Ultimate magazine theme for WordPress.

2021 ರಲ್ಲಿ ಈ ನಾಲ್ಕು ರಾಶಿಯವರಿಗೆ ಕೈ ಹಿಡಿಯಲಿದ್ದಾನೆ ಶನಿದೇವ.!

0 0

2021ನೇ ವರ್ಷವು ಸಕಲರಿಗೂ ಸನ್ಮಂಗಳವನ್ನೇ ತರಲಿ. ಎಲ್ಲರೂ ಸುಖ, ನೆಮ್ಮದಿಯಿಂದ ಬಾಳಲಿ ಎಂಬ ಹಾರೈಕೆಯೊಂದಿಗೆ ನೂತನ ವರ್ಷವು ಯಾವೆಲ್ಲಾ ರಾಶಿಯವರಿಗೆ ಯಾವ ಶುಭ ಫಲವನ್ನು ಮತ್ತು ಯಾವ ಅಶುಭ ಫಲವನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ ಎಂಬುದರ ಬಗ್ಗೆ ತಿಳಿಯೋಣ. ಬರಲಿರುವ ಹೊಸ ವರ್ಷ ಅಂದರೆ 2021ನೇ ವರುಷದಲ್ಲಿ ಶನೀಶ್ವರನ ಆಶೀರ್ವಾದದಿಂದ ಶನೀಶ್ವರನ ನೇರದೃಷ್ಟಿಯಿಂದ, ಈ ನಾಲ್ಕು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಅಪಾರವಾದ ಅದೃಷ್ಟವನ್ನು ಪಡೆದುಕೊಳ್ಳಲಿದ್ದಾರೆ. ಶನಿದೇವನನ್ನು ಕರ್ಮಫಲದಾತ ಎಂದು ಸಹ ಕರೆಯುವುದು ಉಂಟು. ಯಾಕೆ ಅಂದರೆ, ಯಾರು ಯಾವ ಕರ್ಮವನ್ನು ಪಾಲಿಸುತ್ತಾರೆ ಅದರ ಆಧಾರದ ಮೇಲೆ ಶನಿದೇವನ ಆಶೀರ್ವಾದವನ್ನು ಪಡೆದು ಕೊಳ್ಳಬಹುದು. ಅವರ ಕರ್ಮದ ಆಧಾರದ ಮೇಲೆ ಅವರು ಫಲವನ್ನು ಅನುಭವಿಸುತ್ತಾರೆ. ಅದೇ ರೀತಿಯಲ್ಲಿ ಶನಿದೇವನ ನೇರ ದೃಷ್ಟಿಯಿಂದ ಅದೃಷ್ಟವಂತರಾಗಲಿರುವ ರಾಶಿಗಳು ಯಾವುವು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲಿಗೆ ಮಿಥುನ ರಾಶಿ: ಇವರು ಆರಂಭದಲ್ಲಿ ಕೈಗೊಳ್ಳುವ ಕರ್ಮದ ಆಧಾರದ ಮೇಲೆ ಕೆಲಸದ ಆಧಾರದ ಮೇಲೆ, ಇವರು ಹೊಸ ವರುಷದಲ್ಲಿ ಹೊಸ ದಿವಸಗಳನ್ನು ಬರಮಾಡಿಕೊಳ್ಳಲಿದ್ದಾರೆ. ಈ ರಾಶಿಯಲ್ಲಿ ಜನಿಸಿದ ಜನರಿಗೆ ಶನಿದೇವನ ಅಪಾರ ಶಕ್ತಿಯಿಂದ, ಹೊಸವರುಷದಲ್ಲಿ ಹೆಚ್ಚಿನ ಆದಾಯ ಒಲಿದು ಬರಲಿದೆ. ಇವರು ಯಾವುದೆ ಕೆಲಸಕ್ಕೆ ಕೈ ಹಾಕಿದರೂ ಜಯ ಎಂಬುದು ಇವರಿಗೆ ಸಿಗಲಿದೆ. ಅಷ್ಟು ಮಾತ್ರ ಅಲ್ಲ ಇವರಿಗೆ ನೆಮ್ಮದಿಯ ದಿವಸಗಳು ಮುಂದಿನ ದಿನಗಳಲ್ಲಿ ಎದುರಾಗಲಿದೆ.

ಕರ್ಕಾಟಕ ರಾಶಿ: ಈ ರಾಶಿಯ ಬಗ್ಗೆ ಹೇಳಬೇಕೆಂದರೆ ಇವರು ಇಷ್ಟು ದಿನಗಳವರೆಗೂ ಅನುಭವಿಸಿದ ನೋವೆಲ್ಲವೂ ಕೂಡ ನಿವಾರಣೆಯಾಗಿ, ಇವರ ಕರ್ಮದ ಆಧಾರದ ಮೇಲೆ ಇವರಿಗೆ ಮುಂದಿನ ದಿವಸಗಳಲ್ಲಿ ನೆಮ್ಮದಿಯ ಸುಖಬಾಳ್ವೆ ನಡೆಸುತ್ತಾರೆ. ಕಷ್ಟಗಳೆಲ್ಲ ನಿವಾರಣೆಗೊಂಡು ಮುಂದಿನ ವರ್ಷ ಅಂದರೆ ಹೊಸ ವರ್ಷ ಹೆಚ್ಚು ಆದಾಯ ಇವರಿಗೆ ಒಲಿದು ಬರಲಿದೆ ಮತ್ತು ಕುಟುಂಬದ ಜವಾಬ್ದಾರಿ ಮೇಲೆ ಹೆಚ್ಚಾಗಲಿದ್ದು, ಬಿಡುವಿನ ಸಮಯ ಸಿಗುವುದು ಸ್ವಲ್ಪ ಕಡಿಮೆ. ಇನ್ನು ಮಕ್ಕಳ ವಿದ್ಯಾಭ್ಯಾಸದಲ್ಲಿ ಸಿಹಿಸುದ್ದಿಯನ್ನು ಕೇಳಲಿದ್ದೀರಿ. ಹೊಸ ವೃತ್ತಿಯನ್ನು ಆರಂಭ ಮಾಡುವ ಯೋಚನೆಯಲ್ಲಿ ಇರುವುದರಿಂದ ಲಾಭವು ಕೂಡ ಆಗಲಿದೆ. ಸಂತಾನ ಭಾಗ್ಯವನ್ನು ಬಯಸುವವರು ಹೊಸವರುಷದಲ್ಲಿ ಸಿಹಿ ಸುದ್ದಿಯನ್ನು ಕೇಳಲಿದ್ದೀರಿ.

ಕನ್ಯಾ ರಾಶಿ: ಈ ರಾಶಿಯಲ್ಲಿ ಜನಿಸಿದವರು ಸ್ವಲ್ಪ ಕಷ್ಟ ಪಡುವವರು. ಇವರು ಕೈ ಹಾಕಿದ ಎಲ್ಲಾ ಕೆಲಸಗಳು ಲಾಭದಾಯಕವಾಗಿ ಒಳ್ಳೆಯ ಫಲವನ್ನು ನೀಡುತ್ತದೆ ಮತ್ತು ದೂರ ಪ್ರಯಾಣ ಮಾಡುವ ಯೋಗ ನಿಮಗೆ ಹೊಸ ವರುಷದಲ್ಲಿ ಸಿಗಲಿದೆ ಮತ್ತು ದೂರ ಪ್ರಯಾಣ ನಿಮಗೆ ಲಾಭ ಕೂಡ ತರಲಿದೆ. ಆಸ್ತಿ ಖರೀದಿ ಮಾಡುವ ಯೋಗ ಕೂಡ ನಿಮಗೆ ಈ ಹೊಸ ವರುಷದಲ್ಲಿ ಎದುರಾಗಲಿದೆ. ಎಲ್ಲವೂ ಕೂಡ ಒಳ್ಳೆಯದಾಗಿಯೆ ಜರುಗಲಿದೆ.

ಕುಂಭ ರಾಶಿ:ಕೊನೆಯದಾಗಿ ಕುಂಭ ರಾಶಿ, ಈ ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರು ಅಂತ ಹೇಳಬಹುದು ಇನ್ನು ಎಲ್ಲಾ ಕೆಲಸಗಳಲ್ಲಿ ಜಯ ನಿಮ್ಮದಾಗುತ್ತದೆ. ಹೊಸ ವರುಷದಲ್ಲಿ ನೀವು ಕೈಹಾಕುವ ಕೆಲಸಗಳಿಂದ ನಿಮಗೆ ಅಪಾರ ಲಾಭ ಒಲಿದುಬರಲಿದೆ. ನೀವು ವಿದ್ಯಾರ್ಥಿಗಳಾಗಿದ್ದರೆ ವಿದ್ಯಾಭ್ಯಾಸದಲ್ಲಿ ನಿಮಗೆ ಹೆಚ್ಚಿನ ಪ್ರಶಂಸೆ ಹರಿದುಬರಲಿದೆ. ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಗೊಂದಲವಿದ್ದರೆ ಆಸ್ತಿ ವಿಚಾರದಲ್ಲಿಯೂ ಕೂಡ ಎಲ್ಲಾ ತೊಂದರೆಗಳು ಪರಿಹಾರವಾಗಲಿದೆ.

Leave A Reply

Your email address will not be published.