ನಟ ದೇವರಾಜ್ ಹಾಗು ಕುಟುಂಬದ ದೀಪಾವಳಿ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ, ಇಲ್ಲಿದೆ ನೋಡಿ ವೀಡಿಯೊ

0 4

ಸ್ನೇಹಿತರೆ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಮೊದಲಿಗೆ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ ನಂತರ ನಾಯಕನಾಗಿ ಕೂಡ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಅವರ ಮಕ್ಕಳಾಗಿರುವ ಪ್ರಜ್ವಲ್ ದೇವರಾಜ್ ಹಾಗು ಪ್ರಣಂ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಯುವ ಉದಯೋನ್ಮುಖ ನಟರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಜ್ವಲ್ ದೇವರಾಜ್ ಅವರು ಕನ್ನಡ ಚಿತ್ರರಂಗದ ಗಮನಾರ್ಹ ಹಾಗೂ ಪಂಚಮಟ್ಟಿಗೆ ಹೆಸರು ಮಾಡಿರುವ ನಾಯಕನಟರಲ್ಲಿ ಮೇಲಿನ ಪಂಕ್ತಿಯಲ್ಲಿ ಕಾಣ ಸಿಗುತ್ತಾರೆ. ಆರಂಭದಲ್ಲಿ ಭರ್ಜರಿಯಾಗಿ ತಮ್ಮ ಸಿನಿಮಾ ಕರಿಯರ್ ಅನ್ನು ಪ್ರಾರಂಭಿಸಿದ ಪ್ರಜ್ವಲ್ ದೇವರಾಜ್ ನಂತರದ ದಿನಗಳಲ್ಲಿ ಕೊಂಚಮಟ್ಟಿಗೆ ಮಂಕಾಗುತ್ತಾರೆ.

ಅದಾದ ನಂತರ ಇತ್ತೀಚಿನ ದಿನಗಳಲ್ಲಿ ಜಂಟಲ್ ಮ್ಯಾನ್ ಹಾಗೂ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾಗಳ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರೇಕ್ಷಕರಿಗೆ ಸಾಬೀತುಪಡಿಸುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯ ರಾಗಿರುವ ಪ್ರಜ್ವಲ್ ದೇವರಾಜ್ ಹಾಗು ಅವರ ಪತ್ನಿ ರಾಗಿಣಿ ಇಬ್ಬರೂ ಕೂಡ ನೆಟ್ಟಿಗರ ನೆಚ್ಚಿನ ಜೋಡಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಈಗ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿದಂತೆ ಅವರ ಇಡೀ ಕುಟುಂಬ ದೀಪಾವಳಿ ಹಬ್ಬ ಆಚರಣೆ ಮಾಡಿರುವ ರೀತಿ ಎಲ್ಲರ ಮೆಚ್ಚುಗೆ ಒಳಗಾಗಿದೆ.

ಹೌದು ಮಿತ್ರರೇ, ದೇವರಾಜ್ ಕುಟುಂಬ ಸಂತೋಷದಿಂದ ಹಾಗೂ ಶಾಸ್ತ್ರೋಕ್ತವಾಗಿ ದೀಪ ಹಚ್ಚಿ ಪಟಾಕಿ ಹಚ್ಚುವ ಮೂಲಕ ಸಂಭ್ರಮ ಹಾಗೂ ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮುಖಾಂತರ ವೈರಲ್ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ನೀವು ಕೂಡ ದೇವರಾಜ್ ಹಾಗೂ ಕುಟುಂಬದ ದೀಪಾವಳಿ ಹಬ್ಬದ ಆಚರಣೆಯ ಸಂಭ್ರಮದ ಕ್ಷಣಗಳ ವಿಡಿಯೋವನ್ನು ನೋಡಬಹುದಾಗಿದೆ. video credit for chandanavana

Leave A Reply

Your email address will not be published.