ಕನ್ಯಾ ರಾಶಿಯವರಿಗೆ ಜೂನ್ ತಿಂಗಳಲ್ಲಿ ಒಳ್ಳೆ ನೆಮ್ಮದಿಯ ಜೀವನ ಸಿಗುತ್ತಾ

0 6

ಕನ್ಯಾ ರಾಶಿಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರನೆಯ ರಾಶಿ ಚಕ್ರ ಈ ರಾಶಿಯ ಅಧಿಪತಿ ಬುಧ ಈ ರಾಶಿಯ ವ್ಯಕ್ತಿಗಳು ತನ್ನ ಸ್ನೇಹಿತರ ಜೊತೆ ಅತ್ಯಂತ ನಿಕಟ ಸಂಪರ್ಕ ಹೊಂದಿರುತ್ತಾರೆ ಹಾಗೂ ಒಳ್ಳೆಯ ಹಾಗೂ ಕೆಟ್ಟ ಎರಡು ಗುಣವನ್ನು ಹೊಂದಿರುತ್ತಾರೆ ಇವರು ಉತ್ತಮ ಪ್ರೇಮಿಗಳು ಕೂಡ ಭಾವನಾತ್ಮಕ ಜೀವಿ ಹಾಗೂ ಭಾವನೆಗಳನ್ನು ಯಾರೊಂದಿಗಾದರು ಹಂಚಿಕೊಳ್ಳುವುದು ಅಪರೂಪ ಒಮ್ಮೆ ನಂಬಿಕೆ ಇಟ್ಟರೆ ಅವರನ್ನು ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಬಿಡುವ ಜಾಯಮಾನ ಇವರದಲ್ಲ ಏನೇ ಕಷ್ಟ ಇದ್ದರೂ ಧೈರ್ಯವಾಗಿ ಎದುರಿಸುವ ಗುಣ ಇವರದ್ದು

ಕನ್ಯಾ ರಾಶಿಯ ಜೂನ್ ತಿಂಗಳು ತುಂಬಾ ಶುಭ ಸೂಚಕ ಇದ್ದು ಇಷ್ಟು ದಿನ ಪಟ್ಟ ಕಷ್ಟಕ್ಕೆ ಸ್ವಲ್ಪ ಪ್ರತಿಫಲ ಸಿಗುತ್ತದೆ ಆದರೆ ಇದು ಗೋಚರ ಫಲ ಕಾಣಬಹುದು ಆದರೆ ಜಾತಕ ಅನುಗುಣವಾಗಿ ಕೂಡ ನೋಡಬೇಕು ಹಣಕಾಸು ಆರೋಗ್ಯ ಮತ್ತು ಕುಟುಂಬ ಉದ್ಯೋಗ ಬಗ್ಗೆ ಹೇಗೆಲ್ಲಾ ಜೀವನ ಇದೆ ಎನ್ನುವುದರ ಬಗ್ಗೆ ಮಾಹಿತಿ ನೋಡೋಣ ರಾಶ್ಯಾಧಿಪತಿ ಜೊತೆ ರವಿಯ ಸಂಚಾರ ಇಂದ ಸರಕಾರಿ ಕೆಲಸದಲ್ಲಿ ಉನ್ನತ ಮಟ್ಟದ ಏಳಿಗೆ ಇನ್ನು ಕೆಲಸ ಕಳೆದುಕೊಂಡವರಿಗೆ ಒಳ್ಳೆಯ ಕೆಲಸದ ಅವಕಾಶ ಇಷ್ಟು ದಿನ ನಿಮ್ಮ ಕಷ್ಟದ ದಿನ ಕಳೆದು ಒಳ್ಳೆಯ ಕಾಲ ಹಾಗೂ ನೀವು ನಂಬಿದವರ ಮೂಲಕ ಮೋಸ ಹೋಗಿ ಬಂದುಗಳಿಂದ ಕೂಡ ನೋವು ತಿಂದು ಜೀವನ ಸಾಗಿಸುತ್ತಾ ಇದ್ದರು

ಈಗ ಆ ಸಮಸ್ಯೆಗೆ ವಿದಾಯ ಹೇಳುವ ಸಮಯ ಹಾಗಾಗಿ ಇತರರಿಗೆ ಕೆಲಸ ನೀಡುವ ಮನಸ್ಸು ಹೊಂದಿದ್ದು ಸ್ವಂತ ಸಂಸ್ಥೆ ಸ್ಥಾಪಿಸಲು ಒಳ್ಳೆಯ ಸಮಯ ಅವಿವಾಹಿತರಿಗೆ ಕಂಕಣ ಭಾಗ್ಯ ಸ್ವಂತ ಉದ್ಯಮ ಇದ್ದವರಿಗೆ ಯಶಸ್ಸು ಲೋನ್ ಅಪ್ಲೈ ಮಾಡಿದ್ದಲ್ಲಿ ಅದು ಕೂಡ ಸಿಗುವುದು ಹಾಗೂ ಸರಕಾರಿ ಯೋಜನೆ ಇದ್ದಲ್ಲಿ ಅನುಕೂಲತೆ ಕೂಡ ನೀರಿನಂತೆ ಹರಿದು ಬರುವುದು ಆದರೆ ಮನೆಯಲ್ಲಿ ಕಿರಿಕಿರಿ ಉಂಟಾಗುವುದು ಹೊಸ ವಸ್ತು ಖರೀದಿ ಮಾಡುವ ಮುನ್ನ ಬಹಳಷ್ಟು ಎಚ್ಚರಿಕೆ ಅಗತ್ಯ ಏನೇ ಆಗಲಿ ಒಮ್ಮೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಹೆಜ್ಜೆ ಇಟ್ಟರೆ ಉತ್ತಮ ಭೂಮಿ ವ್ಯಾಪಾರ ವ್ಯವಹಾರಗಳಲ್ಲಿ ಇರುವರು ಕೂಡ ತುಂಬಾ ಎಚ್ಚರಿಕೆ ಇಂದ ಇರಬೇಕು

ಮಾತಿನ ಮೇಲೆ ನಿಗಾ ಅವಶ್ಯಕ ಇನ್ನೊಬ್ಬರಿಗೆ ಬರವಸೆ ನೀಡುವ ಮೊದಲು ಯೋಚಿಸಿ ಮಾತು ನೀಡಿ ಕೊಟ್ಟ ಮಾತು ತಪ್ಪೋಲ್ಲ ಎನ್ನುವ ಅಭಿಪ್ರಾಯ ಬಿಟ್ಟು ನಿಮ್ಮ ಬಗ್ಗೆ ಯೋಚಿಸುವ ಗುಣ ಬೆಳೆಸಿಕೊಂಡರೆ ಒಳ್ಳೆಯದು ಹೊರರಾಜ್ಯದ ವ್ಯವಹಾರ ಮಾಡುವ ಮುನ್ನ ಯೋಚಿಸಿ ಮುಂದೆ ಸಾಗಿ ನಿಮ್ಮ ಹೆತ್ತವರು ಹಾಗೂ ತಂದೆ ತಾಯಿಗೆ ಸಮನಾದವರ ಮೇಲೆ ನಿಗಾ ಅಗತ್ಯ

ಯಾವುದೇ ಕೆಲಸ ಕಾರ್ಯ ಮಾಡುವ ಮುನ್ನ ಯೋಚಿಸಿ ಹಾಗೂ ಸಮಾಲೋಚಿಸಿ ಮುಂದೆ ಸಾಗಿ ಹಾಗೂ ನಿಮ್ಮ ದೃಢ ನಿರ್ಧಾರದಿಂದ ಎಲ್ಲವೂ ಒಳ್ಳೆಯದು ಆಗುವುದು ಗುರುವಿನ ಅನುಗ್ರಹದಿಂದ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯತೆ. ಕಬ್ಬಿಣ ವ್ಯಾಪಾರ ಮಾಡುವರು ಯಾವುದೇ ತೊಂದರೆ ಇಲ್ಲ ಆಟಗಾರ ಕ್ಷೇತ್ರದಲ್ಲಿ ಇರುವರು ಆರೋಗ್ಯ ವಿಚಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ ಮಾದ್ಯಮ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಒಳ್ಳೆಯ ಸಮಯ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಹಾಗೂ ಗಂಡ ಹೆಂಡತಿ ದೂರ ಆದವರನ್ನು ಒಂದುಗೂಡಿಸುವ ಕೆಲಸವನ್ನು ತಮ್ಮ ಸ್ವಂತ ಪ್ರಯತ್ನದಿಂದ ಮಾಡುವಿರಿ ಮದುವೆ ವಿಳಂಬ ಆದವರಿಗೆ ಕಂಕಣ ಭಾಗ್ಯ ಕೂಡಿ ಬಂದು ಮದುವೆ ಆಗುವ ಸಮಯವಿದೆ

ಉತ್ತರ ಹಾಗೂ ಹಸ್ತ ನಕ್ಷತ್ರದವರು ಸ್ವಲ್ಪ ಜಾಗ್ರತೆ ವಹಿಸಬೇಕು ಕೆಲಸದ ವಿಷಯವಾಗಿ ಹೊರ ರಾಜ್ಯ ಇಲ್ಲ ಹೊರ ದೇಶಕ್ಕೆ ಹೋಗುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಇದರಿಂದ ಒಳ್ಳೆಯದು ಆಗುವುದು ವಿದ್ಯಾರ್ಥಿ ಜೀವನ ಕೂಡ ಅತ್ಯಂತ ಯಶಸ್ಸು ಅದೃಷ್ಟ ಬಂದಾಗ ಅದರ ಉಪಯೋಗ ಪಡೆಯಬೇಕು ಐಟಿ ಸಂಸ್ಥೆ ಅಲ್ಲಿ ಕೆಲಸ ಮಾಡುತ್ತಿರುವ ತಮ್ಮ ಅತಿಯಾದ ಕೆಲಸ ಹಾಗೂ ಒತ್ತಡ ಇಂದ ಕಣ್ಣು ನೋವು ಮುಂತಾದ ಸಾಮಾನ್ಯ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಹಾಗಾಗಿ ನಿಯಮಿತ ಆಹಾರ ಹಾಗೂ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದ್ದಲ್ಲಿ ಉತ್ತಮ

ಕಾರ್ಪೆಂಟರ್ ಕೆಲಸ ಹಾಗೂ ಟೂರಿಸ್ಟ್ ವಾಹನ ಸಂಸ್ಥೆ ವ್ಯವಹಾರ ನಡೆಸುವ ಒಳ್ಳೆಯ ಸಮಯ ಜೀವವಿಮೆ ಇನ್ಕಮ್ ಟ್ಯಾಕ್ಸ್ ಮುಂತಾದ ವ್ಯವಹಾರ ನಂಬಿಕೆ ಹಾಗೂ ಜನರ ಮೇಲೆ ನಂಬಿಕೆ ಇಟ್ಟು ಮುಂದೆ ಸಾಗಿದರೆ ಉತ್ತಮ ನಂಬಿಕೆಯೇ ಜೀವನ ಆದರೆ ಅತಿಯಾದ ನಂಬಿಕೆ ಕೂಡ ಒಳ್ಳೆಯದು ಅಲ್ಲ ಹಾಗಾಗಿ ಜೀವನದಲ್ಲಿ ಬರುವ ಎಲ್ಲಾ ಸಿಹಿ ಕಹಿಯಾದರೂ ಸರಿ ಭಗವಂತ ಮೇಲೆ ಬರವಸೆ ಇಟ್ಟು ಜೀವನ ಸಾಗಿಸಿ ಸಾಕುಪ್ರಾಣಿಗಳನ್ನು ಸಾಕಿ ಅದರ ವ್ಯಾಪಾರ ಮಾಡುವರಿಗೆ ಉತ್ತಮ ಲಾಭ ಒಳಚರಂಡಿ ಹಾಗೂ ರಸ್ತೆ ಕಾಮಗಾರಿ ಉದ್ಯೋಗ ಮಾಡುವರು ಉತ್ತಮ ಹಾಗೂ ನೀರಿನ ವ್ಯವಹಾರ ಸ್ವಲ್ಪ ಹಿನ್ನಡೆ ಇದ್ದರೂ ಕೂಡ ಪರವಾಗಿಲ್ಲ

ಈ ತಿಂಗಳಲ್ಲಿ ನಿಮಗೆ ಕೀರ್ತಿ ಹಾಗೂ ಲಾಭ ಬರುವುದು ವಸ್ತ್ರ ವ್ಯಾಪಾರ ಮಾಡುವರು ಉತ್ತಮ ಲಾಭ ಶುಭ ದಿನ 10 12 5 3 ಈ ತಾರಿಕಿನಲ್ಲಿ ಯಾವುದೇ ಒಳ್ಳೆಯ ಕೆಲಸ ಕಾರ್‍ಯ ಮಾಡಲು ಒಳ್ಳೆಯ ಸಮಯ ಕನ್ಯಾ ರಾಶಿ ಅವರು ಈ ತಿಂಗಳು ಶಿವನ ಆರಾಧನೆ ಮಾಡಿದಲ್ಲಿ ಉತ್ತಮ ಹಾಗೂ ಪ್ರದೋಷ ಪೂಜೆ ಮತ್ತು ಶಿವನ ನಾಮ ಸ್ಮರಣೆ ಮಾಡಿದ್ದಲ್ಲಿ ಇನ್ನೂ ಒಳ್ಳೆಯದು.

Leave A Reply

Your email address will not be published.