ರಾಜೇಶ್ ಕೃಷ್ಣನ್ ಕನ್ನಡದ ಚಲನಚಿತ್ರ ಗಾಯಕ ಅವರು ೩ ಜೂನ್ ೧೯೭೩ ತಮಿಳುನಾಡಿನಲ್ಲಿ ಜನಿಸಿದರು. ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್. ರಾಜೇಶ್ ಕೃಷ್ಣನ್ ಅವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಬೆಂಗಳೂರಿನಲ್ಲಿಯೆ ಮುಗಿಸಿದರು. ರಾಜೇಶ ಕೃಷ್ಣ ಅವರು ತಮ್ಮ ಚಿಕ್ಕ ವಯಸಿನಲ್ಲೇ ತಾಯಿ ಬಳಿ ಸಂಗೀತವನ್ನು ಕಲಿತುರು. ೧೯೯೧ ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಹೀಗೆ ಹಲವಾರು ನಿರ್ದೇಶಕರ ಚಿತ್ರಗಳಲ್ಲಿ ಗೀತೆಗಳನ್ನು ಹಾಡಿದಾರೆ. ಇದುವರೆಗೆ ೩,೦೦೦ಕ್ಕೂ ಹೆಚ್ಚು ಕನ್ನಡ, ೫೦೦೦ಕ್ಕೂ ಹೆಚ್ಚು ತೆಲುಗು, ೨೫೦ ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿದಾರೆ. ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ, ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ರಾಜೇಶ ಕೃಷ್ಣ ಅವರು ಮೆಲೋಡಿ ಕಿಂಗ್ ಎಂದೇ ಪ್ರಕ್ಯಾತರಾಗಿದ್ದಾರೆ.

ಪ್ರಸ್ತುತ ರಾಜೇಶ ಕೃಷ್ಣ ಅವರಿಗೆ ನಲವತ್ತೆಳು ವರ್ಷ ವಯಸ್ಸು. ಬಹುತೇಕ ಇವರು ಹಾಡಿದ ಹಾಡುಗಳು ಹಂಸಲೇಖ ಅವರ ರಚನೆಯ ಹಾಡುಗಳೇ ಆಗಿವೆ. ಇವರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಕೂಡಾ ಹಾಡುಗಳನ್ನು ಹಾಡಿದ್ದಾರೆ. ಸೈಮಾ, ಫಿಲ್ಮ್ ಫೇರ್ ಅವಾರ್ಡ್ ಗಳನ್ನೂ ತಮ್ಮ ಗಾಯನಕ್ಕೆ ಇಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಅತ್ಯುತ್ತಮ ಗಾಯಕ ಎಂದು ಹೆಸರಾಗಿದ್ದಾರೆ. ರಾಜೇಶ ಕೃಷ್ಣ ಅವರು ಮೂರು ಬಾರಿ ಮದುವೆ ಆಗಿದ್ದಾರೆ. ಇವರ ಮೊದಲ ಹೆಂಡತಿಯ ಹೆಸರು ಸೌಮ್ಯ ರಾವ್ ಎಂದು ಇವರೂ ಕೂಡಾ ಹಿನ್ನಲೆ ಗಾಯಕಿ ಆಗಿದ್ದು, ಗಾಯಕಿ ಸುಮಿತ್ರಾ ರಾವ್ ಅವರ ಮಗಳು. ಮದುವೆಯಾಗಿ ಸ್ವಲ್ಪ ವರ್ಷದಲ್ಲಿ ಇಬ್ಬರೂ ವಿಚೆದನ ಪಡೆದಿದ್ದಾರೆ. ಅನಂತರ ರಾಜೇಶ್ ಹರಿಪ್ರಿಯಾ ಎಂಬ ದಂತ ವೈದ್ಯೆಯ ಜೊತೆ ವಿವಾಹ ಆಗುತ್ತಾರೆ ಹಾಗೂ ಈ ಮದುವೇ ಕೂಡಾ ಬಹಳ ದಿನ ಉಳಿಯದೆ ವಿಚ್ಛೇದನ ಪಡೆದುಕೊಳ್ಳುತ್ತದೆ.

ಸ್ವಲ್ಪ ದಿನ ಏಕಾಂತದಲ್ಲಿದ್ದ ರಾಜೇಶ ಕೃಷ್ಣ ಮೂರನೆಯವರಾಗಿ ರಮ್ಯಾ ವಸಿಷ್ಠ ಅವರನ್ನು ವರಿಸಿದ್ದರು. 2011ರ ನವೆಂಬರ್ 7ರಂದು ರಮ್ಯಾ ವಸಿಷ್ಠ ಅವರನ್ನು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ರಾಜೇಶ ಕೃಷ್ಣ ವರಿಸಿದ್ದರು. ರಮ್ಯಾ ವಸಿಷ್ಠ ಅವರು ಕಿರುತೆರೆ ನಟಿ ಕಮ್ ಗಾಯಕಿ, ಈಟಿವಿ ಕನ್ನಡ ವಾಹಿನಿಯ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಮ್ಯಾ, ರಾಜೇಶ ಕೃಷ್ಣ‌ ಜೊತೆಯಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹದಿನೆಂಟು ತಿಂಗಳ ಕಾಲ ಇಬ್ಬರೂ ಸಂಸಾರ ಮಾಡಿ ನಂತರ ಪತ್ನಿ ರಮ್ಯಾ ವಸಿಷ್ಠ ಅವರು ವಿವಾಹ ರದ್ದತಿ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಸುಮಾರು ಇಪ್ಪತ್ತು ದಿನದ ನಂತರ ಗಾಯಕ ರಾಜೇಶ್‌ ಕೃಷ್ಣನ್‌ ನ್ಯಾಯಲಯದ ಮುಂದೆ ಹಾಜರಾಗಿದ್ದರು.

ನನ್ನ ಪತಿ ರಾಜೇಶ್‌ ಕೃಷ್ಣನ್‌ ಅವರಿಗೆ ಪುರು’ಷತ್ವದ ಸಮಸ್ಯೆಯಿದೆ. ಈ ವಿಚಾರವನ್ನು ಮದುವೆಯಾಗುವ ಸಮಯದಲ್ಲಿ ನನತೆ ತಿಳಿಸಿಲ್ಲ. ಅವರೊಂದಿಗಿನ ವಿವಾಹ ಮಾನ್ಯತೆಯನ್ನು ರದ್ದು ಪಡಿಸುವಂತೆ ಕೋರಿ ರಾಜೇಶ ಕೃಷ್ಣ‌ ಅವರ ಮೂರನೇ ಪತ್ನಿ ರಮ್ಯಾ ವಸಿಷ್ಠ ಕೌಟುಂಬಿಕ ನ್ಯಾಯಾಲಯಕ್ಕೆ ಫೆಬ್ರವರಿ 5ರಂದು ಅರ್ಜಿ ಸಲ್ಲಿಸಿದ್ದರು. ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ರಮ್ಯಾ ಆರೋಪಗಳಿಗೆ ಆಕ್ಷೇಪಣೆ ಸಲ್ಲಿಸುವುದಾದರೆ ಸಲ್ಲಿಸಬಹುದು ಎಂದು ರಾಜೇಶ ಕೃಷ್ಣ‌ ಅವರಿಗೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ ಕೃಷ್ಣ‌ ಕೌಟುಂಬಿಕ ನ್ಯಾಯಲಯದ ಆದೇಶದಂತೆ ಕೋರ್ಟಿಗೆ ಹಾಜರಾದ ರಾಜೇಶ, ನನ್ನ ಹೆಂಡತಿ ಮಾಡಿದ ಆರೋಪ ಸತ್ಯಕ್ಕೆ ದೂರ ನನಗೆ ಪುರು’ಷತ್ವದ ಸಮಸ್ಯೆಯಿಲ್ಲ. ನನ್ನ ಪತ್ನಿ ಮಾಡಿದ ಆರೋಪವನ್ನು ನ್ಯಾಯಲಯ ಮನ್ನಿಸಬಾರದು. ನನಗೆ ಪು’ರುಷತ್ವದ ಸಮಸ್ಯೆ ಇದ್ದಿದ್ದರೆ ಮದುವೆಗೆ ಮುನ್ನವೇ ಆಕೆಗೆ ತಿಳಿಸುತ್ತಿದ್ದೆ ಎಂದು ರಾಜೇಶ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜೇಶ ಕೃಷ್ಣ ಅವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ಸಾಕಷ್ಟು ಸೀಸನ್ ಗಳಿಂದ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *