ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ ರಾಧಾ ರಾಮಚಂದ್ರ ಅವರ ಜೀವನದ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಧಾ ರಾಮಚಂದ್ರ ಅವರ ತಂದೆ ಸುಬ್ಬರಾವ್ ತಾಯಿ ಪಾರ್ವತಮ್ಮ. ಇವರು ತುಮಕೂರಿನಲ್ಲಿ ಜನಿಸಿದರು. ಇವರ ತಂದೆ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸ ಮಾಡುತಿದ್ದರು ಹಾಗಾಗಿ ಟ್ರಾನ್ಸಫರ್ ಆಗುತಿತ್ತು. ರಾಧಾ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಇತ್ತು. ಪಿಯುಸಿ ಮುಗಿದ ನಂತರ ಅವರಿಗೆ ಕೆಇಬಿಯಲ್ಲಿ ಬೇಗನೇ ಒಳ್ಳೆಯ ಸಂಬಳದ ಕೆಲಸ ಸಿಕ್ಕಿತು. ನಂತರ ಮದುವೆ ಆಯಿತು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಿ ನಾಟಕಗಳಲ್ಲಿ ಅಭಿನಯಿಸಿದರು, ಅಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚಿನ ಪರಿಣತಿ ಪಡೆದರು. ಮದುವೆಯಾಗಿ ಮಕ್ಕಳು ದೊಡ್ಡವರಾಗುವವರೆಗೆ ಜವಾಬ್ದಾರಿ ಇರುವುದರಿಂದ ಬೇರೆ ಕಡೆ ಗಮನ ಕೊಡಲಿಲ್ಲ ಎಂದು ರಾಧಾ ಅವರು ಹೇಳಿದರು.

ಟಿ. ಸುನಂದಮ್ಮ ಬರೆದ ಕಾಲ ಬದಲಾಯಿತು ನಾಟಕದಲ್ಲಿ ನಾಯಕಿಯಾಗಿ ರಾಧಾ ಅವರು ಅಭಿನಯಿಸಿದರು. 33 ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದರು. ಜಯಶ್ರೀ ಅವರ ಸಿರಿ ಸಂಪಿಗೆ ನಾಟಕದಲ್ಲಿ ಅಭಿನಯಿಸಿದರು ಆದರೆ ಕಾರಣಾಂತರಗಳಿಂದ ನಾಟಕ ನಿಂತು ಹೋಯಿತು. ನಂತರ ನಾಟಕಗಳಲ್ಲಿ ಅಭಿನಯಿಸಲಿಲ್ಲ. ಅವರಾಗೆ ಅವರೇ ಪ್ರಯತ್ನ ಮಾಡಲಿಲ್ಲ ದೇವರ ಆಶೀರ್ವಾದ ಇತ್ತೇನೊ ಎಂದು ಅವರು ಹೇಳಿದರು. ಆಕಾಶವಾಣಿ ಕೆಲಸದ ಸಲುವಾಗಿ ದೂರದರ್ಶನಕ್ಕೆ ಹೋದಾಗ ಎನ್.ಎ ಸೂರಿ ಎನ್ನುವವರು ನೀವು ಅಭಿನಯಿಸುತ್ತೀರಾ ಎಂದು ಕೇಳಿದರು ಅದಕ್ಕೆ ರಾಧಾ ಅವರು ಅವಕಾಶ ಸಿಕ್ಕರೆ ಮಾಡುತ್ತೇನೆ ಎಂದು ಹೇಳಿದರು ನಂತರ ನೆರಳು ಎಂಬ 90 ನಿಮಿಷದ ಟೆಲಿ ಚಿತ್ರದಲ್ಲಿ ರಾಧಾ ಅವರು ನಟಿಸಿದರು ಇದನ್ನು ವೀಣಾ ಶಾಂತೇಶ್ವರ ಬರೆದಿದ್ದಾರೆ ಇದರಲ್ಲಿನ ಕಥೆ ಬಹಳ ನೈಜವಾಗಿದೆ ಎಂದು ರಾಧಾ ಅವರು ಹೇಳಿಕೊಂಡರು. ಇದು 1987 ಜನವರಿ 27 ರಂದು ಪ್ರಸಾರವಾಯಿತು. ಇದರಿಂದ ರಾಧಾ ಅವರು ಜನಪ್ರಿಯರಾದರು.

235 ಧಾರಾವಾಹಿಗಳಲ್ಲಿ ಅಭಿನಯಿಸಿದರು. ರಂಗಭೂಮಿ ಕಲಾವಿದರನ್ನು ಸೇರಿಸಿ ಹಾಲು ಉತ್ಪಾದಕ ಸಂಘದಿಂದ ಬೆಳ್ಳಿ ಬೆಳಕು ಎಂಬ ಸಿನಿಮಾ ಮಾಡಿದರು ಅದರಲ್ಲಿ ರಾಧಾ ಅವರು ಅಭಿನಯಿಸಿದರು ಈ ಚಿತ್ರದಲ್ಲಿ ಪ್ರೇಮಾ ಅವರು ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇದಕ್ಕೆ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ ಲಭಿಸಿದೆ. 1993 ರಲ್ಲಿ ಕೆಇಬಿಯಿಂದ ಸ್ವ ನಿವೃತ್ತಿ ಪಡೆದರು. ಜೀವನದಲ್ಲಿ ನಮಗೋಸ್ಕರ ನಾವು ಬದುಕಲು ಸ್ವಲ್ಪ ಕಾಲಾವಕಾಶ ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ನಂತರದ ದಿನಗಳಲ್ಲಿ ಕಲಾವಿದೆಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದರು. ಶಂಕರ್ ನಾಗ್ ಜೊತೆ ಮಾಲ್ಗುಡಿ ಡೇಸ್ ನಲ್ಲಿ ಅಭಿನಯಿಸಿದರು, ಮಾಲ್ಗುಡಿ ಡೇಸ್ ನಲ್ಲಿ ಅಭಿನಯಿಸಿದ ನೆನಪು ಈಗಲೂ ಇದೆ. ಒಳ್ಳೆ ನಿರ್ದೇಶಕರು ಸಿಕ್ಕಿದ್ದರು ನಾನು ಕಲ್ಪನೆ ಮಾಡಿಕೊಂಡಿರಲಿಲ್ಲ ಇಷ್ಟೊಂದು ಅಭಿನಯದಲ್ಲಿ ಮುಂದುವರೆಯುತ್ತೇನೆ ಎಂದು ರಾಧಾ ಅವರು ತಮ್ಮ ಮನದಾಳದ ಮಾತನ್ನು ಹೇಳಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!