ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಪ್ರೇಮಲೋಕ ಚಿತ್ರದ ಗೀತೆ ಪ್ರತಿಯೊಬ್ಬರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಪ್ರೇಮ ಗೀತೆ ಎನ್ನಬಹುದು. ಪ್ರೀತಿ ಒಂದು ರೀತಿಯ ಭಾವನೆ ಇದನ್ನ ನಾವು ಕೇವಲ ಆನಂದಿಸಬಹುದು ಅಷ್ಟೇ. ಪ್ರೀತಿಗೆ ವ್ಯಾಖ್ಯಾನ ಕೊಡುವುದು ಸ್ವಲ್ಪ ಕಷ್ಟ. ಪ್ರೀತಿಯೇ ಇರಲಿ ಅಥವಾ ಸ್ನೇಹವೇ ಇರಲಿ ಅಥವಾ ಬೇರೆ ಇನ್ಯಾವುದೇ ಸಂಬಂಧ ಆದರೂ ಅದು ನಂಬಿಕೆಯ ಆಧಾರದ ಮೇಲೆ ನಿಂತಿರುವುದು ಸತ್ಯ. ನಂಬಿಕೆ ಇಲ್ಲವಾದಲ್ಲಿ ಯಾವ ಸಂಬಂಧಗಳೂ ಶಾಶ್ವತವಲ್ಲ. ಇದ್ಯಾಕೆ ಬರೀ ಪ್ರೀತಿ ವಿಷಯದ ಬಗ್ಗೆನೇ ಇದೆ ಅಂತ ಯೋಚನೆ ಮಾಡ್ತಾ ಇದೀರಾ? ಈಗ ಹೇಳೋಕೆ ಹೊರಟಿರೋ ವಿಷಯ ಕೂಡ ಅದೇ ವಿಷಯದ ಬಗ್ಗೆಯೇ.

ಸಾಕಷ್ಟು ಜನರು ಪ್ರೀತಿಸಿ ಮದುವೆ ಆಗುವವರು ಇದ್ದಾರೆ, ಪ್ರೀತಿಸಿ ಮದುವೆ ಆದವರೂ ಇದ್ದಾರೆ ಮುಂದೆಯೂ ಇರುತ್ತಾರೆ. ಪ್ರೀತಿ ಮಾಡಿ ವಿವಾಹ ಆಗುವುದು ಇದೇನೂ ನಿನ್ನೆ ಇವತ್ತಿನ ಮಾತಲ್ಲ. ವರ್ಷಾನುಗಟ್ಟಲೆ ಹಿಂದಿನಿಂದಲೂ ಈ ಪದ್ಧತಿ ಇತ್ತು ಆದರೆ ಪ್ರೀತಿ ಅನ್ನೋ ಪದ ಅಷ್ಟೊಂದು ಬಳಕೆಯಲ್ಲಿ ಇರಲಿಲ್ಲ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರ ಕಾಲದಲ್ಲಿ ಪ್ರೀತಿಸಿದವರು ಗಾಂಧರ್ವ ವಿವಾಹ ಆಗುವ ಮೂಲಕ ಒಂದಾಗುತ್ತಿದ್ದರು ಈಗಲೂ ಅದೇ ಮುಂದುವರೆದುಕೊಂಡು ಬಂದಿದೆ ಅಷ್ಟೇ. ಆದರೆ ಪ್ರೀತಿಸಿ ಮದುವೆ ಆದವರಲ್ಲೂ ಎಲ್ಲರೂ ಕೂಡ ಸಂತೋಷದಿಂದ ಜೀವನ ನಡೆಸುತ್ತಾರೆ ಅಂತ ಹೇಳುವುದು ಅಸಾಧ್ಯ. ಪ್ರೀತಿಸಿ ವಿವಾಹ ಆದವರಲ್ಲಿ ಕೆಲವರು ಮಾತ್ರ ಆನಂದದಿಂದ ಜೀವನ ನಡೆಸುತ್ತಾರೆ. ಹೀಗೆ ಪ್ರೀತಿಸಿ ವಿವಾಹ ಆದವರು ಭೂಮಿಯ ಮೇಲೆ ಎಷ್ಟೋ ಜನರು ಕಾಣಸಿಗುತ್ತಾರೆ. ಹಾಗೆ ನಮ್ಮ ಕನ್ನಡ ಧಾರಾವಾಹಿಗಳ ನಟ ನಟಿಯರೂ ಸಹ ಇದಕ್ಕೆ ಹೊರತಾಗಿ ಏನೂ ಇಲ್ಲ. ಪ್ರತೀ ದಿನ ಸಂಜೆಯಿಂದ ರಾತ್ರಿಯವರೆಗೂ ಪ್ರತಿಯೊಬ್ಬರ ಮನೆಗೂ ಬರುವ ಈ ಧಾರಾವಾಹಿ ನಟ ನಟಿಯರಲ್ಲಿ ಯಾರು ಯಾರು ಪ್ರೀತಿಸಿ ವಿವಾಹ ಆಗಿದ್ದಾರೆ ಅನ್ನೋದನ್ನ ನೋಡೋಣ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಯಾರೇ ನೀ ಮೋಹಿನಿ ಧಾರಾವಾಹಿಯ ಸೂರಜ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ವಲ್ಲಭ ಧಾರಾವಾಹಿಯ ಆರ್ಯ ವಲ್ಲಭಜಗನ್, ಉದಯದಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ನಿತ್ಯಾ ರಾಮ್, ಸತತವಾಗಿ 7 ವರ್ಷಗಳ ಕಾಲ ಕಿರುತೆರೆಯಲ್ಲಿ ವಿಜೃಂಭಿಸಿದ ಎಲ್ಲರ ಮನೆಮಾತಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ವಿಜಯ್ ಸೂರ್ಯ, ಈಗ ತಾನೇ 200 ಸಂಚಿಕೆಗಳನ್ನು ಪೂರೈಸಿರುವ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಅನಿರುದ್ಧ್, ಜೀ ಕನ್ನಡದ ರಾಧಾ ಕಲ್ಯಾಣದ ರಾಧಿಕಾ, ಜಿ ಕನ್ನಡದ ಇನ್ನೊಂದು ಹೆಸರಾಂತ ಧಾರಾವಾಹಿ ಗಟ್ಟಿಮೇಳ ದ ವೇದಾಂತ್/ ರಕ್ಷ್ , ಸುವರ್ಣದಲ್ಲಿ ಪ್ರಸಾರವಾಗುವ ಮುದ್ದುಲಕ್ಷ್ಮೀ ಧಾರಾವಾಹಿಯ ಧೃವಂತ್ , ನಮ್ಮನೆ ಯುವರಾಣಿ ಧಾರಾವಾಹಿಯ ರಘು, ರಾಧಾ ರಾಮನ ಧಾರಾವಾಹಿಯ ಸ್ಕಂದ, ಕುಲವಧು ಧಾರಾವಾಹಿಯ ಧನ್ಯಾ ದೀಪಿಕಾ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನೇಹಾ, ರಾಧಾ ರಾಮನ ಧಾರಾವಾಹಿಯ ಶ್ವೇತಾ ಪ್ರಸಾದ್ , ನಮ್ಮನೆ ಯುವರಾಣಿ ಧಾರಾವಾಹಿಯ ಕಾವ್ಯ ಮಹಾದೇವ್. ಇವರು ಇಷ್ಟು ಜನ ನಮ್ಮ ಕನ್ನಡ ಕಿರುತೆರೆಯಲ್ಲಿ ಪ್ರೀತಿಸಿ ವಿವಾಹವಾದ ನಟ ನಟಿಯರು.

By

Leave a Reply

Your email address will not be published. Required fields are marked *