ಬಹಳಷ್ಟು ಕಲಾವಿದರು ಸಿನಿಮಾದಲ್ಲಿ ನಗಿಸುತ್ತಾ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಆದರೆ ತಮ್ಮ ಜೀವನದಲ್ಲಿ ಬಹಳಷ್ಟು ನೋವನ್ನು ಪಡುತ್ತಿರುತ್ತಾರೆ. ಅವರಲ್ಲಿ ವಿಲನ್ ಆಗಿ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿರುವ ಸತ್ಯಜಿತ್ ಅವರ ನೋವಿನ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಟ ಸತ್ಯಜಿತ್ ಅವರು ಜೀವನ ಎಂದ ಮೇಲೆ ಏರು ಇಳಿವು ಇರುತ್ತದೆ ನನ್ನ ಜೀವನದಲ್ಲಿ ಸಂತೋಷಪಟ್ಟಿದ್ದೇನೆ ಅದರ ಜೊತೆಗೆ ದುಃಖವನ್ನು ಸಹ ಪಟ್ಟಿದ್ದೇನೆ ಎಂದು ಹೇಳಿದರು. ಅವರು 37 ವರ್ಷದ ಹಿಂದೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದರು ಮೊದಲು ಅವರು ಕೆಎಸ್ಆರ್ಟಿಸಿ ಡ್ರೈವರ್ ಆಗಿ 500ರೂ ಸಂಬಳದಲ್ಲಿ ಮನೆ ನಡೆಸುತ್ತಿದ್ದರು. ಅವರಿಗೆ ಮೂವರು ಮಕ್ಕಳು ಇಬ್ಬರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳು. ಹಿಂದಿಯಲ್ಲಿ ಅಂಕುಶ್ ಸಿನಿಮಾದಲ್ಲಿ ಒಂದು ಪಾತ್ರ ನಿರ್ವಹಿಸುತ್ತಾರೆ ಅದು ಹಿಟ್ ಆಗುತ್ತದೆ ಅದನ್ನು ನೋಡಿದ ಕನ್ನಡ ನಿರ್ದೇಶಕರು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಲು ಅವಕಾಶ ಕೊಟ್ಟರು ಎಂದು ಹೇಳಿಕೊಂಡರು. ಅವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರು ಮಗನೂ ಸಹ ಸಿನಿಮಾದಲ್ಲಿ ನಟಿಸಿದ್ದರು ಈಗ ಬಿಸಿನೆಸ್ ಮಾಡುತ್ತಿದ್ದಾನೆ ಎಂದು ಮಗನ ಬಗ್ಗೆ ಹೇಳಿದರು. ಅವರ ಮಗಳಿಗೆ ಕಮರ್ಷಿಯಲ್ ಫೈಲಟ್ ಆಗಬೇಕೆಂಬ ಆಸೆ ಇತ್ತು ಆದರೆ ಅದು ಬಹಳ ಖರ್ಚು ಆದರೂ ಟ್ರೇನಿಂಗ್ ಕೊಡಿಸಿದರು ಏರಡೆಕ್ಕನ್ ನಲ್ಲಿ ಪೋಸ್ಟಿಂಗ್ ಆಯಿತು ಅದರಲ್ಲಿ ಸತ್ಯಜಿತ್ ಅವರ ಸ್ನೇಹಿತ ಕ್ಯಾಪ್ಟನ್ ಆಗಿದ್ದ ಅವರ ಜೊತೆ ಸತ್ಯಜಿತ್ ಅವರ ಮಗಳು ಕೆಲಸ ಮಾಡಬೇಕಿತ್ತು ಅವಳು ಅವರ ಹತ್ತಿರ ತನ್ನ ತಂದೆಯ ಬಗ್ಗೆ ಹೇಳಿದಾಗ ಫೋನ್ ಮಾಡಿ ನಿಮ್ಮ ಮಗಳು ಮಾರ್ಕ್ಸ್ ಚೆನ್ನಾಗಿ ತೆಗೆದಿದ್ದಾಳೆ ಅವಳನ್ನು ಫೈಲೆಟ್ ಮಾಡುವುದು ಬಿಟ್ಟು ಈ ಕೆಲಸಕ್ಕೆ ಕಳಿಸಿದ್ದೀರಾ ಎಂದು ಕೇಳಿದರು.
ಅಲ್ಲಿಂದ ಅವಳು ಮತ್ತೆ ಪೈಲೆಟ್ ಆಗಬೇಕು ಎಂದು ಹೇಳುತ್ತಿದ್ದಳು ಅದರಂತೆ ಬ್ಯಾಂಕಿನಲ್ಲಿ ಲೋನ್ ಮಾಡಿ ಕಳುಹಿಸಿದರು ಅವಳು ಪಾಸ್ ಮಾಡಿ ಜಾಬ್ ಸಿಕ್ಕಿತು. ಅವರ ಲೋನ್ 54 ಲಕ್ಷ ಕಟ್ಟಬೇಕಾಯಿತು ಒಂದು ವಾರ ಟೈಮ್ ತೆಗೆದುಕೊಂಡು 62 ಲಕ್ಷಕ್ಕೆ ತಾವು ಕಟ್ಟಿದ ಮನೆಯನ್ನು ಮಾರಿದರು ಲೋನ್ ತೀರಿಸಿದ ನಂತರ ಮನೆಯವರ ಜವಾಬ್ದಾರಿಯನ್ನು ಸತ್ಯಜಿತ್ ಅವರು ವಹಿಸಿಕೊಂಡರು ಆದರೆ ಒಂದು ಅಪಘಾತದಿಂದ ಕಾಲನ್ನು ಕತ್ತರಿಸಬೇಕಾಯಿತು ಇದರಿಂದ ಆದಾಯ ನಿಂತು ಹೋಯಿತು. ಮಗಳು ಯೂನಿಫಾರ್ಮ್ ಹಾಕಿಕೊಂಡು ಜಾಬ್ ಗೆ ಹೋಗುವುದನ್ನು ನೋಡಿ ನನಗೆ ಹೆಮ್ಮೆ ಆಗುತ್ತಿತ್ತು ಎಂದು ಹೇಳಿಕೊಂಡರು. ನಮ್ಮ ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದೇವು ಕಾರವಾರದ ತೌಸಿಫ್ ಖಾನ್ ಎಂಬುವವನೊಂದಿಗೆ ಸತ್ಯಜಿತ್ ಅವರ ಮಗಳು ಲವ್ ಮಾಡಿದಳು ಅವನು ಅವಳಿಗೆ ಸುಳ್ಳು ಹೇಳಿದ್ದ ಅವಳು ಅವನನ್ನು ನಂಬಿದ್ದಳು.
ಅವಳು ಸತ್ಯಜಿತ್ ಅವರ ಬಳಿ ಬಂದು ಇವನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಾಗ ಅವರು ಒಪ್ಪಿಕೊಳ್ಳುತ್ತಾರೆ. ಅವನ ಲೆಕ್ಕಚಾರ ಮನೆ ಮಾರಿದ್ದಾರೆ ಹಣವಿದೆ ಇದರಿಂದ ನನ್ನ ಜೀವನ ಸೆಟ್ಲ್ ಆಗುತ್ತದೆ ಎಂದು. ದೊಡ್ಡವರು ಅವಳಿಗೆ ತಿಳಿಸಿ ಹೇಳಿದರು ಅವಳು ಯಾರ ಮಾತನ್ನು ಕೇಳಲಿಲ್ಲ. ಸತ್ಯಜಿತ್ ಅವರು ತಮ್ಮ ಗಂಡು ಮಕ್ಕಳಿಗೆ ಬಿಟ್ಟು ಮನೆ ಮಾರಿ ಮಗಳನ್ನು ಓದಿಸಿದರು ಅವಳು ಪ್ರೀತಿಸಿದವನೊಂದಿಗೆ ಮದುವೆ ಮಾಡಿದ ನಂತರ ತಂದೆ ತಾಯಿಯ ಜವಾಬ್ದಾರಿಯನ್ನು ಅವಳು ಮರೆತುಬಿಟ್ಟಳು. ಇವರ ಮಗಳ ಸಂಬಳದಲ್ಲಿ ಅವನು ಕಾರು, ಲೋನ್ ತೆಗೆದುಕೊಂಡನು. ಇವರಿಗೆ ಯಾವುದೇ ರೀತಿಯಲ್ಲಿ ಅವರು ಸಹಾಯ ಮಾಡಲಿಲ್ಲ. ಮಗಳ ಸಲುವಾಗಿ ಕಷ್ಟಪಟ್ಟು ಕಟ್ಟಿದ ಮನೆಯನ್ನು ಮಾರಲಾಯಿತು ಆದರೆ ಮಗಳು ನಿನ್ನೆ ಮೊನ್ನೆ ಬಂದಂತ ಹುಡುಗನನ್ನು ಇಷ್ಟಪಟ್ಟು ತಂದೆ-ತಾಯಿಯನ್ನು ದೂರ ಮಾಡಿದಳು. ಸತ್ಯಜಿತ್ ಅವರು ಯಾವ ತಂದೆ ತಾಯಿಗೂ ಮಕ್ಕಳು ಮೋಸ ಮಾಡಬಾರದು ಎಂದು ತಮ್ಮ ದುಃಖವನ್ನು ಹೇಳಿಕೊಂಡರು.