ್ ಮಾಡಿದ್ರೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಡಿಟೈಲ್ಸ್ ಕಾಣತ್ತೆ.

ಆ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಹೆಸರು, ಡೇಟ್ ಆಫ್ ಬರ್ತ್ ಎಲ್ಲವನ್ನೂ ಒಮ್ಮೆ ಸರಿಯಾಗಿ ನೋಡಿ ಚೆಕ್ ಮಾಡಿಕೊಂಡು ಕೆಳಗಡೆ ಬಾಕ್ಸ್ ನಲ್ಲಿ I Accept that ಮೇಲೆ ಕ್ಲಿಕ್ ಮಾಡಿ ನಂತರ submit pan request ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಪ್ಯಾನ್ ಕಾರ್ಡ್ ಗೆ ರಿಕ್ವೆಸ್ಟ್ ಕಲಿಯಿಸಿದ್ದೀರಾ ಎಂದು ಒಂದು ರಿಕ್ವೆಸ್ಟ್ ನಂಬರ್ ಕೂಡ ಸಿಗತ್ತೆ.

ನಂತರ ಒಂದು 10 / 15 ನಿಮಿಷ ಬಿಟ್ಟು ಹೋಮ್ ಪೇಜ್ ಗೆ ಬಂದು ಅಲ್ಲಿ instant pan through adhar ಮೇಲೆ ಮತ್ತೆ ಕ್ಲಿಕ್ ಮಾಡಿ check status or download pan card ಮೇಲೆ ಕ್ಲಿಕ್ ಮಾಡಿ ನಂತರ ಆಧಾರ್ ನಂಬರ್ ಎಂಟರ್ ಮಾಡಿ ನಂತರ ಕ್ಯಾಪ್ಚರ್ ಎಂಟರ್ ಮಾಡಿಕೊಂಡು ನಂತರ submit ಮೇಲೆ ಕ್ಲಿಕ್ ಮಾಡಬೇಕು.

Submit ಮೇಲೆ ಕ್ಲಿಕ್ ಮಾಡಿದರೆ ಮತ್ತೆ ನಿಮ್ಮ ಮೊಬೈಲ್ ಗೆ ಒಂದು OTP ಬರತ್ತೆ. ಆ OTP ಯನ್ನು ಎಂಟರ್ ಮಾಡಿ submit ಮೇಲೆ ಕ್ಲಿಕ್ ಮಾಡಬೇಕು. ನಂತರ ಡೌನ್ಲೋಡ್ pan card ಮೇಲೆ ಕ್ಲಿಕ್ ಮಾಡಿದ್ರೆ ಒಂದು PDF ಮೂಲಕ ಬಳ ಭಾಗದಲ್ಲಿ ನಿಮಗೆ ನಿಮ್ಮ ಪ್ಯಾನ್ ಕಾರ್ಡ್ ಕಾಣಿಸತ್ತೆ. ಆ PDF ಅನ್ನು ಓಪನ್ ಮಾಡಲು ನಮ್ಮ ನಮ್ಮ ಡೇಟ್ ಆಫ್ ಬರ್ತ್ ಎಂಟರ್ ಮಾಡಿ, ಪಾಸ್ವರ್ಡ್ ಕೂಡ ಎಂಟರ್ ಮಾಡಬೇಕು. ಅಂದರೆ ನಮ್ಮ ಡೇಟ್ ಆಫ್ ಬರ್ತ್, ತಿಂಗಳು ಹಾಗೂ ವರ್ಷ ಇಲ್ಲಿ ಪಾಸ್ವರ್ಡ್ ಆಗಿರತ್ತೆ. ನಂತರ ಅದನ್ನ ಕಾಪಿ ತೆಗೆಸಿ ಕಟ್ ಮಾಡಿ ಲ್ಯಾಮಿನೇಶನ್ ಮಾಡಿಟ್ಟುಕೊಳ್ಳಬಹುದು. ಹೀಗೆ ಸರ್ಕಾರದ ಕಡೆಯಿಂದಲೇ ಪಡೆದುಕೊಂಡ ಪ್ಯಾನ್ ಕಾರ್ಡ್ ಅನ್ನು ಇದು ಮಾನ್ಯತೆ ಹೊಂದಿರುವುದರಿಂದ ನೀವು ಎಲ್ಲ ಬ್ಯಾಂಕ್ ಗಳಲ್ಲಿ ಕೂಡಾ ಬಳಸಲೂಬಹುದು. ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಉಳಿದ ಯಾವ ದಿನ ಮಾಡಿದ್ರೂ ಕೂಡ ನಿಮಗೆ ಕೇವಲ 10 ನಿಮಿಷದಲ್ಲಿ ಕೇಲಸ ಆಗತ್ತೆ ಇಲ್ಲ ಅಂದ್ರೆ ಸ್ವಲ್ಪ ತಡವಾಗಿ ಆಗತ್ತೆ.

Leave A Reply

Your email address will not be published.