ನಟ ಶರಣ್ ಕಷ್ಟ ಪಟ್ಟು ಕಟ್ಟಿರುವ ಮನೆ ಎಷ್ಟು ಸುಂದವಾಗಿದೆ ನೋಡಿ

0 2

ಬಹಳಷ್ಟು ಕಲಾವಿದರು ಕಷ್ಟಪಟ್ಟು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ಟಾಪ್ ನಟ, ನಟಿಯರಲ್ಲಿ ಒಬ್ಬರಾಗಿ ಮಿಂಚಿದ್ದಾರೆ. ಅವರಲ್ಲಿ ಕನ್ನಡ ಚಿತ್ರರಂಗದ ಕಾಮಿಡಿ ನಟ ಶರಣ್ ಅವರು ಒಬ್ಬರು. ಅವರು ಸಿನಿಮಾಗಳಲ್ಲಿ ಹಾಸ್ಯ ಪಾತ್ರ ಮಾಡಿ ಜನರನ್ನು ನಗಿಸುತ್ತಾರೆ. ಕಷ್ಟಪಟ್ಟು ಹಣ ಸಂಪಾದಿಸಿ ಸ್ವಂತ ಮನೆಯನ್ನು ನಿರ್ಮಿಸಿದರು ಅದರ ಬಗ್ಗೆ ಹಾಗೂ ಅವರ ಸಿನಿ ಜರ್ನಿ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಶರಣ್ ಅವರ ತಂದೆ-ತಾಯಿ ಒಂದು ನಾಟಕ ಕಂಪನಿಯನ್ನು ನಡೆಸುತ್ತಿದ್ದರು ಹಾಗಾಗಿ ಅವರಿಗೆ ನಟನೆ ಹೊಸದೇನಲ್ಲ, ನಟನೆ ಅವರಿಗೆ ರಕ್ತಗತವಾಗಿದೆ ಎಂದರೆ ತಪ್ಪಾಗಲಾರದು. ಶರಣ್ ಅವರ ತಂಗಿ ಶ್ರುತಿ ಅವರು ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಶ್ರುತಿ ಅವರು 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದರು. ಶ್ರುತಿ ಅವರು ಅಣ್ಣನನ್ನು ಚಿತ್ರರಂಗಕ್ಕೆ ಕರೆತರಬೇಕೆಂದು ಬಹಳ ಆಸೆ ಪಟ್ಟಿದ್ದರು ಆದರೆ ಶರಣ್ ಅವರಿಗೆ ಅಭಿನಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು, ದೂರದರ್ಶನದಲ್ಲಿಯೂ ಸಹ ಇವರು ಕೆಲಸ ಮಾಡಿದ್ದಾರೆ. ಪ್ರೇಮಾ ಪ್ರೇಮಾ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಶರಣ್ ಅವರು ಪ್ರವೇಶಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ನಂತರ ಶ್ರುತಿ ಅವರು ನಟಿಸಿದ, ಎಸ್ ಮಹೇಂದರ್ ಅವರು ನಿರ್ದೇಶಿಸಿದ ಕರ್ಪೂರದ ಗೊಂಬೆ ಸಿನಿಮಾದಲ್ಲಿ ಶರಣ್ ಅವರು ನಟಿಸಿದ್ದಾರೆ. ನಂತರ ಒಂದೆರಡು ವರ್ಷ ಯಾವುದೇ ಚಿತ್ರದಲ್ಲಿ ಅವರು ನಟಿಸಲಿಲ್ಲ ನಂತರ ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡರು.

ಕನ್ನಡ ಚಿತ್ರರಂಗದ ಟಾಪ್ ಹಾಸ್ಯನಟರಲ್ಲಿ ಶರಣ್ ಅವರು ಒಬ್ಬರಾಗಿ ಮಿಂಚಿದ್ದಾರೆ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟನಾಗಿ ಹೊರಹೊಮ್ಮಿದರು. ಬಹುತೇಕ ಚಿತ್ರಗಳಲ್ಲಿ ಶರಣ್ ಆವರ ಹಾಸ್ಯ ಜನರ ಮನಸ್ಸನ್ನು ಗೆದ್ದಿದೆ. ಕೆಲವು ಸಿನಿಮಾಗಳಲ್ಲಿ ಶರಣ್ ಅವರು ನಾಯಕನಟನಾಗಿ ನಟಿಸಿದ್ದಾರೆ. ಶರಣ್ ಅವರು ಕಷ್ಟಪಟ್ಟು ಹಣ ಸಂಪಾದಿಸಿ ಒಳ್ಳೆಯ ಮನೆಯನ್ನು ನಾಗರಬಾವಿಯಲ್ಲಿ ಕಟ್ಟಿಸಿದ್ದಾರೆ. ಶರಣ್ ಅವರ ಮನೆಯ ಗೃಹಪ್ರವೇಶಕ್ಕೆ ಚಿತ್ರರಂಗದ ಬಹುತೇಕ ಗಣ್ಯವ್ಯಕ್ತಿಗಳು ಹಾಜರಾಗಿದ್ದರು ಜಯಂತಿ, ಚಿಕ್ಕಣ್ಣ, ಪ್ರೇಮ್, ಹಿರಿಯ ನಟ ರಾಮಕೃಷ್ಣ, ನಟಿ ಆಶಿಕಾ ರಂಗನಾಥ್ ಅವರು ತಮ್ಮ ತಂಗಿಯೊಂದಿಗೆ ಗೃಹಪ್ರವೇಶಕ್ಕೆ ಆಗಮಿಸಿ ಶುಭಕೋರಿದರು. ಶರಣ್ ಅವರು ರ್ಯಾಂಬೊ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಲ್ಲದೆ, ಚಿತ್ರವನ್ನು ತಾವೇ ನಿರ್ಮಾಣ ಮಾಡಿದ್ದಾರೆ. ಕಷ್ಟಪಟ್ಟು ಹಣ ಹಾಕಿ ಸಿನಿಮಾ ನಿರ್ಮಿಸಿದ್ದರು ರ್ಯಾಂಬೊ ಸಿನಿಮಾ ಯಶಸ್ಸನ್ನು ತಂದುಕೊಟ್ಟಿತು. ರ್ಯಾಂಬೊ, ವಿಕ್ಟರಿ ಮೊದಲಾದ ಸಿನಿಮಾಗಳಲ್ಲಿ ಶರಣ್ ಅವರು ನಟಿಸಿದರು. ಶರಣ್ ಅವರಿಗೆ 45 ವರ್ಷ ವಯಸ್ಸಾದರೂ ಯುವಕನಂತೆ ಕಾಣುತ್ತಾರೆ ಅಲ್ಲದೆ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಒಟ್ಟಿನಲ್ಲಿ ಶರಣ್ ಅವರು ತಮ್ಮ ಕುಟುಂಬದವರೊಂದಿಗೆ ಸಂತೋಷವಾಗಿರಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಜನರನ್ನು ಮನರಂಜಿಸಲಿ ಎಂದು ಆಶಿಸೋಣ.

Leave A Reply

Your email address will not be published.