ಕೆಲವರಿಗೆ ಕಂಪನಿಯಲ್ಲಿ ಕೆಲಸ ಮಾಡಬೇಕು, ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ಶಿಕ್ಷಕನಾಗಬೇಕು ಎಂಬೆಲ್ಲಾ ಹಲವು ಆಸೆಗಳಿರುತ್ತವೆ. ಹುದ್ದೆ ಸಿಕ್ಕ ತಕ್ಷಣ ಐಶಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಶ್ರೀ ಪಿ ರಾಜೀವ್ ಎಂಬುವವರು ಸಬ್ ಇನ್ಸಪೆಕ್ಟರ್ ಹುದ್ದೆಯಿಂದ ಜನಸೇವೆ ಮಾಡಲು ಶಾಸಕರಾಗಿ ಆಯ್ಕೆಯಾಗುತ್ತಾರೆ. ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಶ್ರೀ ಪಿ ರಾಜೀವ್ ಅವರು ಎಂಟನೆ ಕ್ಲಾಸಿಗೆ ಹಾಸ್ಟೆಲಿಗೆ ಬರುತ್ತಾರೆ. ಅವರು ಜೀವನದಲ್ಲಿ ಎರಡು ಗುರಿಯನ್ನು ಹೊಂದಿದ್ದರು ಮೊದಲನೇಯದು ಯಾರಿಗೂ ಲಂಚ ಕೊಡದೆ ನೌಕರಿಯನ್ನು ಪಡೆಯಬೇಕು, ಎರಡನೇಯದು ವರದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾಗಬೇಕು ಎಂದು. ಅವರು ಓದಿ ಸಬ್ಇನ್ಸಪೆಕ್ಟರ್ ಇಂಟರ್ವ್ಯೂಗೆ ಲಾಡ್ಜ್ ನಲ್ಲಿ ಉಳಿದರೆ ಹಣ ಖರ್ಚಾಗುತ್ತದೆ ಎಂದು ಮೂವತ್ತು ರೂಪಾಯಿ ಕೊಟ್ಟು ನೌಕರರ ಭವನದಲ್ಲಿ ಉಳಿಯುತ್ತಾರೆ.

ರಾಜೀವ್ ಅವರು ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಓದುತ್ತಾರೆ. ಅವರು ದಲಿತ ಸೂರ್ಯ ಎಂಬ ಪುಸ್ತಕವನ್ನು ಓದುತ್ತಾರೆ. ರಾಜೀವ್ ಅವರು ಪುಸ್ತಕಗಳನ್ನು ಓದುತ್ತಾ ಅಂಬೇಡ್ಕರ್ ಅವರ ಬಗ್ಗೆ ತಿಳಿಯುತ್ತಾ ಹೋದಂತೆ ವ್ಯವಸ್ಥೆಯ ಬಗ್ಗೆ ಅಸಮಾಧಾನ ಉಂಟಾಗುತ್ತದೆ.

ಪೊಲೀಸ್ ವ್ಯವಸ್ಥೆಯಲ್ಲಿ ಹಣ ಇರುವವರು ಸಾಮಾಜಿಕ ಹೋರಾಟಗಾರರನ್ನು ಯಾವುದೊ ಒಂದು ಕೇಸ್ ನಲ್ಲಿ ಪಿಟ್ ಮಾಡಿ ಶಿಕ್ಷೆ ಕೊಡಿಸುತ್ತಿದ್ದರು. ರಾಜೀವ್ ಅವರು ತಮ್ಮ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಅಪ್ಪ-ಅಮ್ಮನನ್ನು ಕರೆದುಕೊಂಡು ಬಂದಿದ್ದರು. ಪೊಲೀಸ್ ವ್ಯವಸ್ಥೆಯಿಂದ ಬೇಸತ್ತ ರಾಜೀವ್ ಅವರು ಪೊಲೀಸ್ ಕೆಲಸವನ್ನು ಬಿಟ್ಟು ಎಲೆಕ್ಷನ್ ಗೆ ನಿಲ್ಲಬೇಕೆಂದು ನಿರ್ಧಾರ ಮಾಡುತ್ತಾರೆ. ರಾಜೀವ್ ಅವರ ಹೆಂಡತಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ ಮುಂದಿನದು ಏನೆ ಆದರೂ ಅನುಭವಿಸೋಣ ಎಂದು ಹೇಳುತ್ತಾರೆ.

ಮೊದಲ ಸಾರಿ ಎಲೆಕ್ಷನ್ ಗೆ ನಿಂತಾಗ 8,000 ಮತಗಳಿಂದ ಸೋಲನ್ನು ಅನುಭವಿಸುತ್ತಾರೆ. ರಾಜಕೀಯಕ್ಕೆ ಬರಬೇಕೆಂದರೆ ಮೂರು ಅಂಶಗಳು ಮುಖ್ಯವಾಗಿ ಬೇಕು ಹಣ, ರಾಜಕೀಯ ಹಿನ್ನೆಲೆ, ಜಾತಿ. ಈ ಮೂರು ಬೆಂಬಲ ರಾಜೀವ್ ಅವರಿಗೆ ಇರಲಿಲ್ಲ. ಪ್ರತಿಯೊಬ್ಬರೂ ಸಮಾಜಕ್ಕೆ ನಾನೇನು ಕೊಡಬಲ್ಲೆ ಎಂಬುದರ ಬಗ್ಗೆ ಆಲೋಚನೆ ಮಾಡಬೇಕು.

ನಾವಿರುವ ಸ್ಥಾನದಿಂದಲೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬಹುದು ಎಂದು ರಾಜೀವ್ ಅವರು ಹೇಳಿದರು. ನಾವು ಯಾವುದರಲ್ಲಿ ಸಂತ್ರಪ್ತಿ ಕಾಣುತ್ತೇವೆ ಎನ್ನುವುದು ಕೂಡ ಮುಖ್ಯವಾಗಿದೆ. ಬೇರೆಯವರ ಐಶಾರಮಿ ಜೀವನದ ಬಗ್ಗೆ ಯೋಚನೆ ಮಾಡಬಾರದು. ಎರಡನೆ ಬಾರಿ ಎಲೆಕ್ಷನ್ ಗೆ ನಿಂತು ಗೆಲುವನ್ನು ಪಡೆಯುತ್ತಾರೆ.

ರಾಜಕೀಯಕ್ಕೆ ಸೇರಿದವರ ಮೊದಲ ಗುರಿ ಸಂವಿಧಾನದ ಆಶೋತ್ತರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು ಎನ್ನುವುದಾಗಿದೆ. ರಾಜೀವ್ ಅವರು ಅವರ ಮತಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಅವರು ಈಗ ಕುಡಚಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜೀವ್ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಜನಪರ ಕೆಲಸಗಳನ್ನು ಮಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!