ಕನ್ನಡ ಕೋಗಿಲೆ ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿರುವ ಅಖಿಲಾ ಪಜಿಮಣ್ಣು ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತಿಚೆಗಷ್ಟೇ ಅವರು ಮುಂಜಾನೆ ರಾಗದ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದರು. ಈ ಬೆನ್ನಲ್ಲೇ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಪ್ರಖ್ಯಾತರಾಗಿ ಮನೆ ಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣು ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಧನಂಜಯ್ ಶರ್ಮಾ ಎಂಬುವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ. ಈ ವಿಚಾರವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಅಧಿಕೃತಗೊಳಿಸಿದ್ದಾರೆ ಅಖಿಲಾ ಪಜಿಮಣ್ಣು. ನಿಶ್ಚಿತಾರ್ಥದ ವಿಡಿಯೋ ಮತ್ತು ಪೋಟೋವನ್ನು ಅಖಿಲಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಶುಭಾಷಯ ತಿಳಿಸಿದ ಎಲ್ಲರಿಗೂ ಅಖಿಲಾ ಹಾಗೂ ಧನಂಜಯ್ ಧನ್ಯವಾದ ತಿಳಿಸಿದ್ದಾರೆ. ಅಖಿಲಾ ಕನ್ನಡ ಕೋಗಿಲೆ ವಿನ್ನರ್ ಪ್ರಶಸ್ತಿ ಗೆಲ್ಲಲ್ಲಿಲ್ಲವಾದರೂ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.
ಹಳೆಯ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವ ಅಖಿಲಾ ಕನ್ನಡ ಕೋಗಿಲೆ ಶೋ ನಂತರದ ದಿನಗಳಲ್ಲಿ ಬೇರೆ ಶೋಗಳಲ್ಲಿ ಬ್ಯುಸಿಯಾದರು. ನಂತರ ಯೂಟ್ಯೂಬ್ ಮೂಲಕವೂ ಅಭಿಮಾನಿಗಳನ್ನು ತಲುಪುವ ಕೆಲಸ ಮಾಡಿದರು. ಈಗ ಕಿರುತೆಯೆಯಲ್ಲಿಯೂ ನಿರೂಪಕಿಯಾಗಿ ಅಖಿಲಾ ಕಾಣಿಸಿಕೊಳ್ಳುತ್ತಿದ್ದಾರೆ.
ಧನಂಜಯ್ ಶರ್ಮಾ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಖಿಲಾ ಧನಂಜಯ್ ಜೊತೆ ಇರುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಂಗೇಜ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಎಂಗೇಜ್ಮೆಂಟ್ ಗೆ ಎಂದು ಅಜ್ಜಿ ಸೀರೆಯನ್ನು ಇಟ್ಟುಕೊಂಡು ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಗಾಯಕಿ ಅಖಿಲಾ ನಿಶ್ಚಿತಾರ್ಥವನ್ನು ಅವ ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಮ್ಮ ಕನ್ನಡದ ಗಾಯಕಿ ಅಖಿಲಾ ಮತ್ತು ಧನಂಜಯ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂದಹಾಗೆ ಗಾಯಕಿ ಅಖಿಲಾ ಕೈಹಿಡಿಯುತ್ತಿರುವ ಧನಂಜಯ್ ಶರ್ಮಾ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಿದ್ದಿಲ್ಲ ಅಲ್ಲದೆ ಗಾಯಕಿ ಅಖಿಲಾ ಸಹ ತಾವು ಮದುವೆ ಮಾಡಿಕೊಳ್ಳುತ್ತಿರುವ ಹುಡುಗನ ಬಗ್ಗೆ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಆದರೆ ಗಾಯಕಿ ಅಖಿಲ ಅವರ ನಿಶ್ಚಿತಾರ್ಥದ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ ಆದರೆ ಇವರದು ಲವ್ ಮ್ಯಾರೇಜ್ ಅಥವಾ ಆರೆಂಜ್ ಮ್ಯಾರೇಜ್ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ ಕನ್ನಡ ಕೋಗಿಲೆ ನಂತರ ಗಾಯಕಿ ಅಖಿಲಾ ಮುಂಜಾನೆ ರಾಗ ಎಂಬ ಕಾರ್ಯಕ್ರಮದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು ಅದರೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ ಇನ್ನು ಮದುವೆ ಯಾವಾಗ ಎನ್ನುವ ಬಗ್ಗೆ ಗಾಯಕಿ ಅಖಿಲ್ ಅವರೇ ಸ್ಪಷ್ಟಪಡಿಸಬೇಕಿದೆ ಈ ಪೋಸ್ಟ್ ನೋಡಿದ ಅನೇಕರು ಅವರಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ, ಜೋಡಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಅಂದಹಾಗೆ, ಧನಂಜಯ್ ವೃತ್ತಿಯಲ್ಲಿ ಏನು ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.