Ultimate magazine theme for WordPress.

ಯಾವುದೇ ಸಿನಿ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ರಂಗದಲ್ಲಿ ರಶ್ಮಿಕಾ ಮಿಂಚುತ್ತಿರೋದು ಹೇಗೆ ಗೊತ್ತೇ

0 0

ಇವರ ನಗುವಿಗೆ ಮಾರು ಹೋಗದವರು ಇಲ್ಲ, ಚಷ್ಮ ಹಾಕಿಕೊಂಡು ಇವರು ಕೊಡೊ ಲುಕ್ ನೋಡಲು ಸುಂದರ ಅವರು ಯಾರೆಂದರೆ ಕೊಡಗಿನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ. ಅವರು ಯಾವುದೇ ಸಿನಿ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಅವರು ಕನ್ನಡವನ್ನು ಹೆಚ್ಚು ಏಕೆ ಮಾತನಾಡುವುದಿಲ್ಲ ಹಾಗೂ ಅವರ ಸಿನಿ ಜೀವನದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ರಶ್ಮಿಕಾ ಅವರು ಏಪ್ರಿಲ್ 5, 1996 ರಲ್ಲಿ ಮದನ್ ಮಂದಣ್ಣ ಮತ್ತು ಸುಮನಾ ಮಂದಣ್ಣ ಅವರ ಮಗಳಾಗಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದ್ದಾರೆ, ಇವರಿಗೆ ಒಬ್ಬಳು ತಂಗಿ ಇದ್ದಾಳೆ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಎಲ್ಲರೂ ಇವರನ್ನು ಪ್ರೀತಿಸಿದರು ಆದರೆ ನಂತರ ಕೆಲವು ವಿವಾದಗಳಿಂದ ಕೆಲವರು ಇವರನ್ನು ದ್ವೇಷಿಸಿದರು. ಅವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೊಡಗಿನಲ್ಲಿ ಪಡೆಯುತ್ತಾರೆ ನಂತರ ಮೈಸೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆಯುತ್ತಾರೆ. ನಂತರ ಬೆಂಗಳೂರಿಗೆ ಬಂದು ಸೈಕಾಲಜಿ, ಜರ್ನಲಿಸಂ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಅವರು ಮೊಡೆಲಿಂಗ್ ಕೂಡ ಮಾಡುತ್ತಾರೆ. ಕಾಲೇಜಿನಲ್ಲಿ ಮೊಡೆಲಿಂಗ್ ಸ್ಪರ್ಧೆ ಇರುತ್ತದೆ ಅದರಲ್ಲಿ ರಶ್ಮಿಕಾ ಭಾಗವಹಿಸಿ ವಿನ್ ಆಗುತ್ತಾರೆ, ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ರಾಜ್ಯಮಟ್ಟದಲ್ಲಿ ಗೆದ್ದು ಉಪೇಂದ್ರ ಮತ್ತು ಕೃತಿ ಕರಬಂದ ಅವರಿಂದ ಪ್ರಶಸ್ತಿಯನ್ನು ಪಡೆಯುತ್ತಾರೆ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಮುಂಬೈನಲ್ಲಿ ನಡೆದ ಟೈಮ್ಸ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಕ್ಲೀನ್ ಅಂಡ್ ಕ್ಲಿಯರ್ ಟೈಮ್ಸ್ ಫ್ರೆಶ್ ಫೇಸ್ ಆಫ್ ಇಂಡಿಯಾ 2012 ರ ವಿನ್ನರ್ ಆಗಿ ಹೊರಹೊಮ್ಮುತ್ತಾರೆ. ನಂತರ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುತ್ತಾರೆ.

2016 ರಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ತಂಡ ಕಿರಿಕ್ ಪಾರ್ಟಿ ಸಿನಿಮಾಕ್ಕಾಗಿ ಹೀರೋಯಿನ್ ಹುಡುಕುತ್ತಾರೆ. ಆ ಸಮಯದಲ್ಲಿ ರಶ್ಮಿಕಾ ಅವರ ಫೋಟೋವನ್ನು ರಿಷಬ್ ಅವರು ಪೇಪರ್ ನಲ್ಲಿ ನೋಡಿರುತ್ತಾರೆ ಅವರು ರಶ್ಮಿಕಾ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ. ಕಿರಿಕ್ ಪಾರ್ಟಿ ಹಿಟ್ ಆಗಿ ರಶ್ಮಿಕಾ ಅವರು ಸ್ಟಾರ್ ಆಗುತ್ತಾರೆ. ನಂತರ ಅವರಿಗೆ ಅವಕಾಶಗಳು ಹೆಚ್ಚಾಗುತ್ತಲೆ ಹೋಯಿತು. ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್, ಪುನೀತ್ ರಾಜಕುಮಾರ್, ಗಣೇಶ್ ಅವರೊಂದಿಗೆ ಸಿನಿಮಾಗಳಲ್ಲಿ ನಟಿಸಿದರು. ನಂತರ ತೆಲುಗಿನಲ್ಲಿ ನಟಿಸಲು ಕೂಡ ಅವಕಾಶ ಸಿಗುತ್ತದೆ. ರಶ್ಮಿಕಾ ಅವರು ತಮ್ಮ ನಟನೆಯಿಂದ ತೆಲುಗಿನಲ್ಲಿ ಅಭಿಮಾನಿಗಳನ್ನು ಹೊಂದುತ್ತಾರೆ. ತೆಲುಗು ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ನಂತರ ತಮಿಳು ಚಿತ್ರಗಳಲ್ಲಿ ನಟಿಸಲು ಸಹ ಅವಕಾಶ ಸಿಗುತ್ತದೆ.

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರು ಪ್ರೀತಿಯ ವಿಚಾರವನ್ನು ತಿಳಿಸಿ, ಎರಡು ಮನೆಯವರ ಒಪ್ಪಿಗೆ ಮೇರೆಗೆ 2017ರಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ, ಮನಸ್ತಾಪದಿಂದ ಎಂಗೇಜ್ಮೆಂಟ್ ಅನ್ನು ಮುರಿದುಕೊಳ್ಳುತ್ತಾರೆ. ನಂತರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಅವರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. 2018ರಲ್ಲಿ ಕೊಡಗಿನಲ್ಲಿ ಮಹಾಪ್ರವಾಹ ಉಂಟಾದಾಗ ರಶ್ಮಿಕಾ ಅವರು ಶೂಟಿಂಗ್ ನಲ್ಲಿದ್ದರು ತಕ್ಷಣ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಕೊಡಗಿಗೆ ಬಂದು ಅನೇಕ ಕುಟುಂಬಗಳಿಗೆ ಸಹಾಯ ಮಾಡುತ್ತಾರೆ. ದಾರಿ ಬದಿಯಲ್ಲಿರುವ ಕಾರ್ಮಿಕರ ಕಷ್ಟವನ್ನು ನೋಡಲಾಗದೆ ರಶ್ಮಿಕಾ ಅವರು ಕಾರ್ಮಿಕರಿಗೆ ಆಹಾರ ವಿತರಣೆಯನ್ನು ಮಾಡುತ್ತಾರೆ. ಅಲ್ಲದೆ ಜಲ ಮಾಲಿನ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಕೋರೋನ ವಾರಿಯರ್ಸ್ ಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಕೊಡಗಿನಲ್ಲಿ ಹೈಟೆಕ್ ಆಸ್ಪತ್ರೆಯ ಕೊರತೆ ಇರುವುದರಿಂದ ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯುತ್ತಾರೆ, ಹೈಟೆಕ್ ಆಸ್ಪತ್ರೆಯನ್ನು ಮಂಜೂರಿ ಮಾಡಿಸುತ್ತಾರೆ.

ಅವರು ಕೂರ್ಗ್ ಶಾಲೆಯ ಹಾಸ್ಟೆಲ್ ನಲ್ಲಿ ಇದ್ದು ಓದಿದ್ದಾರೆ ಅಲ್ಲಿ ಇಂಗ್ಲಿಷ್ ಮಾತನಾಡುವುದು ಕಡ್ಡಾಯವಾಗಿರುತ್ತದೆ ಮತ್ತು ಮನೆಯಲ್ಲಿ ಸಹ ಇಂಗ್ಲಿಷ್ ಮಾತನಾಡುವುದು ಹೆಚ್ಚಾಗಿರುವುದರಿಂದ ಅವರಿಗೆ ಕನ್ನಡ ಮಾತನಾಡಲು ಕಷ್ಟವಾಗುತ್ತದೆ. ಸಿನಿಮಾರಂಗಕ್ಕೆ ಬಂದ ನಂತರ ಕನ್ನಡ ಕಲಿಯಲು ಪ್ರಾರಂಭಿಸುತ್ತಾರೆ. ಮಾಧ್ಯಮದ ಮುಂದೆ, ಜನರ ಮುಂದೆ ಮಾತನಾಡುವಾಗ ಕನ್ನಡ ತಪ್ಪಾಗಿ ಮತನಾಡಿಬಿಟ್ಟರೆ ಎಂಬ ಭಯದಿಂದ ಅವರು ಕನ್ನಡವನ್ನು ಹೆಚ್ಚು ಮಾತನಾಡುವುದಿಲ್ಲ. ರಶ್ಮಿಕಾ ಅವರಿಗೆ ಅನೇಕ ಅವಾರ್ಡ್ ಗಳು ದೊರೆತಿದೆ. ಕಿರಿಕ್ ಪಾರ್ಟಿ ಸಿನಿಮಾದ ನಟನೆಗೆ ಸೈಮಾ ಅವಾರ್ಡ್ ದೊರೆತಿದೆ, ಜೀ ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ, ಜಿ ಸಿನಿ ಅವಾರ್ಡ್, ಫಿಲಂ ಫೇರ್ ಅವಾರ್ಡ್ ಮುಂತಾದ ಅವಾರ್ಡ್ ಗಳು ದೊರೆತಿದೆ. ತಮ್ಮ ಅದ್ಬುತ ನಟನೆಯಿಂದ ಚಿಕ್ಕವಯಸ್ಸಿನಲ್ಲೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜೀವನದಲ್ಲಿ ಯಾವುದೆ ಸಮಸ್ಯೆ ಬಂದರೂ ನಿಮ್ಮ ನಗುವನ್ನು ಕಳೆದುಕೊಳ್ಳಬೇಡಿ, ನಿಮ್ಮ ಕೆಲಸವನ್ನು ನಗುಮುಖದಿಂದ ಮತ್ತು ಪರಿಶ್ರಮದಿಂದ ಮಾಡಿ ಆಗ ಯಶಸ್ಸು ಲಭಿಸುತ್ತದೆ ನಾನು ಕೂಡ ಅದನ್ನೆ ನಂಬಿದ್ದೇನೆ ಎಂದು ರಶ್ಮಿಕಾ ಅವರು ಹೇಳುತ್ತಾರೆ. ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಮಾಡುತ್ತಾಳೆ ಎಂಬುದಕ್ಕೆ ರಶ್ಮಿಕಾ ಮಂದಣ್ಣ ಅವರು ಉತ್ತಮ ಉದಾಹರಣೆಯಾಗಿದ್ದಾರೆ.

Leave A Reply

Your email address will not be published.