Ultimate magazine theme for WordPress.

ನೋಡಲು 25ರ ಹರೆಯದ ಯುವತಿಯಂತೆ ಕಾಣಿಸುವ ಸುಮಲತಾ ಅಂಬರೀಶ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ..

0 12

Sumalatha Ambarish: ಇತ್ತೀಚಿಗಷ್ಟೇ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ ಸುಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಅವರ ಜೊತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಕೊನೆಗೂ ಇವರಿಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಇವರಿಬ್ಬರ ನಡುವಿನ ವಯಸ್ಸಿನ ಅಂತರ. ಸೆಲೆಬ್ರಿಟಿಗಳ ನಡುವಿನ ವಯಸ್ಸಿನ ಅಂತರ ಖಂಡಿತವಾಗಿ ಪದೇಪದೇ ಸುದ್ದಿ ಮಾಡುತ್ತಲೇ ಇರುತ್ತದೆ.

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ವಯಸ್ಸು 29 ಆಗಿದ್ದರೆ ಅವರು ಮದುವೆಯಾಗಲು ಹೊರಟಿದ್ದ ಅವಿವಾ ಬಿದ್ದಪ್ಪ ಅವರ ವಯಸ್ಸು 32 ಆಗಿತ್ತು. ಅಭಿಷೇಕ್ ಅಂಬರೀಶ್ ಅವರಿಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರಾಗಿದ್ದರು ಕೂಡ ಇವರಿಬ್ಬರ ಪ್ರೀತಿಗೆ ಇವರ ನಡುವಿನ ವಯಸ್ಸಿನ ಅಂತರ ಅಡ್ಡಿಯಾಗಲಿಲ್ಲ. ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ಮಂಡ್ಯ ಕ್ಷೇತ್ರದ ಸಂಸದೆ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಸುಮಲತಾ ಅಂಬರೀಶ್ ಅವರ ವಯಸ್ಸು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡ ಚಿತ್ರರಂಗದಲ್ಲಿ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ 80 ಹಾಗೂ 90ರ ದಶಕದಲ್ಲಿ ಸುಮಲತಾ ಅಂಬರೀಶ್ ಅವರು ನಾಯಕ ನಟಿಯಾಗಿ ಯಾವ ರೀತಿಯಲ್ಲಿ ಮೋಡಿ ಮಾಡಿದ್ದರು ಎಂಬುದನ್ನು ನಿಮಗೆಲ್ಲ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಪಡ್ಡೆ ಹುಡುಗರ ನೆಚ್ಚಿನ ನಾಯಕ ನಟಿ ಆಗಿದ್ದರು. ಒಂದು ಕಡೆ ರಾಜಕಾರಣಿಯಾಗಿ ತನ್ನ ಕ್ಷೇತ್ರದ ಜನರ ಒಳಿತು ಕೆಡುಕುಗಳ ಬಗ್ಗೆ ಯೋಚಿಸುತ್ತಾ ಇನ್ನೊಂದು ಕಡೆ ಕಲಾವಿದೆಯಾಗಿ ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ ಸುಮಲತಾ ಅಂಬರೀಶ್ ಅವರು.

ಇನ್ನು ಇಷ್ಟೆಲ್ಲಾ ಬ್ಯುಸಿ ಆಗಿದ್ದರೂ ಕೂಡ ಇಂದಿಗೂ 25ರ ಹರೆಯದ ಸುಂದರಿಂತೆ ಕಾಣಿಸಿಕೊಳ್ಳುತ್ತಾರೆ ನಟಿ ಸುಮಲತಾ ಅಂಬರೀಶ್. ಅಷ್ಟಕ್ಕೂ ಸುಮಲತಾ ಅಂಬರೀಶ್ ಅವರ ನಿಜವಾದ ವಯಸ್ಸೆಷ್ಟು ಎನ್ನುವುದರ ಕುರಿತಂತೆ ತಿಳಿಯಲು ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದಾರೆ.

ಅಭಿಷೇಕ್ ಅಂಬರೀಶ್ ಅವರ ತಾಯಿಯಾಗಿದ್ದರು ನೋಡಲು ಮಾತ್ರ ಅವರ ಸಹೋದರಿಯಂತೆ ಕಾಣುವ (Sumalatha Ambarish) ಸುಮಲತಾ ಅಂಬರೀಶ್ ಅವರ ನಿಜವಾದ Age ವಯಸ್ಸು 59 ವರ್ಷ ವಯಸ್ಸಾಗಿದೆ. ಸುಮಲತಾ ಅಂಬರೀಶ್ ಅವರ ವಯಸ್ಸನ್ನು ಕೇಳಿ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಚಕಿತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave A Reply

Your email address will not be published.