ಕನ್ಯಾರಾಶಿ ನಕ್ಷತ್ರವು ರಾಶಿಚಕ್ರದ ಆರನೇ ಚಿಹ್ನೆ ಮತ್ತು ಪರಿಪೂರ್ಣತೆಯೊಂದಿಗೆ ಕೆಲಸಗಳನ್ನು ಮಾಡುವ ರಾಶಿ ಎಂದು ಇದನ್ನು ಪರಿಗಣಿಸಲಾಗಿದೆ. ಕನ್ಯಾರಾಶಿ ವಿಶ್ವಾಸಾರ್ಹ, ಸಂಘಟಿತ, ವಿವೇಕಯುತ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರು ತುಂಬಾ ಪ್ರತಿಭಾವಂತರು ಮತ್ತು ಮನಸ್ಸಿಗೆ ಮುದ ನೀಡುವ ವ್ಯಕ್ತಿತ್ವದವರು. ಈ ರಾಶಿಯಲ್ಲಿ ಜನಿಸಿದ ಹೆಚ್ಚಿನವರು ಕುಟುಂಬ, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಉತ್ತಮ ಸ್ವಭಾವವನ್ನು ಹೊಂದಿದ್ದಾರೆ.

ಭೂಮಿ ತತ್ವಕ್ಕೆ ಸೇರಿಯೂ ಬುಧ ಗ್ರಹದಿಂದ ಆಳಲ್ಪಡುವ ಏಕೈಕ ರಾಶಿ ಕನ್ಯಾ. ಬುಧವು ಸಂವಹನ ಹಾಗೂ ಯೋಚನಾ ವಿಧಾನಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಕನ್ಯಾ ರಾಶಿಯವರು ಹುಟ್ಟಾ ಬುದ್ಧಿವಂತರು. ಒಳ್ಳೆಯ ಮಾತುಗಾರರು. ಬುಧಗ್ರಹದಿಂದ ಆಳಲ್ಪಡುವ ಕನ್ಯಾ ರಾಶಿಯವರು ಪರಿಪೂರ್ಣತವಾದಿಗಳು ಮತ್ತು ಇತರರಿಂದಲೂ ಅದನ್ನೇ ಬಯಸುವವರು. ಹೀಗಾಗಿ ಇತರರ ದೃಷ್ಟಿಯಲ್ಲಿ ಇಬರು ನಿಯಂತ್ರಣ ಹೇರುವವರು ಎಂದು ಕರೆಸಿಕೊಳ್ಳುತ್ತಾರೆ. ನಿಮಗೆ ತಿಳಿದಿರದ ಇವರ ಕೆಲವೊಂದು ಗುಣಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕನ್ಯಾ ರಾಶಿಯವರು ವಿಶೇಷ ಗುಣವುಳ್ಳವರು. ಅವರನ್ನು ಸಾಮಾನ್ಯವಾಗಿ ನಿಯಂತ್ರಿಸುವ ಸ್ವಭಾವದವರು, ವಿಮರ್ಶಾತ್ಮಕ ಮತ್ತು ವಿನೋದಗಳ-ವಿರೋಧಿ ಎಂದು ಕರೆಯುತ್ತಾರೆ, ಇವರು ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಗಮನಿಸುತ್ತಾರೆ. ಎಲ್ಲರ ಗುಣವೂ ಬೇರೆ ಬೇರೆಯಾಗಿರುತ್ತದೆ ಹಾಗಾಗಿ ಕನ್ಯಾರಾಶಿಯವರೂ ನಮಗೆ ಎಲ್ಲರಂತಿಲ್ಲದೆ ವಿಭಿನ್ನವಾಗಿ ಕಾಣಬಹುದು. ಇವರು ಸಾಮಾನ್ಯವಾಗಿ ಎಲ್ಲರೊಂದಿಗೂ ಬೆರೆಯುತ್ತಾರೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು, ಸಂಬಂಧಗಳನ್ನು ಹೊಂದಬಹುದು ಮತ್ತು ತಮ್ಮ ಗುರಿಗಳನ್ನು ವಿಭಿನ್ನ ರೀತಿಯಲ್ಲಿ ಅನುಸರಿಸಬಹುದು.

ಕನ್ಯಾ ರಾಶಿಯವರು ಸಿಕ್ಕಾಪಟ್ಟೆ ಡಿಮ್ಯಾಂಡಿಂಗ್. ಸ್ವಚ್ಛತೆ ಹಾಗೂ ನೀಟ್‌ನೆಸ್ ವಿಷಯಕ್ಕೆ ಬಂದಾಗ ಎಲ್ಲವೂ ತಮ್ಮ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಾರೆ. ಎಲ್ಲ ಕೆಲಸಗಳೂ ತಾವಂದುಕೊಂಡಂತೆಯೇ ಆಗಬೇಕೆಂದು ಬಯಸುವವರು ಇವರು. ಬಟ್ಟೆಯೆಂದರೆ ಐರನ್ ಆಗಿದ್ದರೆ ಮಾತ್ರ ಅದು ಧರಿಸತಕ್ಕದ್ದು, ಇಲ್ಲದಿದ್ದಲ್ಲಿ ಅಲ್ಲ ಎಂಬಷ್ಟು ಪ್ರತಿಯೊಂದರಲ್ಲಿಯೂ ಅದೇ ಸ್ವಚ್ಚತೆ, ನೀಟ್‌ನೆಸ್ ಬಯಸುವವರು. ಇದರಿಂದ ಇವರ ಸಂಗಾತಿಗೆ ಒತ್ತಡವೆನಿಸಬಹುದು. ಆದರೆ, ಮನೆಯಾಗಲೀ, ಟೇಬಲ್ಲಾಗಲೀ- ಕನ್ಯಾ ರಾಶಿಯವರನ್ನು ನೋಡಿ ಹೇಗಿಟ್ಟುಕೊಳ್ಳಬೇಕೆಂದು ಕಲಿಯಬೇಕು.

ಕ್ರಿಯೇಟಿವಿಟಿ ವಿಷಯಕ್ಕೆ ಬಂದರೆ ಇವರು ಜೀನಿಯಸ್. ಇವರ ಕಲ್ಪನೆಗಳಿಗೆ ಮಿತಿಯಿಲ್ಲ. ಬರವಣಿಗೆ, ನೃತ್ಯ, ಕಲೆ ಯಾವುದೇ ಇರಲಿ, ಕನ್ಯಾ ರಾಶಿಯವರು ಅದನ್ನು ವ್ಯಕ್ತಪಡಿಸುವ ರೀತಿಯೇ ಸೂಪರ್. ಸಂವಹನ, ತಿರುಗಾಟ, ಅನ್ವೇಷಣೆ ಇವರ ಆಸಕ್ತಿಯ ವಿಷಯಗಳು. ಮನೆಯಲ್ಲಿ ಯಾವುದೇ ಹಳೆಯ ವಸ್ತುಗಳಿರಲಿ, ಅದಕ್ಕೆ ಹೊಸ ರೂಪ ನೀಡುವುದರಲ್ಲಿ ಎತ್ತಿದ ಕೈ ಇವರದು. ಆರ್ಟ್ ಆ್ಯಂಡ್ ಕ್ರಾಫ್ಟ್ ಇವರಿಗೆ ನೀರು ಕುಡಿದಷ್ಟು ಸಲೀಸು.

ಕನ್ಯಾ ರಾಶಿಯವರು ಪ್ರಾಮಾಣಿಕರು ಹಾಗೂ ವಿಶ್ವಾಸಾರ್ಹರು. ಅವರ ಬದ್ಧತೆ ಮಾದರಿಯಾದದ್ದು. ಅವರು ಕಾಳಜಿ ವಹಿಸುವ ಜನರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವವರಲ್ಲ. ಆದರೆ, ಎಲ್ಲವನ್ನೂ ಮಾತಲ್ಲೇ ವ್ಯಕ್ತಪಡಿಸತ್ತಾರೆ ಎಂದಿಲ್ಲ. ಜಾವನ ಸಂಗಾತಿಯ ಅಗತ್ಯಗಳನ್ನು ಪೂರೈಸುವುದು ಇವರಿಗೆ ಮುಖ್ಯವೆನಿಸುತ್ತದೆ. ಈ ಎಲ್ಲ ಗುಣಗಳು ಅವರನ್ನು ಉತ್ತಮ ಗೆಳೆಯರನ್ನಾಗಿಯೂ ತೋರಿಸುತ್ತದೆ. ಅಷ್ಟೇ ಉತ್ತಮ ಸಹೋದ್ಯೋಗಿಗಳೆನಿಸುತ್ತಾರೆ. ಇತರರಿಗೆ ಬೇಗ ಸಹಾಯಕ್ಕಾಗಿ ಮುನ್ನುಗ್ಗುತ್ತಾರೆ. ಜೊತೆಗೆ, ತಾವಿದ್ದೇವೆ ಎಂಬ ಭರವಸೆ ನೀಡುವ ಗುಣ ಇವರದು. ಇನ್ನೊಬ್ಬರಿಗೆ ಪ್ರಾಯೋಗಿಕವಾದ ಸಲಹೆ ಸೂಚನೆ ನೀಡುವುದರಲ್ಲಿ ಸಿದ್ಧಹಸ್ತರು. ನಿಮ್ಮ ಕರೆ ಎತ್ತುವಲ್ಲಿ ಮೊದಲಿಗರು ಹಾಗೂ ಯಾವುದೇ ಸಂದರ್ಭದಲ್ಲಿ ಜೊತೆ ಬಿಟ್ಟು ಹೋಗುವವರಲ್ಲಿ ಕೊನೆಯವರು.

ಕನ್ಯಾರಾಶಿಯವರು ಇತರರಿಗಿಂತ ಗ್ರಹಿಕೆಯಲ್ಲಿ ಮೊದಲಿರುತ್ತಾರೆ. ಅವರು ಇತರರ ಬಗ್ಗೆ ಎಷ್ಟು ಗಮನವಿಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲೂ ಅಸಾಧ್ಯ. ಅವರು ಒಳ್ಳೆಯ ಸ್ನೇಹಿತರು ಮತ್ತು ಕೇಳುಗರು ಎಂದು ನೀವು ಭಾವಿಸಬಹುದು. ಅವರು ಮೊದಲೇ ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿರುತ್ತಾರೆ ಆದ್ದರಿಂದ ಮೋಸಹೋಗಬೇಡಿ. ಕನ್ಯಾ ರಾಶಿಯವರು ತಮ್ಮ ಬತ್ತಳಿಕೆಯಲ್ಲಿ ಅನೇಕ ತಂತ್ರಗಳನ್ನು ಹೊಂದಿರುತ್ತಾರೆ. ಆದ್ದರಿಂದ ಇವರ ಬಗ್ಗೆ ಎಚ್ಚರವಾಗಿರಿ.

ಸಮಸ್ಯೆಯನ್ನು ಕ್ಷಣಮಾತ್ರ ಬಗೆಹರಿಸುವ ಕೌಶಲ್ಯದಿಂದ ಹಿಡಿದು ಕಷ್ಟಕರವಾದ ವಿಷಯಗಳ ಬಗ್ಗೆ ಮಾತನಾಡುವ ಚಾತುರ್ಯವನ್ನು ಇವರು ಹೊಂದಿರುತ್ತಾರೆ. ಇವರ ದಿನನಿತ್ಯದ ಕಾರ್ಯವನ್ನು ನೋಡಿದ ನೀವು ಆಶ್ಚರ್ಯಪಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವುದೇ ಹದಗೆಟ್ಟ ಸನ್ನಿವೇಶದಲ್ಲೂ ಸರಿಯಾಗಿ ಯೋಚಿಸಲು ಮತ್ತು ಯೋಜಿಸಲು ಕನ್ಯಾರಾಶಿಯವರಲ್ಲಿನ ಪ್ರಾಯೋಗಿಕತೆಯೇ ಕಾರಣವಾಗುತ್ತದೆ. ಅವರಿಗೆ ಯಾವುದೇ ಜವಾಬ್ದಾರಿಯಿಂದ ವಿರಾಮ ತೆಗೆದುಕೊಳ್ಳಲು ಹೇಳಿದರೆ ಅವರು ನಿಮ್ಮ ಮೇಲೆಯೇ ಅಸಮಾಧಾನ ತೋರಬಹುದು.

ಕನ್ಯಾ ರಾಶಿಯವರು ಆರೋಗ್ಯ ಪ್ರಜ್ಞೆಯುಳ್ಳವರಾಗಿದ್ದಾರೆ ಮತ್ತು ಅವರು ತಮ್ಮ ನೈಸರ್ಗಿಕ ಪರಿಸರಕ್ಕೆ ಆದ್ಯತೆ ನೀಡುತ್ತಾರೆ. ಮತ್ತು, ನೀವು ಅವರಿಗೆ ಸಾಕಷ್ಟು ಹತ್ತಿರವಾದರೆ, ಅವರು ಸಂತೋಷದಿಂದ ನಿಮ್ಮ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ. ನೀವು ಸಮಸ್ಯೆಯ ಬಗ್ಗೆ ತಿಳಿಸಬೇಕಾದರೆ ನೀವು ಸಂಪರ್ಕಿಸಬೇಕಾದ ವ್ಯಕ್ತಿಯೆಂದರೆ ಕನ್ಯಾರಾಶಿಯವರು. ವಿಷಯಗಳನ್ನು ಉತ್ತಮಗೊಳಿಸಲು ಅವರಿಂದ ಮಾತ್ರವೇ ಸಾಧ್ಯ. ಇವರು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು ಮತ್ತು ಅವರಿಗೆ ಅಗತ್ಯವಿರುವ ಅವರ ಸ್ನೇಹಿತರು ಅಥವಾ ಕುಟುಂಬವನ್ನು ಎಂದಿಗೂ ಬಿಡುವುದಿಲ್ಲ. ಅವರು ಬೆಂಬಲಿಸುತ್ತಾರೆ ಮತ್ತು ತಮ್ಮ ಜೀವನದಲ್ಲಿ ಆತ್ಮೀಯರಿಗಾಗಿ ಹೋರಾಡುತ್ತಾರೆ.

Leave a Reply

Your email address will not be published. Required fields are marked *