ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಅವರ ಮಗಳಾಗಿದ್ದರೂ ಕೂಡ ನಾಯಕಿಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಮೇಘನ ರಾಜ್ ಅವರು ಪಡೆದುಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇಬ್ಬರು ದಂಪತಿಗಳು ಕೂಡ ತಮ್ಮ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಹೊಂದಿದ್ದರು ಆದರೆ ಅವುಗಳನ್ನು ಒಟ್ಟಿಗೆ ಸೇರಿಕೊಂಡು ಮನಸ್ಸು ಮಾಡುವ ಮುನ್ನವೇ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ನಮ್ಮನ್ನೆಲ್ಲ ಆಗಲಿ ಹೋಗುತ್ತಾರೆ.

ಕೇವಲ ಎರಡು ವರ್ಷಗಳ ದಾಂಪತ್ಯ ಜೀವನದಲ್ಲಿಯೇ ಜೀವನದ ಪಯಣವನ್ನು ಚಿರು ಸರ್ಜಾ ಅರ್ಧದಲ್ಲಿಯೇ ಮುಗಿಸಿ ಬಾರದ ಲೋಕಕ್ಕೆ ಹೋಗುತ್ತಾರೆ. ಒಬ್ಬಂಟಿಯಾಗಿದ್ದ ಮೇಘನಾ ರಾಜ್ ಅವರ ಜೀವನದಲ್ಲಿ ಆಸೆಯ ಹೊಂಗಿರಣವಾಗಿ ಮೂಡಿ ಬಂದಿದ್ದು ಜೂನಿಯರ್ ಚಿರು ಸರ್ಜಾ. ರಾಯನ್ ರಾಜ್ ಸರ್ಜಾ ಅವರ ಜನನದ ನಂತರವೇ ಮೇಘನಾ ರಾಜ್ ಅವರ ಜೀವನದಲ್ಲಿ ಒಂದು ಜೀವನವನ್ನು ನಡೆಸಬೇಕು ಎನ್ನುವ ಆಸೆ ಹುಟ್ಟಿಕೊಂಡಿದ್ದು ಎಂದು ಹೇಳಿದರೆ ತಪ್ಪಾಗಲಾರದು.

ಚಿರು ಸರ್ಜಾ ಅವರ ಮರಣದ ನಂತರ ಸಂಪೂರ್ಣವಾಗಿ ಚಿತ್ರರಂಗ ತೊರೆದಿದ್ದ ಮೇಘನಾ ರಾಜ್ ಅವರು ಮತ್ತೆ ತಮ್ಮ ಮಗನಿಗಾಗಿ ಉತ್ತಮ ಭವಿಷ್ಯವನ್ನು ಕಟ್ಟುವ ನಿಟ್ಟಿನಲ್ಲಿ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಹೌದು ಗೆಳೆಯರೇ ಹಲವಾರು ಸಿನಿಮಾಗಳಲ್ಲಿ ಬಿಜಿ ಆಗುತ್ತಾರೆ ಹಾಗೂ ಜಾಹೀರಾತು ಹಾಗೂ ಬ್ರಾಂಡ್ ಪ್ರಮೋಷನ್ ಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಇನ್ನು ಸತತವಾಗಿ ಕೆಲಸದಿಂದ ಬಿಡುವು ಮಾಡಿಕೊಂಡ ಮೇಘನಾ ರಾಜ್ ಅವರು ಥೈಲ್ಯಾಂಡ್ ಗೆ ತಮ್ಮ ಮಹಿಳಾ ಸ್ನೇಹಿತರ ಜೊತೆಗೆ ಹೋಗಿದ್ದು ಅಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲಾ ಕಡೆ ವೈರಲ್ ಆಗಿದ್ದು ಚರ್ಚೆಯ ಪ್ರಮುಖ ಕೇಂದ್ರ ಬಿಂದುವಾಗಿದೆ. ಈ ಡ್ರೆಸ್ ನಲ್ಲಿ ಮೇಘನಾ ರಾಜ್ ಅವರನ್ನು ನೋಡಿದರೆ ನಿಮಗೆ ಏನು ಅನಿಸ್ತು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!