ಯುಗಾದಿ ಹಬ್ಬದಂದೇ ಅನುಶ್ರೀ ನಿರ್ಶ್ಚಿತಾರ್ಥ ಆಯ್ತಾ? ಹುಡುಗ ಯಾರು

0 0

ಮಾತಿನ ಮೂಲಕ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಿರೂಪಕಿ ಅನುಶ್ರೀ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಕಷ್ಟದ ನಂತರ ಸುಖ ಎನ್ನುವಂತೆ ಇದೀಗ ಅವರು ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಅನುಶ್ರೀ ಅವರ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ. ಯುಗಾದಿ ಹಬ್ಬದ ದಿನದಂದು ಅನುಶ್ರೀ ನೋಡಲು ಹುಡುಗನ ಕಡೆಯವರು ಅವರ ಮನೆಗೆ ಬಂದಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ತನ್ನ ಅದ್ಭುತ ನಿರೂಪಣೆಯ ಮೂಲಕ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುತ್ತಾ ಕರುನಾಡಿನ ಮನೆ ಮಗಳಾಗಿರುವ ಅನುಶ್ರೀ ಅವರು ಪ್ರಾರಂಭದಲ್ಲಿ ಬಹಳ ಕಷ್ಟಪಟ್ಟಿದ್ದರು. ಅನುಶ್ರೀ ಅವರು ಓದಿದ್ದು ಕಡಿಮೆ ಆದರೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ಅಪ್ಪನನ್ನು ಕಳೆದುಕೊಂಡ ಅನುಶ್ರೀ ಅವರು ಅಮ್ಮನನ್ನು ನೋಡಿಕೊಳ್ಳುವ ಮತ್ತು ತಮ್ಮನ ಓದಿನ ಜವಾಬ್ದಾರಿಯನ್ನು ಹೊರುತ್ತಾರೆ. ಸತತ ಹಲವು ವರ್ಷಗಳ ಏಳುಬೀಳುಗಳ ನಡುವೆ ಕಠಿಣ ಪರಿಶ್ರಮದ ಫಲವಾಗಿ ಇಂದು ಅನುಶ್ರೀ ಅವರು ಟಾಪ್ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ.

ಕಳೆದ ವಾರ ಈ ವರ್ಷದ ಮೊದಲ ಹಬ್ಬವಾದ ಯುಗಾದಿ ಹಬ್ಬವನ್ನು ಅನುಶ್ರೀ ಅವರು ಅಮ್ಮ ಮತ್ತು ತಮ್ಮನೊಂದಿಗೆ ಸಂತೋಷದಿಂದ ಆಚರಿಸಿದ್ದಾರೆ. ಯುಗಾದಿ ಹಬ್ಬದ ದಿವಸ ಹುಡುಗನ ಮನೆಯವರು ಅನುಶ್ರೀ ಅವರ ಮನೆಗೆ ಬಂದಿದ್ದರು ಎಂಬ ಸುದ್ದಿ ಕೇಳಿಬರುತ್ತಿದೆ. ಅನುಶ್ರೀ ಅವರಿಗೆ 33 ವರ್ಷ ವಯಸ್ಸಾಗಿದ್ದು ಹಲವು ವರ್ಷಗಳಿಂದ ಮದುವೆಯ ವಿಷಯವಾಗಿ ಸುದ್ದಿಯಲ್ಲಿದ್ದರು. ಇದೀಗ ಯುಗಾದಿಯ ದಿವಸ ಅನುಶ್ರೀ ಅವರನ್ನು ನೋಡಲು ಹುಡುಗನ ಮನೆಯವರು ಬಂದಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದೆ. ಹುಡುಗ ಉದ್ಯಮಿಯಾಗಿದ್ದಾನೆ, ಯಾವುದೆ ಸಿನಿಮಾ ಬ್ಯಾಗ್ರೌಂಡ್ ಹೊಂದಿಲ್ಲ, ಆದರೆ ಹುಡುಗ ಯಾರು ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಅಂದುಕೊಂಡಂತೆ ಆದರೆ ಅನುಶ್ರೀ ಅವರು ಈ ವರ್ಷವೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಆದರೆ ಈ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಅನುಶ್ರೀ ಅವರೆ ಹೇಳಬೇಕು. ಅನುಶ್ರೀ ಅವರ ಮದುವೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಅವರ ಮದುವೆ ಆದಷ್ಟು ಬೇಗ ಆಗಲಿ, ಅವರ ಕನಸುಗಳು ಈಡೇರಲಿ ಎಂದು ಆಶಿಸೋಣ.

Leave A Reply

Your email address will not be published.