ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ವರ್ಚಸ್ಸು ಗುಣಗಳು ಇದ್ದೇ ಇರುತ್ತವೆ. ಆ ಗುಣಗಳು ನಮ್ಮನ್ನ ಇನ್ನೊಬ್ಬರಿಗಿಂತ ವಿಶೇಷವಾಗಿ ನಿಲ್ಲುವುದಕ್ಕೆ ಸಹಾಯ ಮಾಡುತ್ತದೆ. ಅಂತಹ ವಿಶಿಷ್ಟ ಗುಣಗಳನ್ನು ಹೊಂದಿರುವಂತಹ ಬಹಳಷ್ಟು ರಾಶಿಗಳು ಇವೆ. ಅಂತಹ ವಿಶೇಷ ಗುಣಗಳನ್ನು ಹೊಂದಿರುವುದಕ್ಕೆ ಮುಖ್ಯ ಕಾರಣ ರಾಶಿಚಕ್ರ ಎಂದು ಹೇಳಬಹುದು. ಈ ರಾಶಿಚಕ್ರದಲ್ಲಿ ಆಕಾಶ ಮತ್ತು ಭೂಮಿಯ ರಾಶಿಚಕ್ರಗಳು ಬಹಳಷ್ಟು ಪ್ರಬಲವಾಗಿದೆ ಎಂದು ಹೇಳಬಹುದು.
ಯಾವುದೇ ಕಾರಣಕ್ಕೂ ಎಂತಹ ಸಂದರ್ಭದಲ್ಲಿಯೂ ಹಿಮ್ಮೆಟ್ಟುವಂತಹ ಗುಣ ಈ ನಾಲ್ಕು ರಾಶಿಗಳ ಜನರಲ್ಲಿ ಇರುವುದಿಲ್ಲ ಇಲ್ಲ ಕೆಲಸದಲ್ಲಿಯು ಮುಂದೆ ಇರುತ್ತಾರೆ. ನಾವು ಒಬ್ಬರಿಗಿಂತ ಭಿನ್ನವಾಗಿ ನಮ್ಮನ್ನು ನಾವು ತೋರಿಸಿಕೊಳ್ಳಬೇಕು ಎಂದರೆ ನಮ್ಮಲ್ಲಿ ಆತ್ಮವಿಶ್ವಾಸ ಧೈರ್ಯವಂತೆ ಮಾತನಾಡುವಂತಹ ಸಂವಹನ ಶಕ್ತಿ ನಮಗೆ ಕರಗತ ವಾಗಿರಬೇಕು ತಿಳಿದಿರಬೇಕು. ಹುಟ್ಟಿದಾಗಿನಿಂದಲೇ ಇಂತಹ ಗುಣಗಳು ನಮ್ಮಲ್ಲಿ ಬೆಳೆದುಬಂದಿತ್ತು ಈ ಎಲ್ಲಾ ಗುಣಗಳು ನಮ್ಮ ರಾಶಿ ಮೇಲೆ ಅವಲಂಬಿತವಾಗಿರುತ್ತವೆ.
ರಾಶಿಗಳು ಯಾವುದು ಎಂದು ನೋಡುವುದಾದರೆ ಮೊದಲಿಗೆ ಮೇಷ ರಾಶಿ. ಮೇಷ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಬಳಷ್ಟು ಸಾಹಸಿ ವ್ಯಕ್ತಿಗಳಾಗಿದ್ದರು ಸದಾಕಾಲ ಚೈತನ್ಯದಿಂದ ಕೂಡಿರುತ್ತಾರೆ. ಭಯ ಎನ್ನುವುದಿದ್ದರೆ ಬಳಿ ಸುಳಿಯುವುದಿಲ್ಲ ಸದಾಕಾಲ ಚೈತನ್ಯದಿಂದ ಹುಮ್ಮಸ್ಸಿನಿಂದ ಇರುತ್ತಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಧೈರ್ಯಗೆಡದೆ ಸಂದರ್ಭವನ್ನು ಎದುರಿಸಿಲ್ಲ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ನಾಯಕತ್ವಗುಣ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಎರಡನೆಯ ರಾಶಿ ವೃಶ್ಚಿಕ ರಾಶಿ. ವೃಶ್ಚಿಕರಾಶಿಯವರಿಗೆ ಭಾವೋದ್ವೇಗ ಹೆಚ್ಚಾಗಿಯೇ ಇರುತ್ತದೆ. ಇವರು ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಂದುಕೊಂಡರೆ ಯಾವುದೇ ಕಾರಣಕ್ಕೂ ಬೇರೆಯವರ ಹಂಗಿನಲ್ಲಿ ಆ ಕೆಲಸವನ್ನು ಮಾಡಲು ಇಚ್ಛಿಸುವುದಿಲ್ಲ. ಈ ರಾಶಿಯ ಹುಟ್ಟಿದ ಜನರು ಯಾವುದೇ ಒಂದು ನಿರ್ಣಯಕ್ಕೆ ಬಂದರೆ ಅದನ್ನು ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ. ಮನೆಯಲ್ಲಿ ಆಗಿರಬಹುದು ಯಾವುದೇ ವ್ಯವಹಾರದಲ್ಲಿ ಇರಬಹುದು ಅಥವಾ ತಮ್ಮ ಕೆಲಸದ ಸ್ಥಳದಲ್ಲಿ ಇರಬಹುದು ಅವರ ನಿರ್ಧಾರವನ್ನು ಯಾರು ಸಹ ಬದಲಾಯಿಸಲು ಸಾಧ್ಯವಿಲ್ಲ. ತಾವು ಮಾಡಿದ್ದೇ ಸರಿ ಎನ್ನುತ್ತಾರೆ ಆದರೆ ಯಾವುದೇ ತಪ್ಪುಗಳನ್ನು ಸಹ ಇವರು ಮಾಡಿರುವುದಿಲ್ಲ. ಹಟ ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಒಂದು ಮುಖ್ಯ ಗುಣವಾಗಿದ್ದು ಹಟದಿಂದಲೇ ಎಲ್ಲವನ್ನು ಸಾಧಿಸುತ್ತಾರೆ.
ಮೂರನೆಯದು ಕರ್ಕಾಟಕ ರಾಶಿ. ಈ ರಾಶಿಯವರು ಬದಲಾವಣೆಗೆ ಬೇಗ ಹೊಂದಿಕೊಳ್ಳುತ್ತಾರೆ. ಸುರಕ್ಷತೆ ಆನೋಡು ಇವರಿಗೆ ಬಹಳ ಮುಖ್ಯವಾಗಿರುತ್ತದೆ. ಮೃದು ಸ್ವಭಾವದ ವ್ಯಕ್ತಿತ್ವ. ಸ್ನೇಹ ಜೀವಿ ಆಗಿದ್ದು ಉತ್ತಮ ಸಂಗಾತಿಯನ್ನು ಸಹ ಹೊಂದಿರುತ್ತಾರೆ. ಹೊರಗಿನವರು ತಮ್ಮವರು ಎಂದು ವ್ಯತ್ಯಾಸ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ತಪ್ಪು ಮಾಡಿಯಾದವರು ಯಾರೇ ಆಗಿದ್ದರೂ ಸಹ ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ವಿಧಿಸುತ್ತಾರೆ. ಬಹಳಷ್ಟು ನಿರ್ಣಾಯಕ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಬಹಳ ಪ್ರಾಮಾಣಿಕ ವ್ಯಕ್ತಿಗಳು ಆಗಿರುತ್ತಾರೆ.
ನಾಲ್ಕನೆಯ ರಾಶಿ ಸಿಂಹ ರಾಶಿ ಸಿಂಹ ರಾಶಿಯ ಜನರು ಬಹಳಷ್ಟು ಧೈರ್ಯವಂತರಾಗಿರುತ್ತಾರೆ. ಸಾಹಸ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಎಲ್ಲರನ್ನೂ ನೋಡಿಕೊಳ್ಳುವ ಆತ್ಮ ವಿಶ್ವಾಸದ ಜೊತೆಗೆ ನಾಯಕತ್ವದ ಗುಣ ಹೆಚ್ಚಾಗಿಯೇ ಇರುತ್ತದೆ. ಬಹಳಷ್ಟು ಗಂಭೀರವಾಗಿ ಇರುವ ಸಿಂಹ ರಾಶಿಯ ಜನರಲ್ಲಿ ಹಠಮಾರಿ ಸ್ವಭಾವ ಸ್ವಲ್ಪ ಹೆಚ್ಚೇ ಇರುತ್ತದೆ. ಆಕರ್ಷಕ ವ್ಯಕ್ತಿತ್ವ ಹಾಗೂ ನಿರ್ಣಾಯಕ ರೀತಿಯಲ್ಲಿ ತೆಗೆದುಕೊಳ್ಳುವ ನಿರ್ಣಯ ಬಹಳಷ್ಟು ಪ್ರಸಿದ್ಧಿಯನ್ನು ಪಡೆಯುತ್ತಾರೆ.