ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರ ಪತ್ನಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬ ಶೋಕದಲ್ಲಿ ಮುಳುಗಿತ್ತು. ಹೀಗಿರುವಾಗ ಇತ್ತೀಚೆಗೆ ಅಷ್ಟೇ ಎಲ್ಲರನ್ನೂ ಅಗಲಿದ ಚಿರು ಮಗುವಿನ ರೂಪದಲ್ಲಿ ಬಂದು ಎಲ್ಲರ ಮುಖದಲ್ಲಿ ಸಂತಸ ತಂದಿದ್ದಾರೆ. ಸಧ್ಯ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡ ಮೇಘನಾ ರಾಜ್ ಅವರು ಮುಂದೆ ಸಿನಿಮಾದಲ್ಲಿ ನಟನೆ ಮಾಡುತ್ತಾರಾ? ಎನ್ನುವ ಪ್ರಶ್ನೆ ಸಾಕಷ್ಟು ಜನರಿಗೆ ಇದ್ದಿತ್ತು. ಈಗ ಎಲ್ಲರಿಗೂ ಆ ಪ್ರಶ್ನೆಗೆ ಉತ್ತರ ದೊರಕಿದೆ ಎನ್ನಬಹುದು. ಮೇಘನಾ ರಾಜ್ ಅವರು ಮತ್ತೆ ನಟನೆಗೆ ಬರುವುದರ ಕುರಿತಾಗಿ ಏನು ಹೇಳಿದ್ದಾರೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೇಘನಾ ರಾಜ್ ಸರ್ಜಾ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ನಟಿಯರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಗಳ ಮಗಳು. ಕಳೆದ ಕೆಲವು ತಿಂಗಳುಗಳಿಂದ ಬದುಕಿನ ಅತ್ಯಂತ ನೋವಿನ ಕ್ಷಣಗಳನ್ನು ಎದುರಿಸಿದರು.
ಈ ಎಲ್ಲಾ ಘಟನೆಗಳಿಂದ ನಟಿ ಮೇಘನಾ ರಾಜ್ ಸರ್ಜಾ ಅವರು ನಟನೆಗೆ ಮತ್ತೆ ಬರುತ್ತಾರಾ? ಎನ್ನುವ ಅನುಮಾನ ಸಾಕಷ್ಟು ಜನರಿಗೆ ಇದ್ದಿತ್ತು. ಕಳೆದ ತಿಂಗಳು ಜ್ಯೂನಿಯರ್ ಚಿರು ಜನನದ ನಂತರ ಒಂದಷ್ಟು ಚೇತರಿಸಿಕೊಂಡಿರುವ ಮೇಘನಾ ಸಧ್ಯ ಮಗನ ಲಾಲನೆ ಪಾಲನೆಯಲ್ಲಿ ಪತಿಯ ಸಾವಿನ ನೋವನ್ನು ಮರೆಯುವ ಪ್ರಯತ್ನದಲ್ಲಿ ಇದ್ದಾರೆ. ಮಗುವಿನ ಆರೈಕೆಯಲ್ಲಿ ತೊಡಗಿರುವ ನಟಿ ಮೇಘನಾ ರಾಜ್ ಸರ್ಜಾ ಮಗ ದೊಡ್ಡವನಾಗುತ್ತಿದ್ದಂತೆ ಮತ್ತೆ ನಟನೆಗೆ ಹಿಂದಿರುಗುವದಾಗಿ ಹೇಳಿದ್ದಾರೆ. ಇದಕ್ಕೆ ತಮ್ಮ ಪತಿ ಚಿರಂಜೀವಿ ಸರ್ಜಾ ಕಾರಣ ಎಂದಿದ್ದಾರೆ.
ಮೇಘನಾ ರಾಜ್ ಕುಟುಂಬದವರು ಎಲ್ಲಾ ಕಲಾವಿದರೇ ಆಗಿದ್ದು , ಅದರ ಆಧಾರದ ಮೇಲೆ ಮೇಘನಾ ರಾಜ್ ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟನೆ ನನ್ನ ಬದುಕಾಗಿದ್ದು, ಅದು ನನ್ನ ರಕ್ತದಲ್ಲಿ ಇದೆ. ಪತಿ ಚಿರಂಜೀವಿ ಸರ್ಜಾ, ಇಷ್ಟಪಡುವ ವಸ್ತು ಅಥವಾ ಕೆಲಸದಿಂದ ಎಂದೂ ಹಿಂದೆ ಸರಿಯಕೂಡದು ಅಂತ ಹೇಳುತ್ತಿದ್ದರು. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ. ನನ್ನಿಂದ ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಕಲಾ ವೃತ್ತಿಯಲ್ಲಿ ತೊಡಗಿಕೊಂಡಿರುತ್ತೇನೆ.
ಶೀಘ್ರದಲ್ಲೇ ಖಂಡಿತವಾಗಿ ನಟನೆಗೆ ಮರಳುತ್ತೇನೆ ಎಂದು ಮೇಘನಾ ಹೇಳಿಕೊಂಡಿದ್ದಾರೆ. ಯಾವುದೇ ದುರ್ಘಟನೆ ನಡೆದರೂ ನಾವು ಬದುಕಿನಲ್ಲಿ ಮುಂದೆ ಸಾಗಬೇಕು. ತಾನೂ ಸಹ ಈ ಎಲ್ಲಾ ನೋವುಗಳಿಂದ ಆದಷ್ಟು ಬೇಗ ಹೊರಬಂದು ಸಿನಿಮಾದಲ್ಲಿ ತೊಡಗಿಕೊಳ್ಳುತ್ತೇನೆ. ಬೇರೆ ಏನೇ ಮಾಡುವುದು ಅಂದರೂ ಪ್ರೊಡಕ್ಷನ್ ಅಥವಾ ಡೈರೆಕ್ಷನ್ ಬಗ್ಗೆ ಯೋಚಿಸಬಹುದು ಅಷ್ಟೇ. ಆದರೆ ಸಿನಿಮಾ ರಂಗ ನನ್ನ ಜೀವಾಳ ಆಗಿದ್ದು ನಾನು ಮತ್ತೆ ನಟನೆಗೆ ಹಿಂದಿರುಗುತ್ತೇನೆ , ನನ್ನ ಕೊನೆಯ ಉಸಿರು ಇರುವವರೆಗೂ ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎನ್ನುವ ಮೂಲಕ ಸಿನಿಮಾ ರಂಗವೇ ನನ್ನ ಆಯ್ಕೆ ಎನ್ನುವುದನ್ನು ಮೇಘನಾ ರಾಜ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಮೇಘನಾ ರಾಜ್ ಕನ್ನಡದ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದರೂ ಸಹ ಮಲಯಾಳಂ ಸೇರಿ ಬೇರೆ ಭಾಷೆಗಳಲ್ಲಿ ನಟನೆ ಮಾಡಿದ್ದೆ ಹೆಚ್ಚು. ಈಗಾಗಲೇ ಕನ್ನಡದಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಗೆ ಕಾದಿವೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಸಹ ಮೇಘನಾ ನಟನೆ ಮಾಡಿದ್ದರು. ಮೇಘನಾ ತನ್ನ ಮಗುವನ್ನು ಹೇಗೆ. ಎಳೆಸುತ್ತೇನೆ? ಎನ್ನುವುದರ ಕುರಿತಾಗಿಯೂ ಸಹ ಕೆಲವು ಸಾಲುಗಳನ್ನು ಬರೆದುಕೊಂಡು ಶೇರ್ ಮಾಡಿದ್ದಾರೆ.
ಭವಿಷ್ಯದಲ್ಲಿ ಮಗನನ್ನು ಅತ್ಯುತ್ತಮ ಗುಣವುಳ್ಳ ವ್ಯಕ್ತಿಯಾಗಿ ಬೆಳೆಸುತ್ತೇನೆ ಎಂದು ಮೇಘನಾ ಬರೆದುಕೊಂಡಿದ್ದಾರೆ. ಸದ್ಯ ಮೇಘನಾ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಕೊರೊನಾ ಸೋಂಕು ತಗುಲಿತ್ತು. ಜೋಕುಮಾರಸ್ವಾಮಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಮೇಘನಾ ರಾಜ್ ಬಣ್ಣದ ಲೋಕ ಪ್ರವೇಶಿಸಿದ್ದರು.