ನಿಜಕ್ಕೂ ಈ ಸ್ಟೋರಿ ಬಹಳಷ್ಟು ಹಳ್ಳಿ ಜನಕ್ಕೆ ಸ್ಪೂರ್ತಿದಾಯಕವಾಗಿದೆ, ಕೆಲವೆ ಕೆಲವು ವರ್ಷಗಳ ಹಿಂದೆ ಏನು ಅಭಿವೃದ್ಧಿ ಕಾಣದ ಗ್ರಾಮ ಇದ್ದಕ್ಕಿಂದ್ದಂತೆ ಅಭಿವೃದ್ಧಿ ಕಾಣಲು ಕಾರಣವೇನು ಇಲ್ಲಿನ ಜನ ಬುದ್ಧಿವಂತರಾಗಿದ್ದು ಹೇಗೆ ಅನ್ನೋದನ್ನ ಸಂಪೂರ್ಣವಾಗಿ ಮುಂದೆ ನೋಡಿ ಇದರ ಹಿಂದೆ ಒಬ್ಬ ವ್ಯಕ್ತಿ ಇದ್ದಾರೆ, ಹೌದು ಆ ವ್ಯಕ್ತಿಯ ಸಲಹೆಯೊಂದಿಗೆ ಈ ಜನಗಳು ಅಭಿವೃದ್ದಿಕಾಣಲು ಸಾಧ್ಯವಾಯಿತು ಅನ್ನೋದನ್ನ ಈ ಗ್ರಾಮದ ಜನರೇ ಹೇಳುತ್ತಾರೆ ಅಷ್ಟಕ್ಕೂ ಆ ವ್ಯಕ್ತಿ ಯಾರು ಈ ಗ್ರಾಮಗಳು ಯಾವುವು ಅನ್ನೋದನ್ನ ತಿಳಿಯೋಣ.
ಜಾರ್ಕಂಡ್ ನ ರಾಜಧಾನಿ ಆಗಿರುವಂತ ರಾಂಚಿಯಿಂದ ಸರಿ ಸುಮಾರು 45 ಕಿ.ಮೀ ದೂರದಲ್ಲಿರುವ ಒರ್ಮಂಜಿ ಬ್ಲಾಕ್ ವ್ಯಾಪ್ತಿಯಲ್ಲಿರುವ ಅರಾ ಮತ್ತು ಕೇರಂ ಎಂಬ ಗ್ರಾಮಗಳು ಹೀಗೆ ಅಭಿವೃದಿಯ ದಾರಿಯಲ್ಲಿ ಸಾಗುತ್ತಿವೆ. ೩ ವರ್ಷಗಳ ಹಿಂದೆ ಇಲ್ಲಿನ ಜನ ಶಿಕ್ಷಣ ಇಲ್ಲದೆ ಕಾಡಿನಲ್ಲಿನ ಕಟ್ಟಿಗೆಯನ್ನು ಕಡಿದು ಜೀವನ ಸಾಗಿಸುತ್ತಿದ್ದರು ಅಷ್ಟೇ ಅಲ್ಲದೆ ಅಭಿವೃದ್ಧಿ ಕಾಣಬೇಕು ಅನ್ನೋ ಬುದ್ಧಿಯಿಲ್ಲದ ಕಾಡಿನ ಕಟ್ಟಿಗೆ ಕಡಿದು ಸಾರಾಯಿ ಕುಡಿದು ಜೀವನ ಸಾಗಿಸುತ್ತಿದ್ದರು. ಹೀಗಿರುವ ಗ್ರಾಮಕ್ಕೆ ಒಬ್ಬ ಐಎಫ್ಎಸ್ ಅಧಿಕಾರಿ ಈ ಎರಡು ಗ್ರಾಮಗಳ ಜನರ ಮನಸ್ಸನ್ನು ಬದಲಾಯಿಸಿದ್ದು, ಅವರ ಪ್ರೇರಣೆಯಿಂದ 700 ಚೆಕ್-ಡ್ಯಾಮ್ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ಅಧಿಕಾರಿಯ ಹೆಸರು ಸಿದ್ಧಾರ್ಥ್ ತ್ರಿಪಾಠಿ ಎಂಜಿಎನ್ಆರ್ ಇಜಿಎ ಆಯುಕ್ತ ಹಾಗೂ ಐಎಫ್ಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ. ಈ ಅಧಿಕಾರಿ ಈ ಗ್ರಾಮಗಳಿಗೆ ಪದೇ ಪದೇ ಭೇಟಿ ನೀಡಿ ಅಲ್ಲಿನ ಜನರ ಮನಸ್ಥಿತಿಯನ್ನು ಬದಲಾಯಿಸಿ ಅವರಿಗೆ ಬುದ್ದಿವಂತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಇಲ್ಲಿನ ಜನ ಸ್ವತಃ ದುಡಿಮೆ ಮಾಡುವಲ್ಲಿ ಹಾಗೂ ಕೋಳಿ ಸಾಕಣೆ ಮೇಕೆ ಸಾಕಣೆ ಅಷ್ಟೇ ಅಲ್ದೆ ಈ ಊರಿನಲ್ಲಿ ಎರಡು ಬ್ಯುಟಿ ಪಾರ್ಲರ್ ಕೂಡ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ 180 ಗ್ರಾಮಸ್ಥರ 75 ದಿನಗಳ ನಿರಂತರ ಶ್ರಮದಾನದ ಪರಿಣಾಮ ಗ್ರಾಮದಲ್ಲಿ 1.75 ಕೋಟಿ ರೂ.ಮೌಲ್ಯದ 700 ಚೆಕ್-ಡ್ಯಾಮ್ ಗಳನ್ನು ನಿರ್ಮಿಸಲಾಗಿದೆ ಎಂದು ಕೇರಂ ಗ್ರಾಮದ ಗ್ರಾಮ ಪ್ರಧಾನ್ ರಾಮೇಶ್ವರ ಅವರು ಹೇಳಿದ್ದಾರೆ ಇದರ ಕುರಿತು ಪ್ರಧಾನಿ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಗ್ರಾಮದ ಕಾರ್ಯ ವೈಖರಿ ಬಗ್ಗೆ ಮಾತನಾಡಿದ್ದರು ನಿಜಕ್ಕೂ ಮನಸಿದ್ದರೆ ಮಾರ್ಗ ಅನ್ನೋದನ್ನ ಈ ಜನರಿಂದ ಮತ್ತೊಮ್ಮೆ ಸಾಬೀತಾಗಿದೆ. ಅದೇನೇ ಇರಲಿ ಕಾಡಿನಲ್ಲಿನ ಕಟ್ಟಿಗೆ ಕಡಿದು ಅದನ್ನು ಮರಿ ಕುಡಿದು ಜೀವನ ಸಾಗಿಸುತ್ತಿದ್ದ ಜನರಿಗೆ ಈ ಅಧಿಕಾರಿ ಬದಲಾವಣೆ ಮಾಡಿದ್ದೂ ಇಡೀ ಗ್ರಾಮವೇ ಅಭಿವೃದ್ಧಿ ಕಾಣುವಲ್ಲಿ ಮುಂದುವರೆಯುತ್ತಿದೆ ನಿಜಕ್ಕೂ ಈ ಸ್ಟೋರಿ ಬೇರೆಯವರಿಗೂ ಕೂಡ ಸ್ಪೂರ್ತಿದಾಯಕವಾಗಿದೆ.