Karnataka Agriculture Sector Gets 5 Hours Of Power Daily: ನಮ್ಮ ರಾಜ್ಯದಲ್ಲಿ ಈ ವರ್ಷ ಮಳೆ ಸರಿಯಾಗಿ ಬರದ ಕಾರಣ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ. ಇದರಿಂದ ರೈತರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಇದೀಗ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಪರಿಹಾರ ಸೂಚಿಸಿದ್ದು, ರೈತರಿಗೆ ಸಮಸ್ಯೆ ಆಗದ ಹಾಗೆ ವ್ಯವಸಾಯ ನೆಲದಲ್ಲಿ ಪಂಪ್ ಸೆಟ್ ಬಳಸುವುದಕ್ಕಾಗಿ ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ತಡೆಯಿಲ್ಲದೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಎಲ್ಲಾ ಎಸ್ಕಾಂ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಆಕ್ಟೊಬರ್ 13ರಂದು ಸಿಎಂ ಸಿದ್ದರಾಮಯ್ಯ ಅವರು ವಿದ್ಯುತ್ ಇಲಾಖೆಯ ಪ್ರಗತಿಗಳನ್ನು ಪರಿಶೀಲಿಸಲು ಒಂದು ಸಭೆ ನಡೆಸಲಾಯಿತು, ಅದರಲ್ಲಿ ಸಿಎಂ ಅವರು ಮಾತನಾಡಿದ್ದಾರೆ, ನಮ್ಮ ರಾಜ್ಯದ ರೈತರಿಗೆ ಯಾವುದೇ ತೊಂದರೆ ಆಗದ ಹಾಗೆ ವಿದ್ಯುತ್ ಇರಬೇಕು, ರೈತರಿಗೆ ಲೋಡ್ ಶೆಡ್ಡಿಂಗ್ ಆಗದೆ ಇರುವ ಹಾಗೆ ಕಾಳಜಿ ವಹಿಸಬೇಕು, ರೈತರಿಗೆ ಎಷ್ಟು ವಿದ್ಯುತ್ ಅವಶ್ಯಕತೆ ಇರುವುದನ್ನು ಅರ್ಥ ಮಾಡಿಕೊಂಡು ಅವರಿಗೆ ಅಗತ್ಯ ಇರುವಷ್ಟು ಸಮಯ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸಿಎಂ ಅವರು ಹೇಳಿದ್ದಾರೆ.

Karnataka Agriculture Sector Gets 5 Hours Of Power Daily

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೂಡ ಮುಖ್ಯ ಇಂಜಿನಿಯರ್ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು, ಪ್ರತಿದಿನ ರೈತರಿಗೆ 5 ಗಂಟೆಗಳ ವಿದ್ಯುತ್ ಬಳಕೆ ಆಗುತ್ತಿದೆ ಎನ್ನುವುದನ್ನು ಚೆಕ್ ಮಾಡಿ ಅವರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ಪ್ರತಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಸಮಿತಿ ರಚನೆ ಮಾಡಿ ಸಭೆಯಲ್ಲಿ ಮಾಡಿರುವ ನಿರ್ಧಾರಗಳು ಸರಿಯಾಗಿ ಪಾಲನೆ ಆಗುತ್ತಿದೆಯಾ ಎನ್ನುವುದನ್ನು ಗಮನಿಸಿ, ವರದಿ ಸಲ್ಲಿಸಬೇಕು ಎಂದು ಸಿಎಂ ಅವರು ತಿಳಿಸಿದ್ದಾರೆ.

ಇನ್ನು ಕೆಲವು ಮಾಹಿತಿಯನ್ನು ಸಿಎಂ ಅವರಿಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ನೀಡಿದ್ದಾರೆ, ರಾಜ್ಯದಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆ ಕಡಿಮೆ ಮಾಡಲು ಭಾರತೀಯ ವಿದ್ಯುತ್ ವಿನಿಮಯ ಯೋಜನೆಯ ಅಡಿಯಲ್ಲಿ ಮುಂದಿನ ತಿಂಗಳಿನಿಂದ ಉತ್ತರ ಪ್ರದೇಶದಿಂದ 300 ಮೆಗಾ ವ್ಯಾಟ್ ವಿದ್ಯುತ್, ಪಂಜಾಬ್ ಇಂದ 600 ಮೆಗಾ ವ್ಯಾಟ್ ವಿದ್ಯುತ್, ಕೆ.ಇ.ಆರ್.ಸಿ ಇಂದ 1500 ಮೆಗಾ ವ್ಯಾಟ್ ವಿದ್ಯುತ್ ಅನ್ನು ಕಡಿಮೆ ಅವಧಿ ವಿದ್ಯುತ್ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ರಾಷ್ಟೀಯ ವಿಪತ್ತಿನಡಿ ವಿದ್ಯುತ್ ಕಾಯ್ದೆ ಸೆಕ್ಷನ್ 11 ಅನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಪ್ರಸ್ತುತ ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಸರಬರಾಜು ಆಗುವುದನ್ನು ತಡೆಹಿಡಿಯಲಾಗಿದೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿದೆ. 2022ರಲ್ಲಿ ನಮ್ಮ ರಾಜ್ಯಕ್ಕೆ 9000 ಮೆಗಾ ವ್ಯಾಟ್ ವಿದ್ಯುತ್ ಅಗತ್ಯವಿತ್ತು, ಆದರೆ ಈ ವರ್ಷ 15 ರಿಂದ 16 ಸಾವಿರ ಮೆಗಾ ವ್ಯಾಟ್ ಅಗತ್ಯವಿದೆ. ಆದರೆ ನಮ್ಮ ರಾಜ್ಯದಲ್ಲಿ ಕೆಲ ವರ್ಷಗಳಿಂದ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಪೂರೈಕೆ ಆಗಿಲ್ಲ. ಕಲ್ಲಿದ್ದಲಿನ ತೊಂದರೆ, ಹೈಡ್ರೋಎಲೆಕ್ಟ್ರಿಸಿಟಿ ಉತ್ಪಾದಿಸಲು ನೀರಿನ ಕೊರತೆ ಇದ್ದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಅವರು ತಿಳಿಸಿದ್ದಾರೆ.

ಇನ್ನು ಕೆಲವು ದಿನಗಳಲ್ಲಿ ಕಬ್ಬಿನ ಕಟಾವು ಮಾಡುವುದಕ್ಕೆ ಸಮಯ ಬರಲಿದ್ದು, ಅದಕ್ಕಾಗಿ ವಿದ್ಯುತ್ ಅಗತ್ಯವಿದೆ. ಹಾಗಾಗಿ ಸಕ್ಕರೆ ಕಾರ್ಖಾನೆಗಳಲ್ಲಿ ಕೋ ಜೆನೆರೇಷನ್ ಮೂಲಕ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಘಟಕಗಳಿವೆ, ಅವುಗಳ ಮೂಲಕ ವಿದ್ಯುತ್ ಉತ್ಪಾದನೆ ಆದರೆ ಇನ್ನೂ ಹೆಚ್ಚು ಒಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *