ಅರಣ್ಯ ಇಲಾಖೆಗಳಲ್ಲಿ ವೃತ್ತಿ ಪಡೆಯಲು ತುಂಬಾ ಜನರು ಕಷ್ಟಪಟ್ಟು ಓದಿರುತ್ತಾರೆ. ಯಾವಾಗ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಸುವರ್ಣ ಅವಕಾಶ. ಅರಣ್ಯ ಇಲಾಖೆಯ ನೇಮಕಾತಿ ಪ್ರಾರಂಭವಾಗುವ ದಿನಾಂಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವೇತನದ ವಿವರ ಎಲ್ಲವನ್ನು ನಾವು ತಿಳಿಯೋಣ.
ಅರಣ್ಯ ಇಲಾಖೆಯಲ್ಲಿ ಕರೆದಿರುವ ನೇಮಕಾತಿಯ ಖಾಯಂ ಹುದ್ದೆಗಳ ವೇತನ 52,000 ರೂಪಾಯಿಗಳು ಇರುತ್ತದೆ. ಎಚ್.ಆರ್.ಎ ಮತ್ತು ಡಿ.ಎ ಎಲ್ಲಾ ಸೇರಿ 65,000 ರೂಪಾಯಿಗಳು ಕೈಗೆ ಸಿಗುತ್ತದೆ. ಕೆಪಿಎಸ್ ಅವರು ಬಿಡುಗಡೆ ಮಾಡಿರುವ ಅಧಿಸೂಚನೆಯು ದಿನಾಂಕ 13-10-2020 ರಂದು ಬಿಡುಗಡೆ ಮಾಡಿದ್ದಾರೆ. ಅಧಿಸೂಚನೆಯಡಿಯಲ್ಲಿ ಬಿಎಸ್ಸಿಯನ್ನು ಅರಣ್ಯ ಶಾಸ್ತ್ರದಲ್ಲಿ ಮುಗಿಸಿದ ಪದವಿಧರರಿಗೆ 08 ಹುದ್ದೆಗಳು ಕರೆಯಲಾಗಿದೆ. ಬಿಎಸ್ಸಿ ಪದವಿ ಹೊರತು ಪಡಿಸಿ, ಬೇರೆ ಯಾವುದೆ ಪದವಿ ವಿಜ್ಞಾನ ವಿಭಾಗದಲ್ಲಿ ಮುಗಿಸಿದ್ದರೆ ಇಲ್ಲವೆ ಇಂಜಿನಿಯರ್ ಪದವಿ ಪಡೆದವರಿಗೆ 08 ಹುದ್ದೆಗಳನ್ನು ಕರೆಯಲಾಗಿದೆ. ಎಲ್ಲ ಸೇರಿಸಿ 16 ಹುದ್ದೆಗಳನ್ನು ಕರೆಯಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 20-10-2020. ಈ ಹುದ್ದೆಗಳಿಗ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2020. ಪೂರ್ವಭಾವಿ ಪರೀಕ್ಷೆಯ ಶುಲ್ಕವನ್ನು ಪಾವತಿಸುವ ಕೊನೆಯ ದಿನಾಂಕ 21-11-2020. ಈ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಯ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು. ಪರೀಕ್ಷೆಯ ಶುಲ್ಕ ಎಷ್ಟಿದೆ ಎನ್ನುವ ವಿಷಯದ ಬಗ್ಗೆ ತಿಳಿಯೋಣ.
ಸಾಮಾನ್ಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ 600 ರೂ ಶುಲ್ಕ. ಪ್ರವರ್ಗ 2(ಎ), ಪ್ರವರ್ಗ 2(ಬಿ), ಪ್ರವರ್ಗ 2(ಎ), 2(ಬಿ) ಅಡಿಯಲ್ಲಿ ಇರುವ ಅಭ್ಯರ್ಥಿಗಳಿಗೆ 300 ರೂ ಶುಲ್ಕ. ಮಾಜಿ ಸೈನಿಕ ಕೆಲಸದಲ್ಲಿ ಇದ್ದವರಿಗೆ 50 ರೂ ಶುಲ್ಕ. ಇವುಗಳನ್ನು ಕಡ್ಡಾಯವಾಗಿ ಕಟ್ಟಲೆಬೇಕು. ಮತ್ತು ಇದನ್ನು ಬೇರೆ ಯಾವುದೇ ಪರೀಕ್ಷೆ ಇಲ್ಲವೆ ನೇಮಜಾತಿಗೆ ಅನ್ವಯ ಮಾಡಿಕೊಳ್ಳಲು ಆಗುವುದಿಲ್ಲ. ಜೊತೆಗೆ ಹಿಂದಿರುಗಿಸುವುದಿಲ್ಲ. ಶುಲ್ಕ ಸಂದಾಯ ಮಾಡದಿದ್ದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1 ಅಡಿಯಲ್ಲಿ ಬರುವವರಿಗೆ ಶುಲ್ಕ ವಿನಾಯತಿ ಇದೆ. ಎಲ್ಲ ಅಭ್ಯರ್ಥಿಗಳು, ವಿನಾಯಿತಿ ಇರುವವರು ಇಲ್ಲದವರಿಗೂ ಪ್ರಕ್ರಿಯೆ ಶುಲ್ಕ 35 ರೂಪಾಯಿಯನ್ನು ತುಂಬಲೆ ಬೇಕು. ಇವುಗಳು ಡಿಡಿ ರೂಪದಲ್ಲಿ ಇರುತ್ತದೆ.
ವಿದ್ಯಾರ್ಹತೆ ಎಷ್ಟಿರಬೇಕೆಂದರೆ ಫಾರೆಸ್ಟ್ರಿ ಪದವಿಧರರಾದರೆ ಫಾರೆಸ್ಟ್ರಿ ವಿಷಯದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆ ಆಗಿರಬೇಕು. ಫಾರೆಸ್ಟ್ರಿ ವಿಷಯ ಬಿಟ್ಟು ಬೇರೆ ವಿಷಯ ಅಂದರೆ ವಿಜ್ಞಾನ ಅಥವಾ ಇಂಜಿನಿಯರಿಂಗ್ ಪದವೀಧರರಿಗೆ ಮೀಸಲಿರಿಸಿದ ಹುದ್ದೆಗಳಿಗೆ ಭಾರತದ ಕಾನೂನು ಪ್ರಕಾರ ಸ್ಥಾಪನೆಯಾದ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ, ವೈದ್ಯ ವಿಜ್ಞಾನ ಪದವಿ, ಗಣಿತ ಶಾಸ್ತ್ರ, ಭೌತಶಾಸ್ತ್ರ, ರಾಸಾಯನ, ಪ್ರಾಣಿ, ಸಸ್ಯಶಾಸ್ತ್ರಗಳಲ್ಲಿ ಹಾಗೂ ಬಯೋಕೆಮಿಸ್ಟ್ರಿ, ಮೈಕ್ರೋಬಯೊಲಜಿ, ಬಯೋಟೆಕ್ನಾಲಜಿ ವಿಷಯಗಳಲ್ಲಿ 02 ಅಥವಾ ಹೆಚ್ಚು ವಿಷಯಗಳಲ್ಲಿ ಶೇಕಡಾ 50 ರಷ್ಟು ಅಂಕ ಪಡೆದಿರಬೇಕು. ಇನ್ನೂ ಶಾರೀರಿಕಕ್ಕೆ ಸಂಬಂಧಿಸಿದ ಷರತ್ತುಗಳು ಹೀಗಿವೆ. ಎತ್ತರದಲ್ಲಿ ಪುರುಷರಾದರೆ 163 ಸೆಂ.ಮೀ. ಮಹಿಳೆಯರಾದರೆ 150 ಸೆಂ.ಮೀ. ಇರಬೇಕು. ಎದೆಯ ಸುತ್ತಳತೆ ಈ ಸುತ್ತಳತೆ ನಿಶ್ವಾಸದ ಸ್ಥಿತಿಯಲ್ಲಿ ಪುರುಷರಿಗೆ 79 ಸೆಂ.ಮೀ. ಮಹಿಳೆಯರಿಗೆ 74 ಸೆಂ.ಮೀ ಇರಬೇಕು. ಉಚ್ವಾಸ ಸ್ಥಿತಿಯಲ್ಲಿ ಪುರುಷರಿಗೆ 5 ಸೆಂ.ಮೀ. ಮಹಿಳೆಯರಿಗೆ 5 ಸೆಂ.ಮೀ. ಇರಬೇಕು. ಪರೀಕ್ಷೆಯು ಎರಡು ವಿಧದಲ್ಲಿ ಇದೆ. ಒಂದು ಪೂರ್ವಭಾವಿ ಪರೀಕ್ಷೆ ಹಾಗೂ ಮತ್ತೊಂದು ಮುಖ್ಯ ಪರೀಕ್ಷೆ. ನಂತರ ವ್ಯಕ್ತಿತ್ವ ಪರೀಕ್ಷೆ ಹಾಗೂ ಶಾರೀರಿಕ ಪರೀಕ್ಷೆ ಇರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ 100 ಅಂಕಗಳು ಹಾಗೂ ಅಪ್ಟಿಟ್ಯೂಡ್ ವಿಷಯ 100 ಅಂಕಗಳು ಇರುತ್ತದೆ.
ಮುಖ್ಯ ಪರೀಕ್ಷೆಯಲ್ಲಿ 35 ಶೇಕಡಾ ಅಂಕ ಪಡೆಯಲೆ ಬೇಕಾಗಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100 ಅಂಕಗಳು, ಇಂಗ್ಲೀಷ್ ವಿಷಯದಲ್ಲಿ 100 ಅಂಕಗಳು ಇರುತ್ತದೆ. ಫಾರೆಸ್ಟ್ರಿ ಪತ್ರಿಕೆ 1 ವಿಷಯದಲ್ಲಿ 100 ಅಂಕಗಳು, ಫಾರೆಸ್ಟ್ರಿ ಪತ್ರಿಕೆ 2 ವಿಷಯದಲ್ಲಿ 100 ಅಂಕಗಳು ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಈ ಹುದ್ದೆಗಳಿಗೆ ವಯೋಮಿತಿ ಅರ್ಜಿ ಸಲ್ಲಿಸುವ ದಿನಾಂಕದಂದು 18 ವರ್ಷ ತುಂಬಿರಬೇಕು. ಮತ್ತು ಗರಿಷ್ಠ ವಯೊಮಿತಿ ಸಾಮಾನ್ಯ ಅರ್ಹತೆ 30 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ 33 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಇವರಿಗೆ 35 ವರ್ಷಗಳು. ಮಾಜಿ ಸೈನಿಕರು ಆಗಿದ್ದರೆ ಸಶಸ್ತ್ರ ಕೇಂದ್ರದಳದಲ್ಲಿ ಸೇವೆ ಸಲ್ಲಿಸಿದ ಅವಧಿಯ ಜೊತೆ 03 ವರ್ಷಗಳು ಆಗಿರಬೇಕು.
ಅರಣ್ಯ ಇಲಾಖೆಯ ಹುದ್ದೆಗಳ ವಿಷಯದಲ್ಲಿ ಬೇರೆ ಏನಾದರೂ ಮಾಹಿತಿ ಬೇಕಾಗಿದ್ದಲ್ಲಿ, ಅನುಮಾನಗಳು ಇದ್ದಲ್ಲಿ ಕೆಳಗಡೆ ದೂರವಾಣಿ ಸಂಖ್ಯೆ ನೀಡಲಾಗಿದೆ ಸಂಪರ್ಕಿಸಿ. ಪರೀಕ್ಷೆಯ ಬಗೆಗೆ ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ದೂರವಾಣಿ ಸಂಖ್ಯೆಗಳು:
ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ: 080-30574957/ 30574901
ಪ್ರಾಂತಿಯ ಕಛೇರಿ ಮೈಸೂರು: 0821-2545956
ಪ್ರಾಂತಿಯ ಕಛೇರಿ ಬೆಳಗಾವಿ: 0831- 2475345
ಪ್ರಾಂತಿಯ ಕಛೇರಿ ಕಲಬುರಗಿ: 08472-227944
ಪ್ರಾಂತಿಯ ಕಛೇರಿ ಶಿವಮೊಗ್ಗ: 08182- 228099