ಪ್ರಕೃತಿಯು ಅನೇಕ ಚಿಕ್ಕ ಚಿಕ್ಕ ವಿಷಯಗಳಿಂದ ನಮಗೆ ಭವಿಷ್ಯದ ಸಂಕೇತವನ್ನು ನೀಡುತ್ತದೆ ಮತ್ತು ಭವಿಷ್ಯದಲ್ಲಿ ನಡೆಯುವಂತಹ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಆ ಸಂಕೇತಗಳನ್ನು ನಾವು ಅರ್ಥಮಾಡಿಕೊಂಡರೆ ಅದರಿಂದ ನಮಗೆ ಉಪಯೋಗವಾಗುತ್ತದೆ.
ಆದರೆ ಹಲವಾರು ಜನರು ಈ ಸಂಕೇತಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಅವುಗಳ ಬಗ್ಗೆ ಗಮನ ಕೊಡುವುದಿಲ್ಲ. ಮರಗಿಡಗಳಾಗಲಿ ಜೀವಜಂತುಗಳಾಗಲಿ ಪಶುಪಕ್ಷಿಗಳಾಗಲಿ ಅಥವಾ ಅನೇಕ ನಿರ್ಜೀವ ವಸ್ತುಗಳಾಗಲಿ ಅವು ಸಹ ನಮಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಸುತ್ತವೆ ಸಾಮಾನ್ಯವಾಗಿ ಇವುಗಳಿಂದ ಸಿಗುವ ಸಂಕೇತಗಳು ತುಂಬಾ ರಹಸ್ಯಮಯ ವಾಗಿರುತ್ತದೆ.
ಅವುಗಳನ್ನು ತಿಳಿದುಕೊಳ್ಳಲು ನಮಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದೆ ಆದರೆ ಕೆಲವು ಸಾಮಾನ್ಯವಾದ ಸಂಕೇತಗಳನ್ನು ನಾವು ಸಹ ಅರ್ಥಮಾಡಿಕೊಳ್ಳಬಹುದು. ಇಂದು ನಾವು ನಿಮಗೆ ಪಕ್ಷಿಗಳಿಂದ ನಮಗೆ ಯಾವ ರೀತಿಯ ಸಂಕೇತ ಸಿಗುತ್ತವೆ ಎಂಬುದನ್ನು ತಿಳಿಸಿ ಕೊಡುತ್ತೇವೆ.
ನಾವು ನಿಮಗೆ ತಿಳಿಸುವ ಪಕ್ಷಿ ತುಂಬಾ ಚಿಕ್ಕದಿರುತ್ತದೆ ಆದರೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಆ ಪಕ್ಷಿ ಗುಬ್ಬಯಾಗಿದೆ ದಿನವಿಡಿ ಕಾಣಿಸಿಕೊಳ್ಳುವಂತಹ ಚಿಕ್ಕ ಪಕ್ಷಿಯು ತನ್ನ ಧ್ವನಿಯಿಂದ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ ಗುಬ್ಬಿಗಳ ಧ್ವನಿ ಮಧುರವಾದ ಸಂಗೀತದಂತೆ ಇರುತ್ತದೆ.
ಅದನ್ನು ಕೇಳಿದ ನಂತರ ಮನಸ್ಸಿಗೆ ತೃಪ್ತಿಯಾಗುತ್ತದೆ ಆದರೆ ಈಗಿನ ದಿನದಲ್ಲಿ ಹಕ್ಕಿಗಳನ್ನು ನೋಡುವುದು ಅಪರೂಪವಾಗಿದೆ. ಇವುಗಳ ಅಸ್ತಿತ್ವ ಕಳೆದು ಹೋಗುತ್ತಿದೆ ಆದರೆ ಈ ಚಿಕ್ಕ ಪಕ್ಷಗಳು ನಮಗೆ ತುಂಬಾ ದೊಡ್ಡದಾದ ಸಂದೇಶವನ್ನು ನೀಡುತ್ತವೆ ಹಾಗಾದರೆ ಪಕ್ಷಿಗಳ ಮೂಲಕ ನಮಗೆ ಯಾವ ರೀತಿಯ ಸಂಕೇತ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಕಾಗೆ. ಕಾಗೆ ಯಾವ ರೀತಿಯ ಪಕ್ಷಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು ಆದರೆ ಇದು ಯಾರಿಗೂ ಇಷ್ಟ ಆಗುವುದಿಲ್ಲ ಇದರ ಕರ್ಕಶವಾದ ಧ್ವನಿ ಕೂಡ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಕಾಗೆಯು ಭವಿಷ್ಯದ ಸ್ಥಿತಿಯ ಬಗ್ಗೆ ಸೂಚನೆಯನ್ನು ನೀಡುತ್ತದೆ ಶುಭ ಮತ್ತು ಅಶುಭವಾದ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಒಂದು ವೇಳೆ ಹಲವಾರು ಕಾಗೆಗಳು ಒಟ್ಟುಗೂಡಿ ಜೋರಾಗಿ ಕಿರುಚಾಡುತ್ತಿದ್ದರೆ ಅದು ತುಂಬಾನೇ ದೊಡ್ಡ ಅಪಶಕುನ ಎಂದು ತಿಳಿಯಲಾಗುತ್ತದೆ. ಆ ಸ್ಥಾನದಲ್ಲಿ ಯಾವುದಾದರೂ ದೊಡ್ಡ ಸಂಕಟ ಬರಲಿದೆ ಎಂದು ಅರ್ಥ ಹಾಗಾಗಿ ನೀವು ಆ ಸ್ಥಾನದಿಂದ ದೂರ ಹೋಗುವುದು ಒಳ್ಳೆಯದು
ಒಂದು ವೇಳೆ ಕಾಗೆ ತನ್ನ ಬಾಯಲ್ಲಿ ಮಾಂಸದ ತುಂಡನ್ನು ಹಿಡಿದುಕೊಂಡಿರುವುದು ನಿಮಗೆ ಕಂಡುಬಂದರೆ ಅಥವಾ ನೀರಿನಿಂದ ತುಂಬಿರುವ ಕೊಡದ ಮೇಲೆ ಕುಳಿತಿರುವುದು ನಿಮಗೇನಾದರೂ ಕಂಡರೆ ಅದು ಶುಭ ಸಂಕೇತವಾಗಿದೆ. ಯಾವುದಾದರೂ ಒಳ್ಳೆಯ ಘಟನೆಯ ಸಂಕೇತ ಕೂಡ ಆಗಿರುತ್ತದೆ.
ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಕೂಡ ಹೆಚ್ಚಾಗುತ್ತದೆ ಹಾಗಾಗಿ ನೀವು ನಿಮ್ಮ ಮನೆಯ ಮುಂದೆ ಯಾವಾಗಲೂ ಒಂದು ಕೊಡದಲ್ಲಿ ನೀರನ್ನು ತುಂಬಿಡುವುದು ಒಳ್ಳೆಯದು. ಇದರಿಂದ ನೀರು ಕುಡಿಯುವ ಕಾಗೆ ದರ್ಶನ ನಿಮಗೆ ಆಗುತ್ತದೆ.
ಎರಡನೆಯದಾಗಿ ಗೂಬೆ. ಗೂಬೆಯನ್ನು ತಾಯಿ ಮಹಾಲಕ್ಷ್ಮಿಯ ವಾಹನ ಎಂದು ತಿಳಿಯಲಾಗಿದೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಗೂಬೆಯಿಂದ ಶಕುನ ಅಪಶಕುನಗಳನ್ನು ತಿಳಿಯಲಾಗುತ್ತದೆ ಒಂದು ವೇಳೆ ಯಾವುದಾದರೂ ಮನೆಯ ಮಾಳಿಗೆಯ ಮೇಲೆ ಗೂಬೆ ಬಂದು ಕುಳಿತುಕೊಂಡರೆ ಅದು ಅಪಶಕುನ ವಾಗಿರುತ್ತದೆ
ಆ ಮನೆಗೆ ಯಾವುದಾದರೂ ಕಷ್ಟ ಬರುತ್ತದೆ ಎಂದು ಅರ್ಥವಾಗುತ್ತದೆ ಒಂದುವೇಳೆ ಗೂಬೆ ಅಳುವ ಧ್ವನಿ ನಿಮಗೇನಾದರೂ ಕೇಳಿಬಂದರೆ ಅದು ಕೂಡ ಅಶುಭವಾಗಿದೆ ಅದು ಮೃತ್ಯುವಿನ ಸಂಕೇತವಾಗಿದೆ. ಒಂದು ವೇಳೆ ನಿಮಗೇನಾದರೂ ಬಿಳಿಬಣ್ಣದ ಗೂಬೆ ಕಂಡರೆ ಅದು ಶುಭದ ಸಂಕೇತ ಎಂದು ತಿಳಿಯಲಾಗಿದೆ ಅದು ಧನಸಂಪತ್ತು ಸಿಗುವ ಸಂಕೇತ ಕೂಡ ಆಗಿದೆ.
ಮೂರನೆಯದಾಗಿ ನವಿಲು. ನವಿಲನ್ನು ಶುಭ ಮತ್ತು ಒಂದು ಪವಿತ್ರವಾದ ಪಕ್ಷಿ ಎಂದು ತಿಳಿಯಲಾಗಿದೆ ಇದು ತಾಯಿ ಸರಸ್ವತಿ ದೇವಿಯ ವಾಹನ ಕೂಡ ಆಗಿದೆ ನೀವು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವಾಗ ನವಿಲಿನ ದರ್ಶನವಾದರೆ ಅಥವಾ ನವಿಲಿನ ಧ್ವನಿ ಏನಾದರೂ ಕೇಳಿ ಬಂದರೆ ಅದು ತುಂಬಾ ಶುಭ ಸಂಕೇತವಾಗಿರುತ್ತದೆ ಖಂಡಿತ ನಿಮಗೆ ಆ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎಂದು ಅರ್ಥವಾಗುತ್ತದೆ. ಇನ್ನು ಗುಬ್ಬಿ ಗಳಿಂದ ನಮಗೆ ಯಾವ ರೀತಿಯ ಸಂಕೇತ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲನೇದಾಗಿ ಯಾರ ಮನೆಯಲ್ಲಿ ಗುಬ್ಬಿಗಳು ಗೂಡನ್ನು ಕಟ್ಟಿಕೊಂಡಿರುತ್ತದೆಯೋ ಅಂತಹ ಮನೆಯಲ್ಲಿ ಯಾವತ್ತೂ ಸಂತೋಷವಿರುತ್ತದೆ ಮನೆಯ ವಾತಾವರಣ ಸುಖದಿಂದ ಕೂಡಿರುತ್ತದೆ ಮತ್ತು ಅಲ್ಲಿ ಯಾವತ್ತಿಗೂ ಧನ ಸಂಪತ್ತಿನ ಆಗಮನ ಇರುತ್ತದೆ. ಎರಡನೆಯದಾಗಿ ಯಾವುದಾದರೂ ಗುಬ್ಬಿ ನಿಮ್ಮ ಬಟ್ಟೆಯ ಮೇಲೆ ಗಲೀಜನ್ನು ಮಾಡಿ ಹೋದರೆ ಅದು ಅಶುಭ ಅಲ್ಲ ಅದು ಶುಭಸಮಾಚಾರ ಸಿಗುವ ಸಂಕೇತ ಆಗಿರುತ್ತದೆ. ಬೇಗನೆ ನಿಮಗೆ ಶುಭ ಸಮಾಚಾರ ಕೇಳುವ ಸಂಭವ ಸಿಗುತ್ತದೆ ಎಂದು ಅರ್ಥ. ಒಂದು ವೇಳೆ ಮನೆಯಲ್ಲಿ ಎಲ್ಲಾದರೂ ಗುಬ್ಬಿ ಗಲಿಜನ್ನು ಮಾಡಿ ಹೋದರೆ ಅದು ಕೂಡ ಒಳ್ಳೆಯ ಸಂಕೇತ ಆಗಿರುತ್ತದೆ.
ಮೂರನೇದಾಗಿ ಗುಬ್ಬಿಗಳು ಸಾಮಾನ್ಯವಾಗಿ ಮತ್ತು ಭಯ ಬಿಳುವಂತಹ ಪಕ್ಷಿಗಳಾಗಿವೆ. ಬೇಗ ಇವು ಯಾರ ಹತ್ತಿರ ಬರುವುದಿಲ್ಲ ಒಂದು ವೇಳೆ ನಿಮ್ಮ ಅಕ್ಕ ಪಕ್ಕ ದಲ್ಲಾಗಲಿ ನಿಮ್ಮ ಮನೆಯ ಒಳಗಾಗಲಿ ಯಾವುದೇ ಭಯವಿಲ್ಲದೆ ಗುಬ್ಬಿಗಳು ಒಳಬಂದರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚಾರವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಯಾವುದಾದರೂ ಒಂದು ದಿನ ನಿಮ್ಮ ಮನೆಯ ಮೇಲೆ ಹಲವಾರು ಗುಬ್ಬಿಗಳು ಬಂದು ಕುಳಿತುಕೊಂಡರೆ ನಿಮ್ಮ ಮನೆಯಲ್ಲಿ ಯಾವುದಾದರೂ ಶುಭಕಾರ್ಯ ಆಗುತ್ತದೆ ಎಂದು ಅರ್ಥ. ಅಥವಾ ಯಾವುದಾದರೂ ಒಳ್ಳೆಯ ಸುದ್ದಿ ಕೇಳಲು ನಿಮಗೆ ಸಿಗಬಹುದು.
ಮನೆಯಲ್ಲಿ ಗುಬ್ಬಿಗಳ ಧ್ವನಿ ಕೇಳಿ ಬರುವುದು ತುಂಬಾ ಶುಭ ಸಂಕೇತವಾಗಿರುತ್ತದೆ. ಐದನೆಯದಾಗಿ ಮನೆಯಲ್ಲಿ ಗುಬ್ಬಿಗಳ ಗೂಡು ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತದೆ ಒಂದು ವೇಳೆ ನಿಮ್ಮ ಮನೆಗೆ ಯಾವುದಾದರೂ ಸಂಕಷ್ಟ ಸಮಸ್ಯೆ ಬರಲಿದೆ ಎಂದಾದರೆ ಅದು ದೂರವಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ಬಳಿ ಯಾವುದಾದರೂ ಗುಬ್ಬಿ ಗೂಡನ್ನು ಕಟ್ಟಿ ಅದನ್ನ ಬಿಟ್ಟು ಹೋದರೆ ನೀವು ಆ ಗೂಡನ್ನು ಕಿತ್ತು ಹಾಕಬಾರದು. ಹಲವಾರು ಬಾರಿ ಗುಬ್ಬಿಗಳು ಗೂಡನ್ನು ಕಟ್ಟಿ ಅದನ್ನು ಬಿಟ್ಟು ಹೋಗುತ್ತವೆ ಒಂದು ದಿನ ಮರಳಿಗೂಡಿಗೆ ಬರುತ್ತವೆ ಅದು ಕೂಡ ಶುಭವಾಗಿರುತ್ತದೆ.
ಇಂದಿನ ದಿನಗಳಲ್ಲಿ ಪಕ್ಷಿಸಂಕುಲದಲ್ಲಿ ಅನೇಕ ಪಕ್ಷಿಗಳು ವಿನಾಶದ ಅಂಚಿನಲ್ಲಿವೆ ಅದರಲ್ಲಿ ಗುಬ್ಬಿಯು ಕೂಡ ಒಂದು ನಾವು ಇವುಗಳ ಸಂತತಿ ಅಳಿಯದಂತೆ ರಕ್ಷಿಸಬೇಕಾಗಿದೆ. ಪಕ್ಷಿಗಳು ನಮಗೆ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡುವುದಿಲ್ಲ ನಮಗೆ ಭವಿಷ್ಯದಲ್ಲಿ ಉಂಟಾಗುವ ಶುಭ ಮತ್ತು ಅಶುಭ ತಿಳಿಸಿಕೊಡುತ್ತವೆ ಅದರಿಂದ ನಮಗೆ ಒಳ್ಳೆಯದಾಗುತ್ತದೆ ಹಾಗಾಗಿ ಪಕ್ಷಿಗಳನ್ನು ಉಳಿಸಿ ಅಳಿಯದಂತೆ ರಕ್ಷಿಸೋಣ. ಜೊತೆಗೆ ಅವುಗಳು ನಮಗೆ ನೀಡುವ ಸಂಕೇತಗಳನ್ನು ಅರ್ಥ ಮಾಡಿಕೊಳ್ಳೋಣ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೆ ಪರಿಚಿತರಿಗೆ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430