ಕನ್ನಡ ಸಿನಿ ಚಿತ್ರರಂಗವು ಆರಂಭವಾದ ಮೇಲೆ ಅನೇಕ ಅದ್ಭುತ ಚಿತ್ರಗಳು ಮತ್ತು ಇಂಡಸ್ಟ್ರಿಯಲ್ಲಿ ಹಿಟ್ ಸಿನಿಮಾಗಳು ನಿರ್ಮಾಣವಾಗಿವೆ. ಕನ್ನಡ ಚಿತ್ರರಂಗವೂ ದೇಶದಾದ್ಯಂತ ಹೆಸರು ಮಾಡಲು ಅದ್ಭುತ ಸಿನಿಮಾಗಳ ನಿರ್ಮಾಣವೇ ಕಾರಣವಾಗಿದೆ. ಕನ್ನಡ ಸಿನಿಮಾ ರಂಗದ ಯಶಸ್ಸಿಗೆ ಅನೇಕ ನಿರ್ಮಾಪಕರು ನಿರ್ದೇಶಕರು ನಟರುಗಳು ಕಾರಣರಾಗಿದ್ದಾರೆ. ಚಿತ್ರರಂಗದ ಯಶಸ್ಸಿಗೆ ಅದ್ಭುತ ನಟನೆ ಮತ್ತು ಚಲನಚಿತ್ರಗಳ ಪಾತ್ರ ಬಹುಮುಖ್ಯ ವಾಗಿರುತ್ತದೆ. ಕನ್ನಡ ಚಿತ್ರರಂಗದ ಇಂಡಸ್ಟ್ರಿಯ ಒಂದು ಸ್ಥಾನವನ್ನು ಹೆಚ್ಚಿಸಿಕೊಳ್ಳಲು 34 ಇಂಡಸ್ಟ್ರಿ ಹಿಟ್ ಸಿನಿಮಾಗಳು ಮುಖ್ಯ ಕಾರಣವಾಗಿದೆ ಎನ್ನಬಹುದು. ಅವುಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇಂಡಸ್ಟ್ರಿ ಹಿಟ್ ಸಿನಿಮಾ ಎಂದರೆ ಒಂದು ಇಂಡಸ್ಟ್ರಿ ಹಿಟ್ ಸಿನಿಮಾಗಿಂತ ಮತ್ತೊಂದು ಸಿನಿಮಾವೂ ಅದಕ್ಕಿಂತ ಹೆಚ್ಚು ಕಲೆಕ್ಷನ್ ಪಡೆದಲ್ಲಿ ಅದನ್ನು ಇನ್ನೊಂದು ಇಂಡಸ್ಟ್ರಿ ಹಿಟ್ ಸಿನಿಮಾ ಎನ್ನಲಾಗುತ್ತದೆ. 1934 ರಲ್ಲಿ ಬಿಡುಗಡೆಯಾದ ಮೊದಲ ಕನ್ನಡದ ನಾಯಕ ಸುಬ್ಬಯ್ಯನಾಯ್ಡು ಅವರ ಸತಿ ಸುಲೋಚನ ಚಿತ್ರವು ಕನ್ನಡ ಚಿತ್ರರಂಗದ ಮೊದಲ ಸಿನಿಮಾ ಆಗಿರುವುದರಿಂದ ಇದನ್ನು ಇಂಡಸ್ಟ್ರಿ ಹಿಟ್ ಸಿನೆಮಾ ಎನ್ನಲಾಗುತ್ತದೆ. ನಂತರ ಮೂರನೇ ಕನ್ನಡ ಸಿನಿಮಾ 1935 ರಲ್ಲಿ ಬಿಡುಗಡೆಯಾದ ಸದಾರಮೆ ಚಿತ್ರವು 3.5 ಲಕ್ಷ ಕಲೆಕ್ಷನ್ ಮಾಡಿತ್ತು.
ನಾಲ್ಕನೇ ಕನ್ನಡ ಸಿನಿಮಾ ಆಗಿ ಬಂದ ಸಂಸಾರನೌಕೆ 1936 ರಲ್ಲಿ ಬಿಡುಗಡೆಯಾಗಿ 5 ಲಕ್ಷದಷ್ಟು ಆಗಿನ ಕಾಲಕ್ಕೆ ಗಳಿಸಿತ್ತು.1943 ರಲ್ಲಿ ಬಿಡುಗಡೆಯಾದ ಸುಬ್ಬಯ್ಯನಾಯ್ಡು ಅವರ ನಾಯಕತ್ವದ ಸತ್ಯಹರಿಶ್ಚಂದ್ರ ಚಿತ್ರವು 10 ಲಕ್ಷಕ್ಕೂ ಅಧಿಕ ಹಣವನ್ನು ಗಳಿಸಿತ್ತು. ನಂತರ 1949ರಲ್ಲಿ ನಿರ್ದೇಶನಗೊಂಡ ನಾಗಕನ್ನಿಕೆ ಚಿತ್ರವು 17.5 ಲಕ್ಷ ರೂಗಳನ್ನು ಗಳಿಸಿತ್ತು. ಕನ್ನಡದ ಮೊದಲ ಹಾರರ್ ಸಿನಿಮಾ ಜಗನ್ಮೋಹಿನಿ 1951 ರಲ್ಲಿ ತೆರೆ ಕಂಡು 25 ಲಕ್ಷಕ್ಕೂ ಅಧಿಕ ಗಳಿಕೆಯನ್ನು ಮಾಡಿದೆ. ನಂತರ ಡಾಕ್ಟರ್ ರಾಜಕುಮಾರ ಹಾಗೂ ನರಸಿಂಹರಾಜು ಅವರ ಮೊದಲನೆಯ ಚಿತ್ರ ಬೇಡರ ಕಣ್ಣಪ್ಪ ಚಿತ್ರವು ದಾಖಲೆಯ 50ಲಕ್ಷ ಗಳಿಕೆಯನ್ನು ಮಾಡಿತ್ತು.
ನಂತರ ಬಂದ ಭಕ್ತವಿಜಯ, ಭೂಕೈಲಾಸ, ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಮಯೂರ, ಬಬ್ರುವಾಹನಾ, ಸನಾದಿ ಅಪ್ಪಣ್ಣ, ಶಂಕರ್ ಗುರು, ಚಲಿಸುವ ಮೋಡಗಳು, ಕವಿರತ್ನ ಕಾಳಿದಾಸ ಅಂತಹ ಡಾಕ್ಟರ್ ರಾಜಕುಮಾರ್ ಚಿತ್ರಗಳು ಒಂದಾದಮೇಲೊಂದರಂತೆ ಇಂಡಸ್ಟ್ರಿ ಹಿಟ್ ಚಿತ್ರಗಳು ಆದವು. ನಂತರ ಬಂಧನ, ಅನುರಾಗ ಅರಳಿತು, ನಂಜುಂಡಿ ಕಲ್ಯಾಣ, ಜೀವನ ಚೈತ್ರ, ಜನುಮದಜೋಡಿ, ಎ, ಯಜಮಾನ, ಆಪ್ತಮಿತ್ರ, ಜೋಗಿ, ಮುಂಗಾರು ಮಳೆ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ, ಕೆಜಿಎಫ್ ನಂತಹ ಚಿತ್ರಗಳು ಕನ್ನಡ ಇಂಡಸ್ಟ್ರಿಯ ಇಂಡಸ್ಟ್ರಿ ಹಿಟ್ ಚಿತ್ರಗಳಾಗಿವೆ.