ಜ್ಯೋತಿಷ್ಯಶಾಸ್ತ್ರ ಎನ್ನುವುದು ಸಮುದ್ರವಿದ್ದಂತೆ ಅನೇಕ ವಿಷಯಗಳನ್ನು ಒಳಗೊಂಡಿರುತ್ತದೆ. ಗ್ರಹಗಳು ಆಗಾಗ ಚಲನೆ ಆಗುವುದರಿಂದ ರಾಶಿ ಭವಿಷ್ಯದಲ್ಲಿ ತಮ್ಮದೆ ಆದ ಪರಿಣಾಮವನ್ನು ಬೀರುತ್ತದೆ. ಮಂಗಳನ ಸಂಚಾರದಿಂದ ಕೆಲವು ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಸಿಗುತ್ತದೆ ಹಾಗಾದರೆ ಯಾವ ರಾಶಿಯವರಿಗೆ ಮಂಗಳನ ಸಂಚಾರದಿಂದ ಅದೃಷ್ಟ ಸಿಗಲಿದೆ ಎಂದು ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಶಕ್ತಿ, ಧೈರ್ಯ, ಭೂಮಿ, ಮದುವೆಯ ಅಂಶ ಎಂದು ಹೇಳಲಾಗುತ್ತದೆ ಆದ್ದರಿಂದ ವ್ಯಕ್ತಿಯ ಜಾತಕದಲ್ಲಿ ಮಂಗಳ ಸರಿಯಾದ ಸ್ಥಾನದಲ್ಲಿರುವುದು ಬಹಳ ಮುಖ್ಯವಾಗುತ್ತದೆ. ಜೂನ್ 27 ರಂದು ಮಂಗಳ ಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತಿದೆ.

ಈ ದಿನ ಮಂಗಳ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ರಾಶಿ ಬದಲಾವಣೆ ಇತರ ರಾಶಿಗಳ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಅದರಲ್ಲೂ ಮಂಗಳ ಸಂಕ್ರಮಣವು 3 ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಅಂದರೆ ಈ ಮೂರು ರಾಶಿಯವರ ವೃತ್ತಿ ಜೀವನದಲ್ಲಿ ಭಾರಿ ಪ್ರಗತಿಯಾಗಲಿದೆ.

ಮಿಥುನ ರಾಶಿಯವರಿಗೆ ಮಂಗಳನ ಸಂಚಾರವು ಶುಭ ತರುತ್ತದೆ. ಮಿಥುನ ರಾಶಿಯವರ ಆದಾಯವನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಲಾಭ ಪಡೆಯುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಕೂಡಾ ಸುಧಾರಣೆಯಾಗಲಿದೆ, ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಕೂಡಾ ದೊಡ್ಡ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ವಿವಾಹಿತರು ತಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಮಂಗಳನ ಸಂಚಾರವು ಕರ್ಕ ರಾಶಿಯವರ ವೃತ್ತಿಜೀವನಕ್ಕೆ ಉತ್ತಮ ಸಮಯವನ್ನು ತರುತ್ತದೆ.

ಉದ್ಯೋಗ ಬದಲಾಯಿಸುವ ಅವಕಾಶ ಬರಬಹುದು. ಹೊಸ ಉದ್ಯೋಗಾವಕಾಶವು ಈ ರಾಶಿಯವರಿಗೆ ಸಂತೋಷವನ್ನು ನೀಡುತ್ತದೆ ಅಥವಾ ಉದ್ಯೋಗದಲ್ಲಿ ಬಡ್ತಿಯಾಗಲಿದ್ದು, ವೇತನ ಹೆಚ್ಚಳವಾಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಹೊಸ ಆಸ್ತಿ ಖರೀದಿಸಬಹುದು. ಈ ರಾಶಿಯವರು ವ್ಯಾಪಾರದಲ್ಲಿ ಹೂಡಿಕೆ ಮಾಡುವುದಾದರೆ ಲಾಭ ಗಳಿಸುತ್ತಾರೆ.

ಮಂಗಳನ ರಾಶಿಯ ಬದಲಾವಣೆಯೊಂದಿಗೆ ಸಿಂಹ ರಾಶಿಯವರ ಅದೃಷ್ಟ ಕೂಡ ಬದಲಾಗಲಿದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ, ಅಲ್ಲದೆ ಸಿಂಹ ರಾಶಿಯವರಿಗೆ ಅದೃಷ್ಟದ ಸಹಾಯದಿಂದ ಹೊಸ ಹೊಸ ಅವಕಾಶಗಳು ಬರುತ್ತವೆ. ಈ ಸಮಯದಲ್ಲಿ ಮಾಡುವ ಪ್ರಯಾಣದಿಂದ ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಹೆಚ್ಚು ಜನರಿಗೆ ಶೇರ್ ಮಾಡಿ ಅದರಲ್ಲೂ ಅದೃಷ್ಟ ಸಿಗಲಿರುವ ಮಿಥುನ, ಕರ್ಕ, ಸಿಂಹ ರಾಶಿಯವರಿಗೆ ತಿಳಿಸಿ.

Leave a Reply

Your email address will not be published. Required fields are marked *