ಸಂಕ್ರಾಂತಿ ಎಲ್ಲಾ ಕಡೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಎಳ್ಳು-ಬೆಲ್ಲವನ್ನು ಕೊಟ್ಟು ಶುಭಹಾರೈಕೆ ಮಾಡಿಕೊಳ್ಳುತ್ತಾರೆ. ಸಂಕ್ರಾಂತಿಯು ಸಮೃದ್ಧಿಯ ಸಂಕೇತವಾಗಿದೆ ಈ ಹಬ್ಬದ ಉದ್ದೇಶ ನಮ್ಮ ಹಿಂದಿನ ಕಹಿ ಜಗಳಗಳನ್ನು ಮರೆತು ನಮ್ಮ ಅಹಂಕಾರವನ್ನು ಬಿಟ್ಟು ಪ್ರೀತಿ ಕಾಳಜಿಯೊಂದಿಗೆ ಸುಂದರ ಜಗತ್ತಿನಲ್ಲಿ ಹೆಜ್ಜೆ ಹಾಕುವುದನ್ನು ಸೂಚಿಸುತ್ತದೆ.
ನಾವು ಪ್ರೀತಿಸುವ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಸ್ಥಾಪಿಸುವುದು ನಾವು ಹೊಂದಿರುವ ಯಾವುದೇ ರೀತಿಯ ಕಹಿ ಅಥವಾ ದ್ವೇಷವನ್ನು ಕೊನೆಗೊಳಿಸುವುದು ಮತ್ತು ನಮಗೆ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂತೋಷದ ಚೌಕಟ್ಟನ್ನು ಸೃಷ್ಟಿಸುವುದು ಈ ಹಬ್ಬದ ಉದ್ದೇಶ.
ಈ ವರ್ಷ ಕರೋನ ನಡುವೆಯೂ ಹಬ್ಬದ ಸಡಗರ ಎಲ್ಲೆಡೆ ಜೋರಾಗಿದೆ ಕನ್ನಡ ಸಿನಿಮಾ ರಂಗದ ತಾರೆಯರು ತಾವು ಆಚರಿಸಿಕೊಂಡ ಸಂಕ್ರಾಂತಿ ಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಅವರಲ್ಲಿ ಸುಧಾರಾಣಿ ಶೃತಿ ಮಾಳವಿಕಾ ಅವಿನಾಶ್ ಅವರು ಕೂಡ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಣೆ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶೃತಿ ಸುಧಾರಾಣಿ ಮಾಳವಿಕಾ ಅವಿನಾಶ್ ಇವರು ಉತ್ತಮ ಸ್ನೇಹಿತರಾಗಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಒಟ್ಟಿಗೆ ಮಾಡುತ್ತಾರೆ ಅದೇ ರೀತಿ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಕೂಡ ಜೊತೆಯಾಗಿ ಆಚರಿಸಿದ್ದಾರೆ. ಮೂವರು ಸೇರಿಕೊಂಡು ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ ಅವರು ಎತ್ತಿನ ಕೊಡುಗಳಿಗೆ ಬಣ್ಣವನ್ನು ಹಚ್ಚಿ ಅದನ್ನು ಸಿಂಗರಿಸಿ ರಂಗೋಲಿಯನ್ನು ಹಾಕಿ ಕಬ್ಬನ್ನು ಕಟ್ಟಿ ಸಾಂಪ್ರದಾಯಕವಾಗಿ ಹಬ್ಬವನ್ನು ಸಡಗರದಿಂದ ಆಚರಿಸಿದರು ಆ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ವರ್ಷ ಕರೋನಾ ಭೀತಿಯ ನಡುವೆಯೇ ಸರಳವಾಗಿ ಎಲ್ಲರೂ ಕೂಡ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂಕ್ರಾಂತಿ ಎಲ್ಲರ ಬದುಕಿನಲ್ಲಿ ಸುಖ ಸಮೃದ್ಧಿ ಸಂತೋಷವನ್ನು ತರಲಿ ಎಂದು ನಾವು ಹಾರೈಸೋಣ.