ಜಮೀನಿನ ಸರ್ವೆಯನ್ನು ಪ್ರತಿಯೊಬ್ಬರೂ ಮಾಡಿಸುತ್ತಾರೆ. ಪ್ರತಿಯೊಂದು ಜಮೀನ ವಿಚಾರದಲ್ಲಿ ಹಿಸೆ ಮಾಡುವ ಸಂದರ್ಭದಲ್ಲಿ ಅಥವಾ ಇನ್ನಾವುದೇ ಕೆಲವೊಂದು ಜಮೀನ ವಿಸ್ತೀರ್ಣದ ಅಳತೆಯನ್ನು ತಿಳಿದುಕೊಳ್ಳಲು ಜಮೀನಿನ ಸರ್ವೆಯನ್ನು ಮಾಡಿಸುತ್ತಾರೆ. ಇದಕ್ಕಾಗಿಯೇ ಸರ್ಕಾರದಲ್ಲಿ ಒಂದು ವಿಭಾಗವಿರುತ್ತದೆ. ಕರ್ನಾಟಕ ಲ್ಯಾಂಡ್ ಸರ್ವೆ ವಿಭಾಗ ಈ ಕಾರ್ಯವನ್ನು ನಿರ್ವಹಿಸುತ್ತದೆ. ಕರ್ನಾಟಕದಲ್ಲಿ ಲ್ಯಾಂಡ್ ಸರ್ವೆ ಮಾಡಲು ಯಾವ ಚೈನನ್ನು ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಎಲ್ಲಾ ಭೂಮಾಪಕರು ಸರ್ವೆಯನ್ನು ಮಾಡಲು ಮೆಟ್ರಿಕ್ ಚೈನನ್ನು ಉಪಯೋಗಿಸುತ್ತಾರೆ. ಮೆಟ್ರಿಕ್ ಚೈನನ್ನು ಬಳಕೆ ಮಾಡಿದರು ಕೂಡ ಅಳತೆ ಮಾಡುವುದು ಆಣೆ ಪದ್ಧತಿಯಲ್ಲಾಗಿದೆ. ಸರ್ವೆ ಡಿಪಾರ್ಟ್ಮೆಂಟ್ ನಲ್ಲಿ ಉಪಯೋಗ ಮಾಡುವ ಚೈನು 10 ಮೀಟರ್ ಅಥವಾ 33 ಅಡಿ ಇರುತ್ತದೆ.10 ಮೀಟರ್ ನ ಜೈಲಿನಲ್ಲಿ 50 ಕೊಂಡಿಗಳು ಇರುತ್ತವೆ. ಒಂದು ಲಿಂಕು 20 ಸೆಂಟಿಮೀಟರ್ ಇರುತ್ತದೆ. 25 ಲಿಂಕಿನಲ್ಲಿ ಒಂದು ಹಿತ್ತಾಳೆ ಗುರಿ ಇರುತ್ತದೆ. ಆ ಗರಿಯಲ್ಲಿ ಎಂಟಾಣೆ ಅಂತ ಬರೆದಿರುತ್ತಾರೆ. ಒಂದು ಚೈನು 16 ಆಣೆ ಇರುತ್ತದೆ.
ಒಂದು ಆಣೆ ಎಂದರೆ 2.0625 ಅಡಿ ಆಗಿದೆ. ಆ ಚೈನಿನಲ್ಲಿ ಒಂದು ಆಣೆ ಎಂದರೆ ಮೂರು ಕೊಂಡಿಗಳು ಹಾಗೂ ಎಂಟಾಣಿ ಎಂದರೆ 25,26,27,28 ನೆಯ ಈ ನಾಲ್ಕು ಕೊಂಡಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಚೈನಿನ ಅಳತೆ ಚೈನಿನ ಹಿಡಿಯನ್ನು ಕೂಡ ಒಳಗೊಂಡಿರುತ್ತದೆ. ಅಳತೆ ಮಾಡುವಾಗ ಹಿಡಿಕೆಯ ಕೊನೆಯ ಭಾಗದಲ್ಲಿ ಮಾರ್ಕ್ ಇರುತ್ತದೆ. ಆ ಮಾರ್ಕಿನಲ್ಲಿ ಮೊಳೆಗಳನ್ನು ಇರಿಸಿ ಒಂದು ಹಿಡಿಕೆಯಿಂದ ಇನ್ನೊಂದು ಹಿಡಿಕೆಯವರೆಗೂ ಮೊಳೆಯನ್ನು ಹಾಕಬೇಕು. ಒಂದು ಎಕರೆಯಲ್ಲಿ 40 ಗುಂಟೆ ಇರುತ್ತದೆ. ಒಂದು ಗಂಟೆ ಎಂದರೆ ಒಂದು ಚೌಕಾಕಾರದಲ್ಲಿ ನಾಲ್ಕು ಕಡೆ ಒಂದು ಚೈನು ಉದ್ದ ಒಂದು ಚೈನು ಅಗಲ ಹಾಕಿದಾಗ ಅದು 1ಗುಂಟೆ ಆಗುತ್ತದೆ.
1ಗುಂಟೆ ಸಾವಿರ 1089 ಸ್ಕ್ವೇರ್ ಪೂಟ್ ಆಗಿದೆ. 1ಎಕರೆಗೆ 43560 ಸ್ಕ್ವಾರ್ ಪೂಟ್ ಆಗುತ್ತದೆ. ಜಮೀನಿನ ಅಳತೆಯನ್ನು ಅಂದಾಜು ಚೌಕಾಕಾರ ಅಥವಾ ಆಯತಾಕಾರದ ವಿಧದಲ್ಲಿ ಅಳೆಯಲಾಗುತ್ತದೆ. ಪ್ರತಿಯೊಂದು ರೀತಿಯಲ್ಲೂ ಇರುವ ಜಮೀನನ್ನು ಕೂಡ ಅದರದೇ ಆದ ಒಂದು ಫಾರ್ಮುಲಾವನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ರೀತಿಯ ವೇದದಲ್ಲಿರುವ ಜಮೀನನ್ನು ಕೂಡ ಕೆಲವು ಫಾರ್ಮುಲಾದ ಮೂಲಕ ಅಳತೆ ಮಾಡಲಾಗುತ್ತದೆ. ಈ ರೀತಿಯಾಗಿ ಚೈನಿನ ಮೂಲಕ ಜಮೀನಿನ ಅಳತೆಯನ್ನು ಕರ್ನಾಟಕ ಸರ್ವೇ ವಿಭಾಗದವರು ಅಳತೆ ಮಾಡುತ್ತಾರೆ.