ಎಲ್ಲಿ ಹೋದರೂ ಕಣ್ಣೆ ಅಧಿರಿಟ್ಟೆ ಹಾಡನ್ನು ಒಂದು ಬಾರಿಯಾದರೂ ಕೇಳುತ್ತೇವೆ ಅಷ್ಟರ ಮಟ್ಟಿಗೆ ಆ ಹಾಡು ಜನರ ಮನಸನ್ನು ಗೆದ್ದಿದೆ. ಈ ಹಾಡಿನ ಹಿಂದಿನ ಧ್ವನಿ ತೆಲುಗು ಗಾಯಕಿ ಮಂಗ್ಲಿ ಅವರದಾಗಿದೆ. ಅವರ ಜೀವನದ ಬಗ್ಗೆ ಹಾಗೂ ರಾಬರ್ಟ್ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಗೆಲುವಿನ ಅಲೆಯಲ್ಲಿ ಇದೆ. ಈ ಸಿನಿಮಾದಲ್ಲಿ ದರ್ಶನ್ ಅವರು ನಟನಾಗಿ ಹೊಸಬರಾದ ಆಶಾ ಭಟ್ ಅವರು ನಟಿಯಾಗಿ ನಟಿಸಿದ್ದಾರೆ. ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಬಿಡುಗಡೆ ಆಗಿರುವುದು ವಿಶೇಷ. ರಾಬರ್ಟ್ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ರಾಬರ್ಟ್ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕನ್ನಡ ಭಾಷೆಯ ಶೈಲಿಯಲ್ಲಿ ಮೂಡಿ ಬಂದ ಕಣ್ಣು ಹೊಡೆಯಾಕ್ ಎಂಬ ಕನ್ನಡದ ಹಾಡು ತೆಲುಗಿನಲ್ಲಿ ಕಣ್ಣೆ ಅಧಿರಿಟ್ಟೆ ಆಗಿದೆ. ಕನ್ನಡದಲ್ಲಿ ಶ್ರೇಯಾ ಘೋಷಾಲ್ ಅವರು ಹಾಡಿದರೆ, ತೆಲುಗಿನಲ್ಲಿ ತೆಲುಗು ಗಾಯಕಿ ಸತ್ಯವತಿ ಮಂಗ್ಲಿ ಅವರು ಹಾಡಿದ್ದಾರೆ. ಅವರ ಹಾಡು ಭಾರಿ ಸದ್ದು ಮಾಡುತ್ತಿದೆ ಈ ಹಾಡನ್ನು ಇಷ್ಟ ಪಡದವರಿಲ್ಲ. ಈ ಹಾಡಿನ ಮೂಲಕ ಮಂಗ್ಲಿ ಅವರು ಹೆಚ್ಚು ಜನಪ್ರಿಯರಾದರು. ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಮಂಗ್ಲಿ ಅವರ ಫೋಟೊ ವೈರಲ್ ಆಗುತ್ತಿದೆ. ಸೂಪರ್ ವೈಸ್ ಎಂಬ ಮೆಚ್ಚುಗೆ ಹರಿದಾಡುತ್ತಿದೆ. 2018ರಿಂದ ಟಾಲಿವುಡ್ ನಲ್ಲಿ ಮಂಗ್ಲಿ ಅವರು ಗಾಯಕಿಯಾಗಿ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ. ಇವರು ಮೂಲತಃ ರಾಜಸ್ಥಾನದ ಲಂಬಾಣಿ ಸಮುದಾಯಕ್ಕೆ ಸೇರಿದವರು, ಇವರು ತೆಲಂಗಾಣ, ಹೈದರಾಬಾದಿನ ಶೈಲಿಯ ತೆಲುಗು ಹಾಡುಗಳನ್ನು ಪಾಪ್ಯುಲರ್ ಗೊಳಿಸಿದ್ದಾರೆ.

ಮಂಗ್ಲಿ ಅವರು ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಮೊದಲ ಹೆಸರು ಸತ್ಯವತಿ. ಹೈದರಾಬಾದಿಗೆ ಬಂದ ನಂತರ ಮಂಗ್ಲಿ ಎಂಬ ಹೆಸರಿನಿಂದ ಖ್ಯಾತಿ ಪಡೆದರು. ಇವರ ಪ್ರಾರಂಭಿಕ ಜೀವನ ಕಡು ಕಷ್ಟದಲ್ಲಿ ಇತ್ತು. ಮಂಗ್ಲಿ ಅವರಿಗೆ ಚಿಕ್ಕಂದಿನಿಂದಲೆ ಹಾಡಿನ ಬಗ್ಗೆ ಆಸಕ್ತಿ ಇತ್ತು. ಲಂಬಾಣಿ ಸಮುದಾಯದವರು ತಮಗೆ ಸಮಯ ಸಿಕ್ಕಾಗಲೆಲ್ಲಾ ಹಾಡುತ್ತಾ ಮನರಂಜನೆ ಪಡೆಯುವುದು ವಾಡಿಕೆ, ಇಂತಹ ಸಮುದಾಯದಲ್ಲಿ ಬೆಳೆದ ಮಂಗ್ಲಿಯವರಿಗೆ ಹಾಡಿನ ಬಗ್ಗೆ ಸ್ಪೂರ್ತಿ ಸಿಕ್ಕಂತಾಯಿತು. ಮಂಗ್ಲಿ ಅವರು ಎಲ್ಲೂ ಕ್ಲಾಸ್ ಗೆ ಹೋಗಿ ಕಲಿತವರಲ್ಲ ಒಮ್ಮೆ ಇವರ ಹಾಡನ್ನು ಕೇಳಿದ ಅಲ್ಲಿನ NGO ಇವರಿಗೆ ಶಾಸ್ತ್ರೀಯವಾಗಿ ಕಲಿಸಲು ಮುಂದಾಗುತ್ತದೆ. ಅವರ ಸಮುದಾಯದವರ ಕಟ್ಟು ಪಾಡು, ಅವಮಾನದ ಮಾತುಗಳ ನಡುವೆ ಅವರು ತಮ್ಮ ಗುರಿಯನ್ನು ತಲುಪಿದರು. ಅನೇಕ ಸ್ಪರ್ಧೆಗಳಲ್ಲಿ ಹಾಡುವ ಮೂಲಕ ವಿನ್ ಆಗುತ್ತಿದ್ದರು. ನಂತರ ಮಂಗ್ಲಿ ಅವರ ಪೋಷಕರ ಸಹಾಯದಿಂದ ಆಂಧ್ರದಲ್ಲಿ ಮ್ಯೂಸಿಕ್ ಡಿಪ್ಲೊಮಾ ಮಾಡುತ್ತಾರೆ. ನಂತರ ಖಾಸಗಿ ಶಾಲೆಯೊಂದರಲ್ಲಿ ಸಂಗೀತ ಟೀಚರ್ ಆಗಿ, ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ನಂತರ ಸಿನಿಮಾಗಳಲ್ಲಿ ಹಾಡಲು ಅವಕಾಶ ಸಿಕ್ಕಿತು, ಹಲವು ಸಿನಿಮಾಗಳಲ್ಲಿ ಹಾಡಿದರು ಇದೀಗ ರಾಬರ್ಟ್ ಸಿನಿಮಾದಲ್ಲಿ ಹಾಡುವ ಮೂಲಕ ಮನೆ ಮನೆ ಮಾತಾದರು. ನೋಡಿದ್ರಲ್ಲ ಒಂದು ಹಾಡು ಯಾರನ್ನು ಎಷ್ಟು ಫೇಮಸ್ ಮಾಡುತ್ತದೆ. ಇದೀಗ ಆ ಹಾಡನ್ನು ಶಾಲೆಯಲ್ಲಿ ಟೀಚರ್ ಪಾಠ ಮಾಡುವ ಮೊದಲು ಹಾಡಿ ನಂತರ ಪಾಠ ಮಾಡುವುದನ್ನು ಕೆಲವು ಕಡೆ ನೋಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!