ಶನಿದೇವನ ಕೃಪೆ: 2023 ರಲ್ಲಿ ಈ 6 ರಾಶಿಯವರ ಯಾವುದೇ ಕೆಲಸ ಇರಲಿ ಯಶಸ್ಸು ಖಚಿತ

0 29

Kannada Astrology: ಇನ್ನೇನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2023 ಅಂದರೆ ಹೊಸ ವರ್ಷ ಪ್ರಾರಂಭವಾಗಲು ಬೆರಳೆಣಿಕೆಯಷ್ಟು ದಿನಗಳು ಉಳಿದಿವೆ. ಹೌದು ಮಿತ್ರರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಅದೃಷ್ಟವಂತ ರಾಶಿ ಅವರು 2023ರಲ್ಲಿ ಯಶಸ್ಸಿನ ಉತ್ತುಂಗ ಏರಲಿದ್ದು ಯಾವುದೇ ಉದ್ಯೋಗ ಮಾಡಿದರು ಕೂಡ ಅದೃಷ್ಟ ಅವರನ್ನು ಹುಡುಕಿಕೊಂಡು ಬರಲಿವೆ ಎಂಬುದಾಗಿ ತಿಳಿದು ಬಂದಿದೆ‌. ಹಾಗಿದ್ದರೆ ಆ ಅದೃಷ್ಟವಂತ ಆರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ; ಕೆಲಸದ ದೃಷ್ಟಿಯಿಂದ ಮುಂದಿನ ವರ್ಷ ಮೇಷ ರಾಶಿಯವರಿಗೆ ಸಾಕಷ್ಟು ಅದೃಷ್ಟ ಮಯವಾಗಿರಲಿದೆ. ಕೆಲಸಕ್ಕೆ ಸಂಬಂಧಪಟ್ಟಿರುವಂತಹ ಎಲ್ಲ ಸಮಸ್ಯೆಗಳು ಹಾಗೂ ತೊಡಕುಗಳು ದೂರವಾಗಲಿವೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳದ ಸಾಧ್ಯತೆ ಕೂಡ ದಟ್ಟವಾಗಿದೆ.

ವೃಷಭ; 2023ರಲ್ಲಿ ತಮ್ಮ ಉದ್ಯೋಗದ ಉತ್ತುಂಗಕ್ಕೆ ಏರಲಿದ್ದಾರೆ ವೃಷಭ ರಾಶಿಯವರು. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೂ ಕೂಡ ಉದ್ಯೋಗ ಪ್ರಾಪ್ತಿಯಾಗಲಿದೆ. ಒಂದು ವೇಳೆ ನೀವು ಕೆಲಸವನ್ನು ಬದಲು ಮಾಡುವ ಯೋಚನೆ ನಡೆಸುತ್ತಿದ್ದರೆ ನಿಮಗೆ ಸರಿಯಾದ ದಾರಿ ಕಾಣಲಿದೆ.

ಮಿಥುನ; ಉದ್ಯೋಗದ ವಿಚಾರದಲ್ಲಿ ಮಿಥುನ ರಾಶಿಯವರಿಗೆ ಹೊಸ ಹೊಸ ಅವಕಾಶಗಳು ಹಾಗೂ ದಾರಿಗಳು ತೆರೆದುಕೊಳ್ಳಲಿವೆ. ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ ಹಾಗೂ ಬೇರೆ ಕೆಲಸದ ಬದಲಾವಣೆ ಮಾಡಿಕೊಳ್ಳಲು ಕೂಡ ಈ ಸಮಯ ಉತ್ತಮವಾಗಿದೆ.

ಸಿಂಹ; ಸಿಂಹ ರಾಶಿಯ ಜನರು ಕಠಿಣ ಪರಿಶ್ರಮಿಗಳು. ತಮ್ಮ ಕಠಿಣ ಪರಿಶ್ರಮದಿಂದಾಗಿ ಉತ್ತಮ ಸ್ಥಾನಮಾನವನ್ನು ಹಾಗೂ ಲಾಭವನ್ನು ಪಡೆಯಲಿದ್ದಾರೆ. ಕೆಲಸದಲ್ಲಿ ಬೇಕಾದಂತಹ ಸ್ಥಳಕ್ಕೆ ಟ್ರಾನ್ಸ್ಫರ್ ಮಾಡಿಕೊಳ್ಳುವಂತಹ ಯೋಗವು ಕೂಡ ನಿಮಗೆ ಕೂಡಿ ಬರಲಿದೆ. ಜೀವನದಲ್ಲಿ ಮೊದಲ ಬಾರಿಗೆ 2023 ರಲ್ಲಿ ಸಿಂಹ ರಾಶಿಯವರು ಎಂದು ಕಾಣದಂತಹ ಹೊಸ ಎತ್ತರವನ್ನು ಏರಲಿದ್ದಾರೆ.

ತುಲಾ; ಎಲ್ಲಾ ವಿಚಾರದಲ್ಲಿಯೂ ಕೂಡ ಮುಂದಿನ ವರ್ಷದಲ್ಲಿ ತುಲಾ ರಾಶಿಯವರಿಗೆ ಅದೃಷ್ಟದ ಕೈ ಬಿಡುವುದಿಲ್ಲ. ಕೆಲಸದ ಹೊಸ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತವೆ. ಈಗಾಗಲೇ ಹಲವಾರು ವರ್ಷಗಳಿಂದ ಒಂದೇ ಕೆಲಸದಲ್ಲಿ ಇರುವವರಿಗೆ ಸ್ಥಾನಮಾನಗಳ ದೊಡ್ಡ ಮಟ್ಟದ ಬದಲಾವಣೆಗಳು ಕೂಡ ಕಂಡುಬರುತ್ತವೆ.

ಮೀನ; ಕೆಲಸ ಮಾಡುವ ಸ್ಥಳದಲ್ಲಿ ಮೀನ ರಾಶಿಯವರು ಸಹೋದ್ಯೋಗಿಗಳಿಂದ ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿದ್ದಾರೆ. ಒಂದು ವೇಳೆ ನಿಮಗೆ ಕೆಲಸ ಬದಲಾವಣೆ ಮಾಡಬೇಕು ಎನ್ನುವ ಮನಸಿದ್ದರೆ ಆ ಕೆಲಸ ಬಿಟ್ಟ ತಕ್ಷಣವೇ ಮತ್ತೊಂದು ಕೆಲಸ ನಿಮಗೆ ಸರಿಯಾಗಿ ಸಿದ್ಧವಾಗಿರುತ್ತದೆ. ಉತ್ತಮ ಅವಕಾಶಗಳು ನಿಮ್ಮ ಕಾಲ ಬುಡದಲ್ಲಿರಲಿವೆ.

Leave A Reply

Your email address will not be published.