ನಟ ರಮೇಶ್ ಅರವಿಂದ ಅವರ ಮಗಳು ಅಳಿಯ ಹೇಗಿದ್ದಾರೆ ನೋಡಿ

0 1

ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕ ಹಸೆಮಣೆ ಏರಲು ಸಜ್ಜಾಗಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಅವರನ್ನು ಕೈ ಹಿಡಿಯಲಿರುವ ಹುಡುಗ ಯಾರು ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದ್ದು , ನಿಹಾರಿಕಾ ವಿವಾಹವು ಅಕ್ಷಯ್‌ ಎಂಬ ವರನೊಂದಿಗೆ ನೆರವೇರಲಿದೆ. ಈ ಶುಭ ಸಮಾರಂಭಕ್ಕಾಗಿ ಡಿಸೆಂಬರ್ 28ರಂದು ದಿನಾಂಕ ನಿಗದಿ ಮಾಡಲಾಗಿದೆ. ಮಗಳ ಮದುವೆ ತಯಾರಿಯಲ್ಲಿ ರಮೇಶ್‌ ಈಗ ಬ್ಯುಸಿ ಆಗಿದ್ದಾರೆ. ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಅಕ್ಷಯ್‌ ಅವರು ಸಿನಿಮಾ ಕ್ಷೇತ್ರದವರಲ್ಲ. ನಿಹಾರಿಕಾ ಮತ್ತು ಅಕ್ಷಯ್‌ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡೂ ಕುಟುಂಬದವರು ಸೇರಿ ಈ ಮದುವೆಯನ್ನು ನಿಶ್ಚಯಿಸಿದ್ದಾರೆ.

ಈ ವರ್ಷ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಅನೇಕ ಕಲಾವಿದರ ಮನೆಯಲ್ಲಿ ಮದುವೆ ಸಂಭ್ರಮ ನೆರವೇರಿದೆ. ಚಂದನ್ ನಿವೇದಿತಾ, ನಿಖಿಲ್ ರೇವತಿ, ಮಯೂರಿ ಅರುಣ್ , ಶಿಲ್ಪಾ ದರ್ಶಕ್ ಸೇರಿದಂತೆ ಅನೇಕ ಕಲಾವಿದರು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಕೊರೊನಾ ಹಾವಳಿ‌ ನಡುವೆ ಇದೀಗ ಮತ್ತೊಂದು ಕನ್ನಡದ ಸ್ಟಾರ್ ಕುಟುಂಬದ ಮದುವೆ ನೆರವೇರುತ್ತಿದೆ. ಕನ್ನಡ ಹಾಗೂ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ನಟ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಅವರ ಮದುವೆ ನಿಶ್ಚಯವಾಗಿದ್ದು ಇದೇ ಡಿಸೆಂಬರ್ ಇಪ್ಪತ್ತೆಂಟರಂದು ಮದುವೆ ಸಮಾರಂಭ ನೆರವೇರಲಿದೆ.

ಕೋವಿಡ್‌-19 ನಿಯಮಾನುಸಾರ ಮದುವೆ ಕೊರೊನಾ ವೈರಸ್‌ ಹಾವಳಿ ಇನ್ನೂ ಕಡಿಮೆ ಆಗಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ ಕೋವಿಡ್‌-19 ನಿಯಮಗಳ ಅನುಸಾರ ಮದುವೆ ಮಾಡಲು ವಧು-ವರನ ಕುಟುಂಬದವರು ನಿರ್ಧರಿಸಿದ್ದಾರೆ. ಹಾಗಾಗಿ ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಯಾರಿಗೆಲ್ಲ ಆಹ್ವಾನ ಹೋಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಈ ವರ್ಷ ಸಾಲು ಸಾಲು ಕಲಾವಿದರು ಹಸೆಮಣೆ ಏರಿದ್ದು ಕೊರೊನಾ ಕಾರಣದಿಂದಾಗಿ ಬಹುತೇಕ ಎಲ್ಲಾ ಮದುವೆ ಸಮಾರಂಭಗಳು ಕುಟುಂಬ ಹಾಗೂ ಸ್ನೇಹಿತರ ನಡುವೆ ಸರಳವಾಗಿ ನೆರವೇರಿತು. ಇನ್ನು ಕೆಲ ಮದುವೆಗಳು ದೇವಸ್ಥಾನದಲ್ಲಿ ನೆರವೇರಿದರೆ ಅದಾಗಲೇ ಈ ವರ್ಷ ಮದುವೆಯಾದ ಸ್ಟಾರ್ ಕಪಲ್ ಗಳು ಮಗುವಿನ ಸಿಹಿ ಸುದ್ದಿಯನ್ನೂ ಸಹ ಹಂಚಿಕೊಂಡಿದ್ದಾರೆ. ಇನ್ನೂ ಇದೀಗ ಮತ್ತೊಂದು ಸ್ಟಾರ್ ಕುಟುಂಬದ ಮದುವೆ ಇದೇ ವರ್ಷ ನೆರವೇರಲಿದ್ದು ಇದೂ ಸಹ ಸರಖ ವಿವಾಹವಾಗಿರಲಿದೆ.

ನಟ ರಮೇಶ್ ಅರವಿಂದ್ ಅವರು ತಮ್ಮ ಮಗಳು ನಿಹಾರಿಕಾ ಅವರ ಮದುವೆ ತಯಾರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು ಮದುವೆಗೆ ಇನ್ನು ಎರಡು ದಿನವಷ್ಟೇ ಬಾಕಿ ಉಳಿದಿದೆ. ಸದ್ಯ ಚೆನ್ನೈ ನಲ್ಲಿ ನೆಲೆಸಿರುವ ರಮೇಶ್ ಅರವಿಂದ್ ಅವರು ಅಲ್ಲಿಯೇ ಮಗಳ ಮದುವೆಯನ್ನು ನೆರವೇರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಕ್ಷಯ್ ಎಂಬ ಹುಡುಗನ ಜೊತೆ ನಿಹಾರಿಕ ನೂತನ ಜೀವನಕ್ಕೆ ಕಾಲಿಡುತ್ತಿದ್ದು ಮದುವೆಗೆ ಸಕಲವೂ ಸಜ್ಜಾಗುತ್ತಿದೆ. ಇನ್ನೂ ಈ ಅಕ್ಷಯ್ ಯಾರು? ಯಾರ ಜೊತೆ ರಮೇಶ್ ಅವರ ಮಗಳ ಮದುವೆ ನೆರವೇರುತ್ತಿದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.‌ ಅಕ್ಷಯ್ ಸಿನಿಮಾ ಇಂಡಸ್ಟ್ರಿ ಗೆ ಸಂಬಂಧ ಪಟ್ಟವರು ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ನಿಜ ಬೇರೆಯೇ ಇದೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಅವರು ಮದುವೆ ಆಗುತ್ತಿರುವ ಹುಡುಗ ಅಕ್ಷಯ್‌ ಅವರು ಸಿನಿಮಾ ಕ್ಷೇತ್ರದವರಲ್ಲ. ನಿಹಾರಿಕಾ ಮತ್ತು ಅಕ್ಷಯ್‌ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.‌ ಆದರೆ ಮದುವೆಯನ್ನು ಎರಡೂ ಕುಟುಂಬದವರು ಸೇರಿ ಮಾತನಾಡಿ ಮದುವೆ ನಿಶ್ಚಯಿಸಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಕಾರಣದಿಂದಾಗಿ ರಮೇಶ್ ಅವರ ಮಗಳು ನಿಹಾರಿಕಾ ಅವರ ಮದುವೆ ಸಮಾರಂಭ ಸರಳವಾಗಿ ನೆರವೇರುತ್ತಿದ್ದು ನಿಹಾರಿಕಾ ಹಾಗೂ ಅಕ್ಷಯ್ ಕುಟುಂಬದವರು ಸೇರಿ ಈ ನಿರ್ಧಾರಕ್ಕೆ ಬಂದಿದ್ದು ಇದೇ ಡಿಸೆಂಬರ್ ನಲ್ಲಿ ಮದುವೆ ನೆರವೇರಿಸಲು ನಿರ್ಧರಿಸಿದ್ದು ಮದುವೆಗೆ ಎಲ್ಲಾ ಸಿದ್ದತೆಗಳು ಬರದಿಂದ ಸಾಗಿದೆ. ಮದುವೆಗೆ ಕುಟುಂಬದವರು ಹಾಗೂ ಕೆಲವೇ ಕೆಲ ಸಿನಿಮಾ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವಿಚಾರ ತಿಳಿದು ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಹಾರಿಕಾ ಹಾಗೂ ಅಕ್ಷಯ್ ಕಲ್ಯಾಣಕ್ಕೆ ಶುಭ ಹಾರೈಸಿದ್ದಾರೆ.

Leave A Reply

Your email address will not be published.