ಸಣ್ಣ ಪ್ರಮಾಣದ ಹೂಡಿಕೆ ಜತೆಗೆ ನೀವಿರುವ ಊರಿನಲ್ಲೇ ವ್ಯಾಪಾರ ಶುರು ಮಾಡಬಹುದು, ಅದ್ಭುತವಾದ ಲಾಭವನ್ನು ಕೂಡ ಪಡೆಯಬಹುದು. ಈ ವ್ಯಾಪಾರ ಕೊರಿಯರ್ ಸರ್ವೀಸ್ ಹಾಗೆಯೇ. ಯಾವುದೇ ನಗರದಲ್ಲಿ ನಿಮಗೆ ವಿತರಕರಾಗಲು ಅವಕಾಶ ಇದೆ. ನಿಮಗೆ ಗೊತ್ತಿರುವ ಹಾಗೆ, ಆನ್ ಲೈನ್ ವ್ಯವಹಾರ ಮುಂಚಿನಷ್ಟು ಕಡಿಮೆ ಪ್ರಮಾಣದ್ದಲ್ಲ. ಮತ್ತು ಭವಿಷ್ಯ ಜನರ ಖರೀದಿ ಬಗೆಯೇ ಇದಾಗಿರುತ್ತದೆ.
ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಇದು ಭಾರತದಲ್ಲಿ ಮನೆಯಿಂದಲೇ ಮಾಡಬಹುದಾದ ಅತಿ ಪ್ರಮುಖ ಬಿಸಿನೆಸ್ ಆಗಿದೆ. ಆರೋಗ್ಯ, ಪೌಷ್ಟಿಕಾಂಶ ಆಹಾರ, ಸೌಂದರ್ಯವರ್ಧಕ ವಸ್ತುಗಳು ಹೀಗೆ ಹಲವಾರು ಕ್ಷೇತ್ರಗಳ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ಜಾಲವನ್ನು ವೃದ್ಧಿಸುತ್ತಿರುವುದರಿಂದ ಎಂಎಲ್‌ಎಂ ವಲಯದಲ್ಲಿನ ಅವಕಾಶಗಳು ಹೆಚ್ಚಾಗುತ್ತಿವೆ.ತೊಟ್ಟಿಲು ಮನೆ ಅಥವಾ ಬೇಬಿ ಸಿಟ್ಟಿಂಗ್ ಇದು ಮನೆಯಲ್ಲಿಯೇ ಮಾಡಬಹುದಾದ ಉತ್ತಮ ಕೆಲಸವಾಗಿದೆ. ಆದರೆ ಶಿಶು ಹಾಗೂ ಚಿಕ್ಕಮಕ್ಕಳನ್ನು ಪ್ರೀತಿ ಹಾಗೂ ಜತನದಿಂದ ನೋಡಿಕೊಳ್ಳುವ ಅನುಭವಿಕ ಹೆಂಗಸರು ಅಥವಾ ದಂಪತಿಗಳು ಮಾತ್ರ ಈ ವ್ಯವಹಾರಕ್ಕೆ ಕೈ ಹಾಕುವುದು ಸೂಕ್ತ. ಮಹಾನಗರಗಳು ಮಾತ್ರವಲ್ಲದೆ ಇಂದು ಎರಡನೆ ದರ್ಜೆಯ ನಗರಗಳಲ್ಲಿ ಸಹ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಬೇಬಿ ಸಿಟ್ಟಿಂಗ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.ಸಾಮಾನ್ಯವಾಗಿ ಉದ್ಯೋಗಸ್ಥ ಹೆಣ್ಣು ಮಕ್ಕಳಿಗೆ 3 ತಿಂಗಳು ಹೆರಿಗೆ ರಜೆ ಇರುತ್ತದೆ. ಹೀಗಾಗಿ ಹೆರಿಗೆಯ ಮೂರು ತಿಂಗಳ ನಂತರ ಅವರು ಕೆಲಸಕ್ಕೆ ಹೋಗುವುದು ಅನಿವಾರ್ಯ. ಅಂದರೆ ಕನಿಷ್ಠ ಮೂರು ತಿಂಗಳ ಕೂಸನ್ನು ಸಹ ನೀವು ಆರೈಕೆ ಮಾಡಲು ಸಂಪೂರ್ಣವಾಗಿ ಸಿದ್ಧರಿರಬೇಕಾಗುತ್ತದೆ. ಬೇಬಿ ಸಿಟ್ಟಿಂಗ್ ಆರಂಭಿಸಲು ಅಂಥ ದೊಡ್ಡ ಬಂಡವಾಳವೇನೂ ಬೇಕಿಲ್ಲ. ಮಕ್ಕಳಿಗೆ ಬರೆಯಲು ಕ್ರೇಯಾನ್ಸ್, ಪೇಪರು, ಆಟಿಕೆ, ಡೈಪರ್ಸ್, ಮಕ್ಕಳ ಊಟ ಹಾಗೂ ತಿಂಡಿ, ಪ್ರಥಮ ಚಿಕಿತ್ಸೆ ಕಿಟ್ ಮುಂತಾದ ಸಾಮಾನುಗಳೊಂದಿಗೆ ಬೇಬಿ ಸಿಟ್ಟಿಂಗ್ ಆರಂಭಿಸಬಹುದು.
ಕೈಗಾರಿಕಾ ವಸಾಹತುಗಳು ಹಾಗೂ ವಾಣಿಜ್ಯ ಪ್ರದೇಶಗಳ ಹತ್ತಿರ ವಾಸಿಸುವವರಿಗೆ ಮನೆಯಿಂದಲೇ ಪ್ಯಾಕಿಂಗ್ ಹಾಗೂ ರಿ-ಪ್ಯಾಕಿಂಗ್ ಬಿಸಿನೆಸ್ ಆರಂಭಿಸಲು ಸೂಕ್ತವಾಗಿದೆ. ಕೈಗಾರಿಕೆಗಳಿಂದ ನಿಮಗೆ ವಸ್ತುಗಳು ತುಂಬಿದ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಆ ಬಾಕ್ಸ್‌ಗಳನ್ನು ಬಿಚ್ಚಿ ಅದರಲ್ಲಿ ಇರುವ ವಸ್ತುಗಳಲ್ಲಿ ಯಾವುದಾದರೂ ವಸ್ತು ಗುಣಮಟ್ಟದ್ದಾಗಿಲ್ಲದಿದ್ದರೆ ಅದನ್ನು ತೆಗೆದು ಬೇರೆ ಪೀಸ್ ಸೇರಿಸಬೇಕಾಗುತ್ತದೆ. ನಂತರ ಮತ್ತೆ ಬಾಕ್ಸ್ ಅನ್ನು ಮೊದಲಿನಂತೆ ಪ್ಯಾಕ್ ಮಾಡಿ ಕಳಿಸಬೇಕಾಗುತ್ತದೆ.ಮುತ್ತು ಹಾಗೂ ಹವಳ ಪೋಣಿಸುವಿಕೆ ವ್ಯವಹಾರ ಸಹ ಮನೆಯಿಂದ ಮಾಡಲು ಉತ್ತಮವಾಗಿದೆ. ಫ್ಯಾನ್ಸಿ ಡ್ರೆಸ್‌ಗಳಿಗೆ ಮುತ್ತು ಪೋಣಿಸುವುದು ಅಥವಾ ಆಧ್ಯಾತ್ಮಿಕ ಪ್ರಾರ್ಥನೆಯ ಸರ ಮಾಡುವುದು ಅಥವಾ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅವರ ಡ್ರೆಸ್‌ಗಳಿಗೆ ಮಿಂಚುವ ಮುತ್ತು ಪೋಣಿಸುವುದು ಹೀಗೆ ಹಲವಾರು ಕೆಲಸಗಳನ್ನು ಮಾಡಿ ದುಡ್ಡು ಸಂಪಾದಿಸಬಹುದು.ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಹಲವಾರು ನಂಬಿಕೆಗಳು ಬೆಳೆದು ಬಂದಿವೆ. ತಮ್ಮ ಹೊಸ ಆಫೀಸು ಅಥವಾ ಮನೆಯನ್ನು ಯಾವ ರೀತಿ ಸಿಂಗರಿಸಬೇಕು ಎಂಬುದನ್ನು ತಿಳಿಯಲು ಹಲವಾರು ಜನ ವಾಸ್ತು ಹಾಗೂ ಫೆಂಗ್ ಶುಯಿ ನಿಪುಣರನ್ನು ಭೇಟಿ ಮಾಡುತ್ತಾರೆ. ಇನ್ನು ಜೀವನದಲ್ಲಿ ಕೆಟ್ಟ ಸಮಯ ನಡೆದಾಗ ಸಹ ಜನರಿಗೆ ಇಂಥ ಸಲಹೆ ಬೇಕಾಗುತ್ತವೆ. ವಾಸ್ತು ಎಂಬುದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸರಿಯಾದ ಉಪಯೋಗದ ಬಗ್ಗೆ ತಿಳಿಸಿದರೆ, ಫೆಂಗ್ ಶುಯಿ ಎಂಬುದು ಚೀನಾದ ವಾಸ್ತು ಶಾಸ್ತ್ರವಾಗಿದೆ.