ಇತ್ತೀಚಿನ ದಿನಗಳಲ್ಲಿ ಅಪಘಾತವಾಗಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅಲ್ಲದೆ ಅಪಘಾತವಾದಾಗ ಬಸ್ ಡ್ರೈವರ್ ನದೆ ತಪ್ಪು ಎಂಬ ಮಾತುಗಳು ಕೇಳಿಬರುತ್ತವೆ ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ಬಸ್ ಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವ ಮೂಲಕ ಅಪಘಾತವಾಗುವುದು ಕಡಿಮೆ ಆಗುತ್ತದೆ. ಹಾಗಾದರೆ ಬಸ್ ಗಳಲ್ಲಿ ಅಳವಡಿಸುವ ತಂತ್ರಜ್ಞಾನದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ಆಕ್ಸಿಡೆಂಟ್ ಸಾಮಾನ್ಯವಾಗಿದೆ. ಅಪಘಾತದಿಂದ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಾ ರಾಜ್ಯದ ತುಂಬೆಲ್ಲಾ ಓಡಾಡೋ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಜನರ ಪಾಲಿಗೆ ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆಯಲ್ಲಿ ಯಾವುದೆ ಅನಾಹುತಗಳು ಆಗದೆ ಇರಲಿ ಎಂದು ಸಂಸ್ಥೆಯವರು ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಬಸ್ ಗಳಲ್ಲಿ CWS & DDS ಎಂಬ ಎರಡು ತಂತ್ರಜ್ಞಾನದ‌ ಬಳಕೆ ಮಾಡಲಾಗುತ್ತದೆ. ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಬಸ್ ಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೆನ್ಸಾರ್ ಅಳವಡಿಸಲಾಗುತ್ತದೆ.‌ ಇದರಲ್ಲಿ ಕೊಲಿಜನ್ ವಾರ್ನಿಂಗ್ ಸಿಸ್ಟಮ್ (CWS) ಹಾಗೂ ಡ್ರೈವರ್ ಡ್ರೋಸಿನೆಸ್ ಸಿಸ್ಟಮ್ (DDS) ಎಂಬ ಎರಡು ತಂತ್ರಜ್ಞಾನವಿರಲಿದೆ.‌

ಬಸ್ ನ ಮುಂಭಾಗ ಹಾಗೂ ಡ್ರೈವರ್ ಬಳಿ ಕ್ಯಾಮರಾ ಅಳವಡಿಸಿ, ಒಂದು ಕ್ಯಾಮರಾ ಸುತ್ತಲಿನ 150 ಮೀಟರ್ ಒಳಗೆ ನಿಗದಿತ ದೂರಕ್ಕಿಂತ ಹತ್ತಿರಕ್ಕೆ ವಾಹನ ಬಂದರೆ 6 ಸೆಕೆಂಡ್ ಒಳಗಾಗಿ ಎಚ್ಚರಿಕೆ ನೀಡುತ್ತದೆ ಹಾಗೂ ಮತ್ತೊಂದು ಕ್ಯಾಮರಾ ಡ್ರೈವರ್ ನಿದ್ದೆ ಮಂಪರಿನಲ್ಲಿದ್ದರೆ ಸೆನ್ಸಸ್ ಮೂಲಕ ಶಬ್ಧ ಮಾಡಿ ಎಚ್ಚರಿಕೆ ನೀಡಲಿದೆ ಜೊತೆಗೆ ಈ ವಾರ್ನಿಂಗ್ ನೊಂದಿಗೆ ಚಾಲಕರು ರೂಲ್ಸ್ ಫಾಲೋ ಮಾಡುತ್ತಾ ಇದ್ದಾರಾ ಎಂಬ ಮಾಹಿತಿಯೂ ಕಂಟ್ರೋಲ್ ರೂಮ್ ಗೆ ಹೋಗಲಿದೆ. 1044 KSRTC ಬಸ್‌ಗಳಿಗೆ ವಿನೂತ‌ನ ಟೆಕ್ನಾಲಜಿ ಅಳವಡಿಕೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಮೊದಲ ಹಂತದಲ್ಲಿ 600 ಹವಾ ನಿಯಂತ್ರಿತ ಬಸ್ ಗಳಿಗೆ, 200 ರಾಜಹಂಸ ನಾನ್ ಎಸಿ ಬಸ್ ಗಳಿಗೆ ಹಾಗೂ 244 ಸಾಮಾನ್ಯ ಬಸ್ ಗಳು ಸೇರಿ ಒಟ್ಟು 1044 ಬಸ್ ಗಳಿಗೆ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.‌

ಒಂದು ತಿಂಗಳಲ್ಲಿ ಟೆಂಡರ್ ಮುಕ್ತಾಯವಾಗಿ ಇನ್ನು 3 ತಿಂಗಳ ಒಳಗಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಬಸ್ ಗಳು ಸಂಚರಿಸಲಿವೆ.‌ ಕೆಎಸ್ಆರ್ಟಿಸಿ ನಿಗಮದ ಈ ವ್ಯವಸ್ಥೆ ಉತ್ತಮವಾಗಿದೆ ಆದರೆ ಮೊದಲು 50 ಬಸ್ ಗಳಿಗೆ ಟ್ರಯಲ್ ಮಾಡಿ ನಂತರ ಪೂರ್ಣ ಪ್ರಮಾಣದಲ್ಲಿ ಅಳವಡಿಕೆ ಮಾಡಲಿ ಎಂದು ಟ್ರಾಫಿಕ್ ಎಕ್ಸ್ಫರ್ಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ವೊಲ್ವೋ ಬಸ್ ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು, ಮುಂದಿನ ಮೂರು ತಿಂಗಳ‌ ಒಳಗಾಗಿ ಕೆಎಸ್ಆರ್ಟಿಸಿ ಬಸ್ ಗಳಲ್ಲೂ ಸೆನ್ಸಾರ್ ಅಳವಡಿಸಲಾಗುತ್ತಿರುವುದು ಉತ್ತಮ‌ವಾಗಿದೆ. ಆದಷ್ಟು ಬೇಗ ಇದು ಜಾರಿಯಾಗಿ  ನೂತನ ತಂತ್ರಜ್ಞಾನದಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿ ಇದರಿಂದ ಜನತೆ ಸಮಾಧಾನ ಪಡುವಂತಾಗುತ್ತದೆ ಇದರೊಂದಿಗೆ ಬೈಕ್ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *