Karnataka MLA Yatnal: ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದಾಗಿ ರಾಜ್ಯದ ಎಲ್ಲಾ ಗೃಹಿಣಿಯರಿಗೆ ಸರ್ಕಾರದಿಂದ ಸಹಾಯ ಆಗುತ್ತಿದೆ. ಹಬ್ಬದ ಸೀಸನ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿರುವುದು ಹೆಚ್ಚು ಅನುಕೂಲ ಎಂದರೆ ತಪ್ಪಲ್ಲ. ಇದೊಂದೇ ಅಲ್ಲದೆ, ಅನ್ನಭಾಗ್ಯ ಯೋಜನೆಯ 5ಕೆಜಿ ಅಕ್ಕಿ ಬದಲಿನ ಹಣ ಕೂಡ ಸಿಗುತ್ತಿದೆ. ಇದರ ಬೆನ್ನಲ್ಲೇ ಹಬ್ಬದ ವೇಳೆ ಈ ಜಿಲ್ಕೆಯ ಜನರಿಗೆ ವಿಶೇಷ ಕೊಡುಗೆ ಸಹ ಸಿಗುತ್ತಿದೆ. ಅದೇನು ಎಂದು ತಿಳಿಸುತ್ತೇವೆ ನೋಡಿ..
ಈ ಗಿಫ್ಟ್ ಯಾರಿಗೆ ಎಂದರೆ ವಿಜಯಪುರ ಜಿಲ್ಲೆಯ ಜನರಿಗೆ ಅಲ್ಲಿನ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕಡೆಯಿಂದ ಬಂಪರ್ ಗಿಫ್ಟ್ ಸಿಗುತ್ತಿದೆ. ಯತ್ನಾಳ್ ಅವರು ಈ ವರ್ಷ ದೀಪಾವಳಿ ಹಬ್ಬಕ್ಕೆ ಅವರ ಕ್ಷೇತ್ರದ ಎಲ್ಲಾ ಮನೆಗಳಿಗೆ 2000 ರೂಪಾಯಿ ನೀಡುವುದಾಗಿ ಗುಡ್ ನ್ಯೂಸ್ ಹೇಳಿದ್ದಾರೆ. ಈ ಸುದ್ದಿ ಒಂದು ರೀತಿಯಲ್ಲಿ ಎಲ್ಲರಿಗೂ ಸರ್ಪ್ರೈಸ್ ಎಂದರೆ ತಪ್ಪಲ್ಲ, ಏಕೆಂದರೆ ಬಸವನಗೌಡ ಪಾಟೀಲ್ ಅವರು ಬಜೆಪಿ ಪಕ್ಷದವರು ಆದರೆ ಈಗ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ ಪಕ್ಷ.
ಆದರೆ ಯತ್ನಾಳ್ ಅವರು ಈ ಬಂಪರ್ ಆಫರ್ ನೀಡಿರುವುದು ಆಶ್ಚರ್ಯಕರವಾಗಿದೆ, ಯತ್ನಾಳ್ ಅವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಕ್ಷೇತ್ರದ 11,000 ಕುಟುಂಬಗಳಿಗೆ 2000 ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಿಂತ ಮೊದಲು ಗಣೇಶ ಹಬ್ಬದ ಸಮಯದಲ್ಲಿ ಯತ್ನಾಳ್ ಅವರ ಕ್ಷೇತ್ರದಲ್ಲಿ 5000 ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಆಚರಿಸುವ ದೀಪಾವಳಿ ಹಬ್ಬದ ಸಮಯದಲ್ಲಿ ತಮ್ಮ ಕ್ಷೇತ್ರದ ಎಲ್ಲರೂ ಕೂಡ ಉತ್ತಮವಾಗಿ ಹಬ್ಬದ ಆಚರಣೆ ಮಾಡಬೇಕು ಎಂದು ಯತ್ನಾಳ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯತ್ನಾಳ್ ಅವರು ಈ ಬಗ್ಗೆ ಮಾತನಾಡಿದ್ದು, ಬೇರೆ ಎಲ್ಲರೂ ಎಲೆಕ್ಷನ್ ಇದ್ದಾಗ ಹಣ ಹಂಚುತ್ತಾರೆ, ಆದರೆ ನಾನು ದೀಪಾವಳಿ ಹಬ್ಬದ ಸಮಯದಲ್ಲಿ ನನ್ನ ಸ್ವಂತ ಹಣವನ್ನು ಜನರಿಗೆ ಕೊಡುತ್ತಿದ್ದೇನೆ. ಜನರು ಚೆನ್ನಾಗಿ ಹಬ್ಬದ ಆಚರಣೆ ಮಾಡಲಿ ಎಂದು ಹೇಳಿದ್ದಾರೆ.
ಜನರಿಗಾಗಿ ಇಷ್ಟೆಲ್ಲಾ ಮಾಡುತ್ತಿರುವ ಯತ್ನಾಳ್ ಅವರ ಬಗ್ಗೆ ಹೇಳುವುದಾದರೆ, ಇವರು ಬಿಕಾಂ ಓದಿದ್ದು, ಮೊದಲ ಸಾರಿ 1994 ರಲ್ಲಿ ವಿಜಯಪುರ ಎಲೆಕ್ಷನ್ ನಲ್ಲಿ ಆಯ್ಕೆಯಾಗಿ, ರಾಜಕೀಯದಲ್ಲಿ ಮೊದಲ ಸಾರಿ ಗೆಲುವು ಸಾಧಿಸಿದರು. 1999 ಹಾಗೂ 2004ರಲ್ಲಿ ಸಹ ವಿಜಯಪುರ ಕ್ಷೇತ್ರದಿಂದ ಎಲೆಕ್ಷನ್ ಗೆದ್ದರು. ಬಹಳ ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಗೆಲುವು ಸಾಧಿಸುತ್ತಿರುವ ಯತ್ನಾಳ್ ಅವರು ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ ಈ ಜಿಲ್ಲೆಯ ಮಹಿಳೆಯರಿಗೆ ಯತ್ನಾಳ್ ಕಡೆಯಿಂದ 2000 ಹಾಗು ಗೃಹಲಕ್ಷ್ಮಿ ಯೋಜನೆಯಿಂದ 2000 ಒಟ್ಟಾರೆ 4 ಸಾವಿರ ಸಿಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಯಲಾಗಿದೆ.
ಇದನ್ನೂ ಓದಿ 17 ವರ್ಷದ ವಿದ್ಯಾರ್ಥಿಯ ಜೊತೆಗೆ ಟೀಚರ್ ಲವ್ವಿ ಡವ್ವಿ, ಕೊನೆಗೆ ಹುಡುಗನ ಸ್ಥಿತಿ ಏನಾಗಿದೆ ಗೊತ್ತಾ..