Govt of Karnataka: ಕರ್ನಾಟಕದ ರಾಜ್ಯಾದ್ಯಂತ ಬಗರ್ ಹುಕುಂ (Bagar Hukum) ಸಾಗುವಳಿದಾರರಿಗೆ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಅಥವಾ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ಉಳಿಮೆ ಮಾಡುವುದು ಅಥವಾ ಇರಲು ಸ್ವಂತ ಜಾಗ ಇಲ್ಲದೆ ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ ವಾಸಿಸಲು ಮನೆ ನಿರ್ಮಿಸಿಕೊಂಡವರಿಗೆ ಹಾಗೂ ಇನಾಮು ಜಮೀನು ಇದ್ದವರಿಗೆ ಮತ್ತು ತಂದೆ, ತಾತ ಹಾಗೂ ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದವರಿಗೆ ಸಿಹಿ ಸುದ್ದಿ

ಯಾವುದೇ ಆಸ್ತಿಯನ್ನು ಪೂರ್ವಜರ ಹೆಸರಿನಲ್ಲಿದ್ದು ಪ್ರಸ್ತುತ ಮಾಡುತ್ತಿರುವ ರೈತನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ರೈತರ ಬಳಿ ಯಾವುದೇ ರೀತಿಯ ಸಮರ್ಪಕ ದಾಖಲೆಗಳು ದೊರಕುತ್ತಿಲ್ಲ ಹಾಗೂ ರೈತರಿಗಾಗಿ ಕಚೇರಿಯಿಂದ ಕಚೇರಿಗೆ ದಾಖಲೆಗಳನ್ನು ಹಿಡಿದುಕೊಂಡು ಅಲೆಯ ಬೇಕಾದ ಪರಿಸ್ಥಿತಿ ಎದುರಾಗಿದ್ದು ನೂತನ ಸರ್ಕಾರದಿಂದ ನೂತನ ಯೋಜನೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ನೀಡುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ರೈತರ ಆಸ್ತಿ ನೊಂದಣಿ ಹಾಗೂ ಜಮೀನಿಗೆ ಸಂಬಂಧಿಸಿದ ಯಾವುದೇ ವಹಿವಾಟುಗೆ ತೊಂದರೆ ಉಂಟಾಗದಂತೆ ತಕ್ಷಣದಲ್ಲಿ ಕಾರ್ಯರೂಪಕ್ಕೆ ಬರುವಂತೆ ದೊಡ್ಡ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದ ನೂತನ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byregowda) ಅಗತ್ಯ ಕ್ರಮಕ್ಕೆ ಮುಂದಾಗಿದ್ದು ರಾಜ್ಯದಲ್ಲಿ ಕಂದಾಯ ನಿಯಮ ಹಾಗೂ ದಾಖಲೆಗಳ ಸಮಿತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಳ್ಳಲು ಮುಂದಾಗಿದ್ದು ಬಹುತೇಕ ರಾಜ್ಯದಲ್ಲಿ ಇದೇ ಮುಂದಿನ ಜುಲೈ 1 ರಿಂದ ಅನುಷ್ಠಾನಕ್ಕೆ ಬರಲಿದೆ ಹಾಗಾಗಿ ನೂತನ ಸಚಿವ ಕೃಷ್ಣ ಬೈರೇಗೌಡ ರಾಜ್ಯದ ಜನತೆಗಾಗಿ ಬಗರ್ ಹುಕುಂ ಸಾಗುವಳಿದಾರರಿಗೂ ಕೂಡ ಸಿಹಿ ಸುದ್ದಿ ನೀಡಿದ್ದಾರೆ.

ಬಗರ್ ಹುಕುಂ ಸಾಗುವಳಿದಾರರಿಗೂ ಸಚಿವ ಈಶ್ವರ್ ಕಂಡ್ರೆ (Minister Ishwar Kandre) ಸಿಹಿ ಸುದ್ದಿ ನೀಡಿದ್ದು ಶೀಘ್ರವೇ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ. ಬಗರ್ ಹುಕುಂ ಸಾಗುವಳಿಯ ಕುರಿತಂತೆ ಈಗಾಗಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸುತ್ತೋಲೆ ಕಳುಹಿಸಿದ್ದಾರೆ. ಬಗರ್ ಹುಕುಂ ಸಮಿತಿ ರಚನೆ ಮಾಡಿ ಅದಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಕಾಲಮಿತಿ ಒಳಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಹೇಳಿದ್ದಾರೆ. Free Bus: ಮಹಿಳೆಯರಿಗೆ ಅಷ್ಟೇ ಅಲ್ಲ, ಈ ಜಿಲ್ಲೆಯ ಪುರುಷರಿಗೂ ಉಚಿತ ಪ್ರಯಾಣ

Leave a Reply

Your email address will not be published. Required fields are marked *