ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅನ್ವಯ ಪ್ರತಿ ಕುಟುಂಬಕ್ಕೆ ಸಾರ್ವಜನಿಕ ಪಡಿತರ ವಿತರಣೆ ಕಡ್ಡಾಯವಾಗಿದೆ ಆದರೆ ಆಹಾರ, ನಾಗರಿಕ ಪೂರೈಕೆ ಗ್ರಾಹಕ ವ್ಯವಹಾರಗಳ ಇಲಾಖೆಯ ಕೆಲವು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ರದ್ದಾಗಿರುವಂತಹ ಲಿಸ್ಟ್ ನ್ನು ಬಿಡುಗಡೆ ಮಾಡಿದ್ದಾರೆ. ಅದನ್ನು ನೋಡುವಂತಹ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ
ತುಂಬಾ ಜನರು ಸರಿಯಾದ ಪಡಿತರ ಸಂಖ್ಯೆಯನ್ನು ಹಾಕಿ ಪರಿಶೀಲಿಸಿದಾಗ ಡಾಟಾ ನಾಟ್ ಪೊಂಡ್ ಅಥವಾ ನಾಟ್ ವ್ಯಾಲಿಡ್ ಅಂತ ಬರುತ್ತದೆ ಅದು ಯಾವ ಕಾರಣಕ್ಕೆ ಬರುತ್ತದೆ ಅಂದರೆ ತುಂಬಾ ಪಡಿತರಚಿಟಿಗಳನ್ನು ರದ್ದು ಮಾಡಲಾಗಿದೆ. ಕೆಲವು ಬೇಡಿಕೆ ಇಲ್ಲದಿರುವಂತ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಆದ್ದರಿಂದ ನೀವು ಎರಡು ನಿಮಿಷದಲ್ಲಿ ರೇಶನ್ ಕಾರ್ಡ್ ರದ್ದು ಆಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.
ನೀವು ಮೊದಲಿಗೆ ಆಹಾರ ಇಲಾಖೆಯ ವೆಬ್ ಸೈಟ್ ಅನ್ನು ತೆರೆದು ಅಲ್ಲಿ ಇ- ಸೇವೆಗಳು ಅನ್ನುವುದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಪಡಿತರ ಚೀಟಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದರ ಕೆಳಗೆ ಕೆಲವು ಆಯ್ಕೆಗಳು ಬರುತ್ತವೆ ಅದರಲ್ಲಿ ರದ್ದುಗೊಳಿಸಿರುವ ಅಥವಾ ತಡೆಹಿಡಿಯಲಾದ ಪಟ್ಟಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆಗ ಅಲ್ಲಿ ರದ್ದುಗೊಳಿಸಿರುವ ಮತ್ತು ತಡೆಹಿಡಿಯಲಾದ ಪಟ್ಟಿ ಕಾಣಿಸುತ್ತದೆ
ಅಲ್ಲಿ ನೀವು ನಿಮ್ಮ ಜಿಲ್ಲೆ ತಾಲ್ಲೂಕನ್ನೂ ಆಯ್ಕೆ ಮಾಡಿ ಕೊಳ್ಳಿ ನಂತರ ತಿಂಗಳು ಬರುತ್ತದೆ ಅಲ್ಲಿ ಯಾವ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೋ ಆ ತಿಂಗಳಿನಲ್ಲಿ ರದ್ದಾಗಿರುವ ರೇಶನ್ ಕಾರ್ಡ್ ಮಾಹಿತಿ ಅಲ್ಲಿ ಸಿಗುತ್ತದೆ.ಪ್ರತಿ ತಿಂಗಳು ರೇಶನ್ ಕಾರ್ಡ್ ಗಳು ಬೇರೆ ಬೇರೆ ಕಾರಣಗಳಿಂದ ರದ್ದಾಗುತ್ತಿರುತ್ತವೆ ಅವುಗಳ ಮಾಹಿತಿ ಅಲ್ಲಿ ಸಿಗುತ್ತದೆ.
ಇಗ ಪ್ರಸ್ತುತ ಆಗಸ್ಟ್ ತಿಂಗಳು ಇರುವುದರಿಂದ ಅದನ್ನು ಆಯ್ಕೆ ಮಾಡಿಕೊಂಡು ವರ್ಷವನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಗೋ ಎಂಬುದರ ಮೇಲೆ ಕ್ಲಿಕ್ ಮಾಡಿ ಆಗ ರದ್ದಾಗಿರುವ ಪಡಿತರ ಚೀಟಿಗಳು ಕಾಣಿಸಿಕೊಳ್ಳುತ್ತದೆ ಅಲ್ಲಿ ಪಡಿತರ ಚೀಟಿ ಸಂಖ್ಯೆ ಇರುತ್ತದೆ ಹೆಸರು ಮತ್ತು ರದ್ದಾಗಿರುವ ದಿನಾಂಕ ಇರುತ್ತದೆ.
ಅಲ್ಲಿ ಯಾವ ಕಾರಣದಿಂದ ರದ್ದಾಗಿದೆ ಎಂಬ ಮಾಹಿತಿ ನೀಡಿರುತ್ತಾರೆ. ಈ ರೀತಿಯಾಗಿ ನೀವು ನಿಮ್ಮ ಜಿಲ್ಲೆ ತಾಲೂಕಿನಲ್ಲಿ ರದ್ದಾಗಿರುವ ರೇಶನ್ ಕಾರ್ಡ್ ಗಳಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೆ ಎಂಬುದನ್ನು ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು.