ನೀವು ಜೀವನದಲ್ಲಿ ಅಂದು ಕೊಂಡದ್ದು ನಡೆಯುತ್ತೆ ಈ 5 ವಿಷಯಗಳನ್ನು ಪಾಲಿಸಿ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಮ್ಮ ಮನಸ್ಸಿನಲ್ಲಿ ನಾವು ಏನು ಅಂದುಕೊಳ್ಳುತ್ತೇವೆಯೋ ಅದನ್ನು ಈಡೇರಿಸುವುದಕ್ಕೆ ಲಾ ಆಫ್ ಅಟ್ರಾಕ್ಷನ್ ಎನ್ನುತ್ತಾರೆ. ನಮ್ಮ ಮನಸ್ಸಿನಲ್ಲಿ ಸರಿಯಾಗಿ ಬೇಡಿಕೆಗಳನ್ನು ಅಂದುಕೊಂಡಾಗ ಮಾತ್ರ ಈಡೇರುತ್ತದೆ. ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದಾಗಿ ಲಾ ಆಫ್ ಅಟ್ರ್ಯಾಕ್ಷನ್ ಕೆಲಸ ಮಾಡದೆ ಇರಬಹುದು. ಹಾಗಾದರೆ ನಮ್ಮ ಯಾವ ತಪ್ಪುಗಳಿಂದ ಲಾ ಆಫ್ ಅಟ್ರಾಕ್ಷನ್ ಕೆಲಸ ಮಾಡುವುದಿಲ್ಲ ಹಾಗೂ ಯಾವ ತತ್ವಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಲಾ ಆಫ್ ಅಟ್ರಾಕ್ಷನ್ ಕೆಲಸ ಮಾಡದೆ ಇರುವುದಕ್ಕೆ ದೊಡ್ಡ ದೊಡ್ಡ ಕಾರಣಗಳಿರುವುದಿಲ್ಲ ಒಮ್ಮೊಮ್ಮೆ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದಾಗಿ ಲಾ ಆಫ್ ಅಟ್ರಾಕ್ಷನ್ ಕೆಲಸ ಮಾಡುವುದಿಲ್ಲ. ಲಾ ಆಫ್ ಅಟ್ರಾಕ್ಷನ್ ಕೆಲಸ ಮಾಡಲು ಕೆಲವು ತತ್ವಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯ ತತ್ವ ಸ್ಪಷ್ಟ ಸಂದೇಶ ರವಾನಿಸಲು ಆಗದೆ ಇರುವುದು. ನಮಗೆ ಜೀವನದಲ್ಲಿ ಏನು ಬೇಕು ಎನ್ನುವುದನ್ನು ಕೇಳಿಕೊಳ್ಳುವುದು ದೊಡ್ಡ ವಿಷಯವಲ್ಲ. ನಮ್ಮ ಬೇಡಿಕೆಗಳನ್ನು ಯೂನಿವರ್ಸ್ ಗೆ ಯಾವ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ ಎನ್ನುವುದು ಮುಖ್ಯ.

ಉದಾಹರಣೆಗೆ ಒಬ್ಬ ವಿದ್ಯಾರ್ಥಿಗೆ ಒಂದು ವಾರದಲ್ಲಿ ಬೋರ್ಡ್ ಎಕ್ಸಾಮ್ ಇದೆ ಎಂದರೆ ಅದರಲ್ಲಿ ಪಾಸಾಗಬೇಕು ಎನ್ನುವುದು ಅವನ ಗುರಿಯಾದರೆ ಅವನು ತನ್ನ ಮನಸ್ಸಿನಲ್ಲಿ ಬೋರ್ಡ್ ಎಕ್ಸಾಮ್ ನಲ್ಲಿ ನಾನು ಪಾಸಾಗಬೇಕು ಫೇಲ್ ಆಗಬಾರದು ಎಂದು ಅಂದುಕೊಳ್ಳುತ್ತಾನೆ ಹೀಗೆ ಮಾಡುವುದರಿಂದ ಯೂನಿವರ್ಸ್ ಗೆ ನಾವು ಸ್ಪಷ್ಟ ಸಂದೇಶವನ್ನು ರವಾನಿಸುವುದಿಲ್ಲ.

ಮನಸ್ಸಿನಲ್ಲಿ ಮುಂಬರುವ ಪರೀಕ್ಷೆಯಲ್ಲಿ ನಾನು ಪಾಸಾಗುತ್ತೇನೆ ಒಳ್ಳೆಯ ಮಾರ್ಕ್ಸ್ ಪಡೆಯುತ್ತೇನೆ ಎಂಬ ಸಕಾರಾತ್ಮಕ ಭಾವನೆಯಿಂದ ಕೋರಿಕೊಳ್ಳಬೇಕು. ಲಾ ಆಫ್ ಅಟ್ರಾಕ್ಷನ್ ಗೆ ಹೆಣ್ಣು-ಗಂಡು, ಒಳ್ಳೆಯದು-ಕೆಟ್ಟದ್ದು, ತಪ್ಪು ಸರಿ ಇಂತಹ ವ್ಯತ್ಯಾಸಗಳು ಇರುವುದಿಲ್ಲ. ಅದು ನಿಮ್ಮ ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತೀರೊ, ಏನು ಕೋರಿಕೊಳ್ಳುತ್ತೀರೊ ಅದನ್ನು ಕೊಡುತ್ತದೆ ಆದ್ದರಿಂದ ನಿಮ್ಮ ಕೋರಿಕೆ ಮೇಲೆ ಜಾಗ್ರತೆ ವಹಿಸಬೇಕು. ಎರಡನೆಯ ತತ್ವ ಆಲೋಚನೆಗಳಿಗೆ ಮಿತಿ ಹಾಕಬಾರದು. ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಲವಾಗಿ ನಂಬಬೇಕು.

ಆತ್ಮಜ್ಞಾನ ಹೊಂದಿದ ಸ್ವಾಮಿ ವಿವೇಕಾನಂದರು ಈ ಸೃಷ್ಟಿಯಲ್ಲಿರುವ ಅನಂತವಾದ ಶಕ್ತಿ ನಿಮ್ಮಲ್ಲಿಯೇ ಇರುತ್ತದೆ, ನೀವು ಏನನ್ನಾದರೂ ಮಾಡಬಹುದು ಹಾಗೂ ಪ್ರತಿಯೊಂದನ್ನು ಮಾಡಬಹುದು ಆದ್ದರಿಂದ ಯಾವತ್ತಿಗೂ ನಿಮ್ಮನ್ನು ನೀವು ಕೀಳರಿಮೆಯಿಂದ ನೋಡಬೇಡಿ. ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಮಾಡಿ ಎಂದು ಹೇಳಿದ್ದಾರೆ.

ಮೂರನೇಯ ತತ್ವ ಮುಂದುವರಿಕೆ ಮತ್ತು ತಾಳ್ಮೆಯ ಕೊರತೆ. ಲಾ ಆಫ್ ಅಟ್ರಾಕ್ಷನ್ ಅನ್ನುವುದು ಒಂದೆ ದಿನದಲ್ಲಿ ಸಿಗುವುದಿಲ್ಲ. ಯಾರು ಸಹನೆಯಿಂದ, ಖುಷಿಯಿಂದ ಪ್ರಯತ್ನ ಮಾಡುತ್ತಾರೆ ಅವರು ವಿಜಯ ಸಾಧಿಸುತ್ತಾರೆ. ನಾಲ್ಕನೇಯ ತತ್ವ ಸಮಾನ ಪರಿಶ್ರಮ ಇರಬೇಕು. ನಿಮ್ಮ ಕೋರಿಕೆಗೆ ತಕ್ಕಂತೆ ಶ್ರಮಪಡಬೇಕು. ಬಹಳಷ್ಟು ಜನರು ಮನಸ್ಸಿನಲ್ಲಿ ಅಂದುಕೊಂಡರೆ ಲಾ ಆಫ್ ಅಟ್ರಾಕ್ಷನ್ ಆಗುತ್ತದೆ ಎಂದು ಕನಸು ಕಾಣುತ್ತಿರುತ್ತಾರೆ ಆದರೆ ಅದಕ್ಕೆ ತಕ್ಕಂತೆ ಪ್ರಯತ್ನ ಮಾಡುವುದಿಲ್ಲ ಅದು ತಪ್ಪು. ನಮ್ಮ ಕೋರಿಕೆಗೆ ತಕ್ಕಂತೆ ನಾವು ಶ್ರಮವನ್ನು ಇನ್ವೆಸ್ಟ್ ಮಾಡಿದಾಗ ಯಶಸ್ವಿಯಾಗುತ್ತೇವೆ. ಐದನೇಯ ತತ್ವ ಕೃತಜ್ಞತೆ ಅತ್ಯಗತ್ಯ.

ಲಾ ಆಫ್ ಅಟ್ರಾಕ್ಷನ್ ಅನ್ನು ಸ್ವಂತ ಮಾಡಿಕೊಳ್ಳಬೇಕಾದರೆ ಕೃತಜ್ಞತಾ ಭಾವನೆ ಹೊಂದಿರಬೇಕು. ಭೂಮಿಯ ಮೇಲೆ ಇರುವವರು ಯಾರೂ ಪರಿಪೂರ್ಣರಲ್ಲ. ನಮ್ಮ ಜೀವನದ ಬಗ್ಗೆ ನಮ್ಮ ಸುತ್ತಮುತ್ತಲ ಜನರ ಬಗ್ಗೆ ಕೃತಜ್ಞತಾ ಭಾವನೆಯನ್ನು ಹೊಂದಿದಾಗ ಯಶಸ್ವಿ, ನೆಮ್ಮದಿಯ ಜೀವನ ಸಿಗುತ್ತದೆ. ನಾವು ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಇರುವುದರ ಬಗ್ಗೆ ಯೋಚನೆ ಮಾಡದೆ ಇಲ್ಲದೆ ಇರುವುದರ ಬಗ್ಗೆ ಚಿಂತೆ ಮಾಡುತ್ತಾ ಕಳೆಯುತ್ತೇವೆ. ಪ್ರತಿಯೊಬ್ಬರೂ ಈ ಮೇಲಿನ ತತ್ವಗಳನ್ನು ಅನುಸರಿಸಿ ಲಾ ಆಫ್ ಅಟ್ರಾಕ್ಷನ್ ನಿಂದ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *