ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ, ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಚಿತ್ರಗಳು ಅದ್ದೂರಿ ಸಾಹಸ ದೃಶ್ಯಗಳಿಗೆ ಹೆಸರಾಗಿವೆ. AK 47 ಚಿತ್ರದಲ್ಲಿ ಸುಮಾರು 1.75 ಕೋಟಿ ವೆಚ್ಚದಲ್ಲಿ ಚೇಸಿಂಗ್ ದೃಶ್ಯ ಚಿತ್ರೀಕರಿಸಿದ್ದರು. ಡಕೋಟ ಎಕ್ಸ್ಪ್ರೆಸ್ ಚಿತ್ರದಿಂದ ನಟನೆಗೆ ಇಳಿದರು. ನಟಿ ರೇಖಾ ದಾಸ್ರನ್ನು ವಿವಾಹವಾಗಿದ್ದ ಓಂ ಪ್ರಕಾಶ್ 2002 ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು.2012 ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ.ಇವರ ಪುತ್ರಿ ಶ್ರಾವ್ಯ ಕೂಡ ನಟಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಲು ಪ್ರತಿಭೆ ಇರಬೇಕು ಹಾಗೂ ಭಾಷೆ ಬರಬೇಕು. ಕನ್ನಡಾಭಿಮಾನ ತೋರುವ ಅದೆಷ್ಟೋ ಕಲಾವಿದರು ಮೂಲತಃ ಕರ್ನಾಟಕದವರಲ್ಲ ಆದರೆ ಅವರಲ್ಲಿರುವ ನಟನಾ ಪ್ರತಿಭೆ ಹಾಗೂ ಭಾಷೆ ಮೇಲಿನ ಗೌರವದಿಂದ ಕನ್ನಡ ಸಿನಿಪ್ರಿಯರು ಆ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ, ಅವರ ಸಿನಿಮಾಗಳನ್ನು ನೋಡುವ ಮೂಲಕ ಯಶಸ್ವಿಯಾಗುವಂತೆ ಮಾಡಿದ್ದಾರೆ. ಅಂತಹ ಕಲಾವಿದರಲ್ಲಿ ಒಬ್ಬರು ನಟಿ ರೇಖಾ ದಾಸ್. ಕನ್ನಡದಲ್ಲಿ ಕಾಮಿಡಿ ಎಂದರೆ ನೆನಪಾಗುವ ನಟಿಯರಲ್ಲಿ ಶ್ರೇಷ್ಠರು ನಟಿ ಉಮಾಶ್ರೀ ಸಿನಿಮಾ, ನಾಟಕ, ರಾಜಕಾರಣ ಎಲ್ಲದರಲ್ಲೂ ಸೈ ಎನಿಸಿಕೊಂಡವರು ಉಮಾಶ್ರೀ. ಉಮಾಶ್ರೀ ಅವರ ನಂತರ ಹೆಚ್ಚು ಜನಪ್ರಿಯತೆ ಗಳಿಸಿದ ಮತ್ತೊಬ್ಬ ನಟಿ ರೇಖಾ ದಾಸ್.
ರೇಖಾ ದಾಸ್ ಮೂಲತಃ ಕನ್ನಡತಿಯಲ್ಲ ಆಕೆ ನೇಪಾಳದವರು. ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದವರು. ಇಲ್ಲಿ ನೆಲೆಯೂರಲು ರೇಖಾ ದಾಸ್ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಟನೆಯಲ್ಲಿ ಆಸಕ್ತಿಯಿದ್ದ ಕಾರಣ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇವರಿಗೆ ಸುಲಭವಾಗಿ ನಟನೆಯ ಅವಕಾಶಗಳು ಸಿಗಲಿಲ್ಲ, ಸಾಕಷ್ಟು ಅವಮಾನ ನೋವುಗಳನ್ನು ಅನುಭವಿಸಿದ್ದರು ರೇಖಾ ದಾಸ್. ಅವಮಾನ, ಏಳು ಬೀಳುಗಳನ್ನು ಎದುರಿಸಿದ ನಂತರವೇ ಒಂದು ಸ್ಥಾನಕ್ಕೆ ಬಂದರು.
ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಲೇ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಹೆಣ್ಣು ಮಗು ಹುಟ್ಟಿತು. ಆ ಮಗುವೇ ನಟಿ ಶ್ರಾವ್ಯ. ಆದರೆ ಮಗು ಹುಟ್ಟಿ ಒಂದು ವರ್ಷದ ನಂತರ ಓಂ ಪ್ರಕಾಶ್ ರಾವ್, ರೇಖಾ ದಾಸ್ ರಿಗೆ ಡೈವರ್ಸ್ ನೀಡಿದರು. ಓಂ ಪ್ರಕಾಶ್ ರಾವ್ ವ್ಯಕ್ತಿತ್ವದಲ್ಲಿ ಬಹಳ ಕೋಪಿಷ್ಟರು ಜೊತೆಗೆ ಹುಡುಗಿಯರ ವೀಕ್ಸ್ನೆಸ್ ಸಹ ಇದ್ದ ಕಾರಣ, ವೈಯಕ್ತಿಕ ಕಾರಣಗಳನ್ನು ನೀಡಿ, ರೇಖಾ ದಾಸ್ ರನ್ನು ನಡುನೀರಿನಲ್ಲಿ ಕೈಬಿಟ್ಟು, ಮತ್ತೊಬ್ಬರನ್ನು ಮದುವೆಯಾದರು.
ಮಗುವನ್ನು ಬೆಳೆಸಲು, ಆಕೆಗೆ ವಿದ್ಯಾಭ್ಯಾಸ ಕೊಡಿಸಲು, ತಮ್ಮದೇ ಆದ ಸ್ವಂತ ಜೀವನ ರೂಪಿಸಿಕೊಳ್ಳಲು ರೇಖಾ ದಾಸ್ ಅವರು ಪಟ್ಟ ಕಷ್ಟ ಹೇಳಲಸಾಧ್ಯ. ಕನ್ನಡ ಚಿತ್ರರಂಗದಲ್ಲಿ ಸಿಕ್ಕ ಎಲ್ಲಾ ಪಾತ್ರಗಳಲ್ಲಿಯೂ ನಟಿಸಿ ಬಂದ ಹಣದಿಂದ ಮಗಳನ್ನು ಬೆಳೆಸಿದರು. ಈಗ ರೇಖಾ ದಾಸ್ ಅವರ ಮಗಳು ಶ್ರಾವ್ಯ ಸಹ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ದುರಾದೃಷ್ಟವೆಂಬಂತೆ, ಈಕೆ ನೋಡಲು ಚೆನ್ನಾಗಿದ್ದು, ಪ್ರತಿಭೆ ಇದ್ದರೂ ಸಹ ಶ್ರಾವ್ಯ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಯ’ಶಸ್ಸು ನೀಡಿಲ್ಲ. ಮೋಸ ಮಾಡಿದ ತಂದೆ ಎಲ್ಲೋ ಒಂದು ಕಡೆ ನೆಮ್ಮದಿಯಾಗಿದ್ದರೆ ಈ ತಾಯಿ ಮಗಳ ಜೀವನ ಇನ್ನು ಸಹ ಕಷ್ಟದಲ್ಲಿದೆ. ಮುಂದಾದರೂ ಈ ತಾಯಿ ಮಗಳ ಜೀವನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸೋಣ.