ಪ್ರತಿವರ್ಷ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿಯ ಆಚರಣೆಗೆ ಕಾರಣ ಹಾಗೂ ದೀಪಾವಳಿಯ ವಿಶೇಷತೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಮಾಯಣದಲ್ಲಿ ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ರಾಮನು ಬಂದ ಸಂತಸಕ್ಕಾಗಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು. ದೀಪಾವಳಿಯಂದು ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಬೇಕು. ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದ ನೆಲೆಸುತ್ತದೆ. ಈಗಿನ ಕಾಲದಲ್ಲಿ ವಿದ್ಯುತ್‌ದೀಪಗಳ ಮಾಲೆಗಳನ್ನು ಹಚ್ಚುತ್ತಾರೆ ಅದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ದೀಪ ಎನ್ನುವ ಶಬ್ದದ ನಿಜವಾದ ಅರ್ಥ ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು ಎನ್ನುವುದು ದೀಪ ಪದದ ಅರ್ಥವಾಗಿದೆ.

ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ ಅವರ ಮನೆಯಲ್ಲಿ ಯಾವಾಗಲೂ ಅಂಧಃಕಾರವೇ ತುಂಬಿರುತ್ತದೆ, ಅವರು ಪ್ರಕಾಶದೆಡೆಗೆ, ಜ್ಞಾನದೆಡೆಗೆ ಹೋಗಲಾರರು. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಹಬ್ಬವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖ -ಸಮೃದ್ಧಿ ನೆಲೆಸಿರುತ್ತದೆ. ಚಂದನವನದಲ್ಲಿ ಈ ಬಾರಿ ದೀಪಾವಳಿಯ ಸಡಗರ ಸಂಭ್ರಮ ಜೋರಾಗಿತ್ತು, ನಟ ನಟಿಯರ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು ಇತ್ತು.

Leave a Reply

Your email address will not be published. Required fields are marked *